ಎಐಸಿಸಿ ಹ್ಯೂಮನ್ ರೈಟ್ಸ್ ಶಾಖೆ ಪ್ರಾರಂಭವಾಗಿರುವುದು ಸಂತಸದ ವಿಷಯ

Jun 20, 2025 - 12:40
 0
ಎಐಸಿಸಿ ಹ್ಯೂಮನ್ ರೈಟ್ಸ್ ಶಾಖೆ ಪ್ರಾರಂಭವಾಗಿರುವುದು ಸಂತಸದ ವಿಷಯ
ದೇವರಹಿಪ್ಪರಗಿ ಪಟ್ಟಣದ ಬಸ್ ನಿಲ್ದಾಣದ ಬಳಿ ಎಐಸಿಸಿ ಹ್ಯೂಮನ್ ರೈಟ್ಸ್ ಶಾಖೆಯ ಹೊಸ ಕಚೇರಿಯ ಉದ್ಘಾಟನಾ ಜರುಗಿತು.

ದೇವರಹಿಪ್ಪರಗಿ: ಪಟ್ಟಣದ ಬಸ್ ನಿಲ್ದಾಣದ ಬಳಿ ಎಐಸಿಸಿ ಹ್ಯೂಮನ್ ರೈಟ್ಸ್ ಶಾಖೆಯ ಹೊಸ ಕಚೇರಿಯ ಉದ್ಘಾಟನಾ ಜರುಗಿತು.


ರಾಜ್ಯ ಕಾರ್ಯಕಾರಿಣಿಯ ಸದಸ್ಯ ಮತ್ತು ವಿಜಯಪುರ, ಬಾಗಲಕೋಟ, ಕಲ್ಬುರ್ಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಶಬ್ಬೀರ್ ಡಾಲಾಯತ್ ಅಧ್ಯಕ್ಷತೆ ವಹಿಸಿ, ಪ್ರತಿಯೊಂದು ಹಂತದಲ್ಲಿ ನಾವೆಲ್ಲ ಸಂಘಟಿತರಾಗಬೇಕು. ಕಾಂಗ್ರೆಸ್ ಸರಕಾರ ದೀನ ದಲಿತ ಹಿಂದುಳಿದವರ ದ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಮನೆ ಮಾತಾಗಿದೆ. ನಾವೆಲ್ಲ ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡೋಣ ಈ ನಿಟ್ಟಿನಲ್ಲಿ ದೇವರಹಿಪ್ಪರಗಿಯಲ್ಲಿ ಎಐಸಿಸಿ ಹ್ಯೂಮನ್ ರೈಟ್ಸ್ ಶಾಖೆ ಪ್ರಾರಂಭವಾಗಿರುವುದು ಸಂತಸದ ವಿಷಯವಾಗಿದೆ ಎಂದರು.


 ನೇತೃತ್ವ ವಹಿಸಿದ್ದ ದೇವರಹಿಪ್ಪರಗಿ ತಾಲೂಕ ಎಐಸಿಸಿ ಹ್ಯೂಮನ್ ರೈಟ್ಸ್ ಶಾಖೆಯ ಅಧ್ಯಕ್ಷ ಶಾಹಿದ್ ರೂಗಿ ಕಾರ್ಯಕ್ರಮ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ  ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಾಹೆಬಗೌಡ ಬಿರಾದಾರ ಕಾಂಗ್ರೆಸ್ ಯುವ ಮುಖಂಡ ಮಹೇಶ್ ಸುಣಗಾರ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಸರಿತಾ ನಾಯಕ್, ಪಪಂ ಸದಸ್ಯರಾದ ರಾಜು ಮೆಟಗಾರ, ಸುನೀಲ್ ಕನಮಡಿ, ಹುಸೇನ್ ಕೊಕಟನೂರ, ಎಐಸಿಸಿ ಹ್ಯೂಮನ್ ರೈಟ್ಸ್ ಶಾಖೆಯ ಮಹಿಳಾ ಅಧ್ಯಕ್ಷ ಸರಸ್ವತಿ ಬಿರಾದಾರ್ ಪ್ರಧಾನ ಕಾರ್ಯದರ್ಶಿ ಶಾಕೆರಾ ಹೆಬ್ಬಾಳ, ಕೋಲಾರ ಅಧ್ಯಕ್ಷ ಮುಸ್ಕಾನ್ ಸಿರ್ಬುರ್, ಪ್ರಧಾನ ಕಾರ್ಯದರ್ಶಿ ಗೌಸ್ ಅಗರಖೇಡ್, ಹುಸೇನ್ ವಾಲಿಕಾರ್, ವಿಜಯ ಜಾದವ್, ನಬಿ ಮುಲ್ಲಾ, ರಂಜಿತ್ ಜಾದವ್, ಹನೀಫ್ ಕಲಾದಗಿ, ಅಶೋಕ್, ರಶೀದ್, ಅಶ್ಪಾಕ್, ನಾಗೇಶ, ಭಾಗ್ಯಶ್ರೀ ಹಂದಗಲ್, ನಾಗಮ್ಮ ತಳಕೇರಿ ಸೇರಿದಂತೆ ಮತ್ತೀತರರು ಪಾಲ್ಗೊಂಡಿದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.