ದೇವರಹಿಪ್ಪರಗಿಯಲ್ಲಿ ೧೧ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ದೇವರಹಿಪ್ಪರಗಿ: ಅಂತಾರಾಷ್ಟ್ರೀಯ ಯೋಗ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಅದೇರೀತಿ ಯೋಗದ ಮಹತ್ವ ಪ್ರಚುರ ಪಡಿಸುವ ನಿಟ್ಟಿನಲ್ಲಿ ದೇವರಹಿಪ್ಪರಗಿ ಪಟ್ಟಣದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಾಲಾ ಆವರಣದಲ್ಲಿ ಯೋಗೋತ್ಸವ ಸಮಿತಿ ದೇವರಹಿಪ್ಪರಗಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಸಂಸ್ಥೆ ಇವರ ಸಹಯೋಗದಲ್ಲಿ ಶನಿವಾರದಂದು ಆಯೋಜಿಸಿದ್ದ ೧೧ನೇ ವಿಶ್ವ ಯೋಗ ದಿನಾಚರಣೆಯ ದಿವ್ಯ ಸಾನಿಧ್ಯವನ್ನು ವಿಜಯಪುರದ ಜ್ಞಾನ ಯೋಗ ಆಶ್ರಮದ ಪ.ಪಂ ಶ್ರೀ ಗುರುಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೆಳಗ್ಗೆ ೬ಕ್ಕೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಜಯಪುರದ ಜ್ಞಾನ ಯೋಗಾಶ್ರಮದ ಪ.ಪಂ ಶ್ರೀ ಗುರುಲಿಂಗ ಮಹಾಸ್ವಾಮಿಗಳ ಸುಮಾರು ೪೫ ನಿಮಿಷಗಳ ಕಾಲ ಸಾಮೂಹಿಕವಾಗಿ ಯೋಗಾಭ್ಯಾಸದ ಜೋತೆ ಯೋಗ ಎಂದರೆ ಶರೀರ, ಮನಸ್ಸು, ಅತ್ಮಗಳ ಸಮಾಗಮ. ಯೋಗದಿಂದ ನಮ್ಮ ಸಂಸ್ಕೃತಿ ಒಂದಾಗುವ ಸುಸಂದರ್ಭ ಇದಾಗಿದೆ. ಯೋಗ ದಿನಾಚರಣೆಯಲ್ಲಿ ಶಿಷ್ಟಾಚಾರದ ಯೋಗ, ಪ್ರಾಣಾಯಾಮವನ್ನು ಸಾಮೂಹಿಕವಾಗಿ ಮಾಡುವುದರ ಜೊತೆಗೆ ಶಿಸ್ತುಬದ್ಧ ಬದುಕು ಹೇಗೆ ನಡೆಸುವುದು ಎನ್ನುವುದನ್ನು ಕಲಿಯಬಹುದಾಗಿದೆ ಎಂದು ಹೇಳಿದರು.
ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಶಾಲಾ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಸುಮಾರು ಸಾವಿರಕ್ಕೂ ಜನ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘ ತಾಲೂಕು ಅಧ್ಯಕ್ಷ ಚನ್ನವೀರಪ್ಪ ಕುದರಿ, ಯೋಗಪಟು ಪಂಚಾಕ್ಷರಿ ಮಿಂಚಿನಾಳ, ಸಿದ್ದೇಶ್ವರ ಸಂಸ್ಥೆಯ ಮುಖ್ಯಸ್ಥರಾದ ವ್ಹಿ.ಕೆ.ಪಾಟೀಲ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ, ಸಂಗನಗೌಡ ಬಿರಾದಾರ, ಶಿಕ್ಷಣ ಸಂಯೋಜಕರಾದ ಎಸ್,ಎಂ,ಕಪನಿAಬರಗಿ, ಬಿ.ಆರ್.ಪಿ ಸಾಹೇಬಗೌಡ ಬಿರಾದಾರ,ಬಾಬುಗೌಡ ಪಾಟೀಲ,ಸಿದ್ದು ಮೇಲಿನಮನಿ, ರಾವುತ್ ತಳಕೇರಿ,ಮಹಾಂತೇಶ ಬಿರಾದಾರ, ಸೋಮಶೇಖರ ಹಿರೇಮಠ,ಚಿನ್ಮಯಿ ಕೋರಿ ಸೇರಿದಂತೆ ಪ್ರಮುಖರು, ಗಣ್ಯರು, ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.