ಮನುಷ್ಯನಿಗೆ ಬರುವ ಸಿರಿ ಸಂಪತ್ತು ಶಾಶ್ವತವಲ್ಲ. ಸಿರಿ ಬಂದಾಗ ದೇವರು ಧರ್ಮವನ್ನು ಮರೆಯದಿರಿ : ರಂಭಾಪುರಿ ಶ್ರೀ ಜಗದ್ಗುರುಗಳು

Jun 22, 2025 - 09:44
 0
ಮನುಷ್ಯನಿಗೆ ಬರುವ ಸಿರಿ ಸಂಪತ್ತು ಶಾಶ್ವತವಲ್ಲ. ಸಿರಿ ಬಂದಾಗ ದೇವರು ಧರ್ಮವನ್ನು ಮರೆಯದಿರಿ : ರಂಭಾಪುರಿ ಶ್ರೀ ಜಗದ್ಗುರುಗಳು
ಹೊರ್ತಿ: ಸಮೀಪದ ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಸುಸಲಾದಿ ಗ್ರಾಮದ(ಕಾಶೇಕರ ವಸ್ತಿಯ)ಲ್ಲಿ ನೂತನವಾಗಿ ನಿರ್ಮಿಸಿದ ನೂತನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಉದ್ಘಾಟನೆ ಹಾಗೂ ಲಿಂಗ ಪ್ರತಿಷ್ಠಾಪನೆ, ಕಳಸಾರೋಹಣ ಜನಜಾಗ್ರತಿ ಮತ್ತು ಧರ್ಮ ಜಾಗ್ರತಿ ಕಾರ್ಯಕ್ರಮವನ್ನು ಶುಕ್ರವಾರ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶ್ರೀಗಳು ಉದ್ಘಾಟಿಸಿದರು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಹೊರ್ತಿ: 'ಮನುಷ್ಯನಿಗೆ ಬರುವ ಸಿರಿ ಸಂಪತ್ತು ಶಾಶ್ವತವಲ್ಲ. ಆಧ್ಯಾತ್ಮ ಜ್ಞಾನವೊಂದೇ ನಿಜವಾದ ಸಂಪತ್ತು. ಸಿರಿ ಬಂದಾಗ ದೇವರು ಮತ್ತು ಧರ್ಮವನ್ನು ಮರೆಯಬಾರದೆಂದು'ಬಾಳೆಹೊನ್ನೂರು ಶ್ರೀ ಮದ್ ರಂಭಾಪುರಿ ವೀರಸೋಮೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.


ಸಮೀಪದ ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಸುಸಲಾದಿ ಗ್ರಾಮದ(ಕಾಶೇಕರ ವಸ್ತಿಯ) ಲ್ಲಿ ನೂತನಾವಾಗಿ ನಿರ್ಮಿಸಿದ ನೂತನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಉದ್ಘಾಟನೆ ಹಾಗೂ ಲಿಂಗ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದ ಪ್ರಯುಕ್ತ ಶುಕ್ರವಾರ ಜರುಗಿದ ಜನಜಾಗ್ರತಿ ಮತ್ತು ಧರ್ಮ ಜಾಗ್ರತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.


'ದೇವರು ಕೊಟ್ಟ ಕೊಡುಗೆ ಬೇರಾರು ಕೊಡಲು ಸಾಧ್ಯವಿಲ್ಲ. ನಿಂತ ನೆಲ, ಕುಡಿಯುವ ನೀರು, ಬೀಸುವ ಗಾಳಿ ದೇವರು ಕೊಟ್ಟ ಅಮೂಲ್ಯವರ. ಉದಾತ್ತ ಮಾನವ ಜೀವನದಲ್ಲಿ ಒಂದಿಷ್ಟಾದರೂ ಶಿವಜ್ಞಾನ ಸಂಪಾದಿಸಿಕೊಳ್ಳದಿದ್ದರೆ ಮತ್ತು ಗುರು ಕಾರುಣ್ಯ ಪಡೆಯದೇ ಹೋದರೆ ಜೀವನ ವ್ಯರ್ಥವಾಗುತ್ತದೆ. ದೇವರ ಮೇಲಿನ ನಂಬಿಗೆ ಮತ್ತು ವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳಬಾರದು. ಜೀವನದ ವಿಕಾಸಕ್ಕೆ ತಂದ ನೀತಿ ನಿಯತ್ತುಗಳ ಪರಿಪಾಲನೆಯೇ ನಿಜವಾದ ಧರ್ಮ. ಮಾನವ ಜೀವನದ ಶ್ರೇಯಸ್ಸಿಗಾಗಿ ಜಗದ್ಗುರು ಶ್ರೀ ರೇಣುಕಾಚಾರ್ಯರು ದಶವಿಧ ಸೂತ್ರಗಳನ್ನು ಬೋಧಿಸಿದ್ದಾರೆ. ಶರಣರು ಸಪ್ತ ಸೂತ್ರಗಳನ್ನು ಹೇಳಿದ್ದಾರೆ. ದೇವರು ಮತ್ತು ಧರ್ಮವನ್ನು ತೋರಿಸುವಾತನೇ ನಿಜವಾದ ಗುರು. ಪರಶಿವನ ಸಾಕಾರ ಇನ್ನೊಂದು ರೂಪವೇ ಗುರು.  ಅಜ್ಞಾನ ಕಳೆದು ಜ್ಞಾನ ಜ್ಯೋತಿ ಬೆಳಗಿಸುವ ಶಕ್ತಿ ಶ್ರೀ ಗುರುವಿಗೆ ಇದೆ. ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸುಂದರವಾಗಿ ಕಟ್ಟಿ, ಉದ್ಘಾಟನೆ ಹಾಗೂ ಲಿಂಗ ಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಧರ್ಮ ದೀಪೋತ್ಸವ ಸಂಯೋಜಿಸಿರುವುದು ನಮಗೆ ಅತ್ಯಂತ ಸಂತೋಷವನ್ನು ಉಂಟು ಮಾಡಿದೆ' ಎಂದು ನುಡಿದರು.
ದೇವಸ್ಥಾನ ಉದ್ಘಾಟನೆ ಪ್ರಯುಕ್ತ 5 ದಿನಗಳ ಕಾಲ ಜೇರಟಗಿಯ ವೇದಮೂರ್ತಿ ಮಡಿವಾಳೇಶ್ವರ ಶಾಸ್ತ್ರಿಯವರಿಂದ ಆಧ್ಯಾತ್ಮಿಕ ಪ್ರವಚನ ನಡೆಸಿಒಟ್ಟರು. ಕಾರ್ಯಕ್ರಮಕ್ಕಾಗಮಿಸಿದ ಸಕಲ ಸದ್ಭಕ್ತರಿಗೂ ಅನ್ನ ದಾಸೋಹ ಜರುಗಿತು.


ತಡವಲಗಾ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಜಗಜೇವಣಿ ಮುಪ್ಪಿನಾರ್ಯ ಶಿವಾಚಾರ್ಯರು, ಗುಡ್ಡಾಪುರದ ಗುರುಪಾದೇಶ್ವರ ಶಿವಾಚಾರ್ಯರು,  ಭಾರತ ಸರ್ಕಾರ ಸಿಮೆಂಟ್ ಬೋರ್ಡ ಸಂಚಾಲಕ ಡಾ. ರವೀಂದ್ರ ಅರಳಿ, ಮಾಜಿ ಶಾಸಕ ವಿಕ್ರಮಸಿಂಗ ಸಾವಂತ, ಸಂಜಯ ನಾನಾ ಶಿಂಧೆ, ಕಾಶಿನಾಥ ಗಿಡವಿರ, ಸಂತೋಷ ಪಾಟೀಲ, ಮಲಕು ಸಾವುಕಾರ, ಎಂ ಆರ್.ಪಾಟೀಲ, ಚನ್ನಪ್ಪಾ ಹೊರ್ತಿಕರ, ಬಸವರಾಜ ಹಿರೇಮಠ, ಸಂಜಯ ತೇಲಿ, ಅನೀಲ ಪಾಟೀಲ, ಪರಶುರಾಮ ಟೆಂಗಳೆ, ಅಮಸಿದ್ದ ಸಾವುಕಾರ, ಹಣಮಂತ ಮಾಳಿ, ಸದಾನಂದ ಪಾಟೀಲ, ರಾಜೇಂದ್ರ ಪಾಟೀಲ, ಸದಾಶಿವ ಹುನ್ನೂರ, ಸಿದ್ದಪ್ಪ ಕಾಸೇಕರ, ಭೀಮರಾಯ ಕೊಕಟನೂರ, ರಮೇಶ್ ಮಶ್ಯಾಳ, ಪ್ರವೀಣ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಮಹಾದೇವ ಕಾಶೇಕರ, ರಾಮಗೊಂಡ ಕಾಶೇಕರ, ಕಿಟ್ಟಪ್ಪ ಕಾಶೇಕರ ಹಾಗೂ ಹಲವಾರು ಗಣ್ಯರು, ಮತ್ತು ಸುಸಲಾದಿ ಗ್ರಾಮ ಸೇರಿದಂತೆ ಸುತ್ತಲೀನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು.


ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ 'ಮನುಷ್ಯ ಯಂತ್ರದಂತೆ ದುಡಿದರೂ ಮನಸ್ಸಿಗೆ ಶಾಂತಿಯಿಲ್ಲ. ಬೆಳೆಯುವ ಮಕ್ಕಳಿಗೆ ಭೌತಿಕ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುವ ಕೆಲಸ ಮಾಡಬೇಕಾಗಿದೆ. ಸುಸಲಾದಿ ಗ್ರಾಮದ ಬಹು ದಿನಗಳ ಸಂಕಲ್ಪ ಶ್ರೀ ರಂಭಾಪುರಿ ಶ್ರೀ(ಜಗದ್ಗುರು)ಗಳ ಶುಭಾಗಮನದೊಂದಿಗೆ ಪೂರ್ಣಗೊಂಡಿದೆ. ಆಗಾಗ ಇಂಥ ಧರ್ಮ ಕಾರ್ಯಗಳು ನಡೆದುಕೊಂಡು ಬರಬೇಕು' ಎಂದು ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಆಶೀರ್ವಚನದಲ್ಲಿ ಹೇಳಿದರು.

'ದೇವಸ್ಥಾನಗಳು ಭಕ್ತಿ ,ಭಾವನೆಗಳ  ಸಂಗಮಗಳ ತಾಣಗಳಾಗಿವೆ ಎಂದವರು ಮನುಷ್ಯನಿಗೆ ಶಾಂತಿ-ಸಮಾಧಾನ ಸಿಗಲು ಅಧ್ಯಾತ್ಮ ಹಾಗೂ ಧರ್ಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ದೊರೆಯಲಿದೆ' ಜತ್ತ ಶಾಸಕ ಗೋಪಿಚಂದ ಪಡೋಳಕರ ಹೇಳಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.