ಗೋಳಗುಮ್ಮಟ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ

Jun 22, 2025 - 09:56
 0

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ : ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ದಾರವಾಡ ವಲಯದ  ವತಿಯಿಂದ ನಗರದ ವಿಶ್ವ ವಿಖ್ಯಾತ ಗೋಲ ಗುಮ್ಮಟ ಆವರಣದಲ್ಲಿ ಶನಿವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಈ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಒಂದು ಮಹತ್ವದ ಮೈಲಿಗಲ್ಲಾಗಿದೆ ಈ ಜಾಗತಿಕ ಆಚರಣೆಯ ೧೧ನೇ ವಾರ್ಷಿಕೋತ್ಸವ. “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ಆಚರಿಸಲಾಯಿತು.  

ಭಾರತೀಯ ಪುರಾತತ್ವ ಸರ್ವೇಕ್ಷಣೆ, ಧಾರವಾಡ ವಲಯದ ಉಪ ಅಧಿಕ್ಷಕ ಪುರಾತತ್ವ ಅಭಿಯಂತರರು. ಎನ್. ಬಿ. ಡಿ. ಕೆಂಪೆಗೌಡ, ಮಾತನಾಡಿ ರಾಷ್ಟ್ರದ ೧೮೯ ಐತಿಹಾಸಿಕ ಪಾರಂಪರಿಕ ಸ್ಥಳಗಳಲ್ಲಿ ಹಾಗೂ ಧಾರವಾಡ ವಲಯದ ಬದಾಮಿ, ಪಟ್ಟದಕಲ್ಲು, ಐಹೊಳ್ಳೆ, ಗೋಲಗುಮ್ಮಟದಲ್ಲಿ ಅಂತರರಾಷ್ಟ್ರೀಯ ೧೧ನೇ ಯೋಗ ದಿನಾಚರಣೆಯನ್ನು ಆಯೋಜನೆ ಮಾಡಲಾಗಿದೆ. ನಮ್ಮ ಪಾರಂಪರಿಕ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವ ಜೊತೆಗೆ ಯುವ ಸಮುದಾಯದಲ್ಲಿ ಯೋಗದ ಮಹತ್ವವನ್ನು ತಿಳಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
 
ಈ ವರ್ಷದ ಆಚರಣೆಯು ಸಮಗ್ರ ಯೋಗ ಕ್ಷೇಮ ಮತ್ತು ಪರಿಸರ ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಯೋಗದ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ ಹಾಗೂ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಹೆಚ್ಚಿಸಲು ಲಕ್ಷಾಂತರ ಜನರನ್ನು ಯೋಗಾಭ್ಯಾಸದಲ್ಲಿ ಒಂದುಗೂಡಿಸಿದೆ. ಈ ಯೋಗವು ಹೆಚ್ಚಿನ ನಮ್ಯತೆ, ಶಕ್ತಿ ಸಮತೋಲನ ಮತ್ತು ಒತ್ತಡ ಕಡಿತ ಸೇರಿದಂತೆ ವ್ಯಾಪಕ ಶ್ರೇಣಿಯ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ ಎಂಬ ಕಾರಣದಿಂದಾಗಿ ಇದು ಮುಖ್ಯವಾಗಿದೆ ಎಂದು ಹೇಳಿದರು.
 
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಜಾವೀದ್ ಜಮಾದಾರ ಅವರು ಮಾತನಾಡಿ,ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ನೀಡುವ ಅಪೂರ್ವ ಶಕ್ತಿ ಯೋಗಕ್ಕಿದೆ ಮಾನವ ಸಂಕುಲವನ್ನು ರಕ್ಷಿಸುವಲ್ಲಿ ಯೋಗ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ  ಆರೋಗ್ಯ ರಕ್ಷಣೆ ಹಾಗೂ ರೋಗಗನ್ನು ನಿಯಂತ್ರಿಸಬಹುದು. ಯೋಗವು ಇಂದು ಅನಿವಾರ್ಯವಾಗಿ ಒತ್ತಡದ ಬದುಕಿಗೆ ನೆಮ್ಮದಿ ಜೀವನ ನಡೆಸಲು ಯೋಗವು ಒಂದು ದಿವ್ಯ ರೀತಿಯ ಔಷಧ.

 ಯೋಗವನ್ನು ನಿತ್ಯವು ಮಾಡುವುದರಿಂದ  ಆರೋಗ್ಯಕರ ಸದೃಢ ಮನಸ್ಸು ಸಂಪಾದಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. 
 ಪಾಸ್ಚಿಮಾತ್ಯ ರಾಷ್ಟ್ರಗಳಲ್ಲಿ ಯೋಗ ಮತ್ತು ಸಂಸ್ಕೃತಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದೆ. ನಮ್ಮ ದೇಶದಲ್ಲಿಯೂ ಯೋಗ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಪ್ರವರ್ದಮಾನಕ್ಕೆ ಬರುತ್ತಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಸಂಸ್ಕೃತಿ ಮೌಲ್ಯ ಗಳಿಸಿಕೊಳ್ಳದೆ ಇದ್ದಲ್ಲಿ ವಿದ್ಯೆಗೆ ಯಾವುದೇ ಗೌರವ ಸಿಗುವದಿಲ್ಲ. ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಯೋಗ ಕಲಿಯುವದರಿಂದ ಉತ್ತಮ ಆರೋಗ್ಯ ಸಾಧ್ಯ, ಕಲಿಕೆ ಜೊತೆಗೆ ವಿದ್ಯಾರ್ಥಿಗಳು ಪಠ್ಯೆತರ ಚಟುವಟಿಕೆಗಳ ಕಡೆಗೆ ಗಮನ ನೀಡಬೇಕೆಂದರು. ಸದೃಢ ವ್ಯಕ್ತಿ, ಸದೃಢ ಸಮಾಜ, ಸದೃಢ ರಾಷ್ಟ್ರ  ಪರಿಕಲ್ಪನೆಯೊಂದಿಗೆ ಆರೋಗ್ಯವಂತ ಜೀವನಕ್ಕಾಗಿ ಯೋಗಾಭ್ಯಾಸವನ್ನು ದೈನಂದಿನ ಕಾರ್ಯವಾಗಬೇಕು ಎಂದು ಹೇಳಿದರು.
 
ಕಾರ್ಯಕ್ರಮದಲ್ಲಿ ಬೆಳಿಗ್ಗೆ ೬.೩೦ರಿಂದ ೭.೦೦  ಗಂಟೆಯವರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಯೋಗ ದಿನಾಚರಣೆಯ ಕುರಿತು ಮಾತನಾಡುವ ನೇರಪ್ರಸಾರದ ಕಾರ್ಯಕ್ರಮವನ್ನು ಏರ್ಪಾಡಿಸಲಾಗಿತ್ತು ಹಾಗೂ ವಿಶ್ವವಿಖ್ಯಾತ ಗೋಲಗುಮ್ಮಜ ವಿಕ್ಷಣೆಯನ್ನು ೧೧ನೇ ಯೋಗ ದಿನಾಚರಣೆಯ ಅಂಗವಾಗಿ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.
 
ಯೋಗ ಗುರುಗಳಾದ ಸುರೇಶ ಬಿ. ಆನಂದಿ ಅವರು ಯೋಗದ ವಿವಿಧ ಆಯಾಮಗಳ ತರಬೇತಿಯನ್ನು  ನೀಡಿದರು. ಕುಮಾರಿ ಶಿಫಾ ಯೋಗದ ಮಹತ್ವ ಕುರಿತು ಉಪನ್ಯಾಸ ನೀಡಿದರು. ನಗರದ ೨೦ ಕಾಲೇಜುಗಳಿಂದ ಅಪಾರ ಸಂಖ್ಯೆಯ ಎನ್.ಎಸ್.ಎಸ್. ಸ್ವಯಂ ಸೇವಕರು ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.