ತಂಬಾಕು ಮುಕ್ತ ಗ್ರಾಮಗಳನ್ನಾಗಿ ಫೋಷಿಸಲು ಪ್ರತಿಯೊಬ್ಬ ಅಧಿಕಾರಿಗಳು ಶ್ರಮಮಿಸಬೇಕು : ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ

Jun 20, 2025 - 12:46
 0
ತಂಬಾಕು ಮುಕ್ತ  ಗ್ರಾಮಗಳನ್ನಾಗಿ ಫೋಷಿಸಲು ಪ್ರತಿಯೊಬ್ಬ ಅಧಿಕಾರಿಗಳು ಶ್ರಮಮಿಸಬೇಕು : ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ

ಕಲಬುರಗಿ:  ಜಿಲ್ಲೆಯಲ್ಲಿ  "ತಂಬಾಕು ಮುಕ್ತ ಗ್ರಾಮ" ಗÀಳನ್ನಾಗಿ ಘೋಷಿಸಲು ಪ್ರತಿಯೊಬ್ಬ ಅಧಿಕಾರಿಗಳು ಅವಿರತವಾಗಿ ಶ್ರಮವಹಿಸಿ ಕಾರ್ಯನಿರ್ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ  ಹೇಳಿದರು.
     ಗುರುವಾರದಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ  ಜಿಲ್ಲಾ ತಂಬಾಕು ನಿಯಂತ್ರಣ ಕೋಶದ  ಜಿಲ್ಲಾ  ಮಟ್ಟದ ಸಮನ್ವಯ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.  ತಂಬಾಕು ಮುಕ್ತಗ್ರಾಮಗಳನ್ನಾಗಿ ಘೋಷಿಸಲು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಪೋಲಿಸ್ ಇಲಾಖೆ ಹಾಗೂ ಮಹಿಳಾ ಮತು ಮಕ್ಕಳ ಇಲಾಖೆಯ ಅಧಿಕಾರಿಗಳು ಮೌಲ್ಯಮಾಪನವನ್ನು ಮಾಡಿ   ವರದಿಯನ್ನು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ      ಸಲ್ಲಿಸಬೇಕು ಎಂದು ಅವರು ಹೇಳಿದರು.
    ಮೌಲ್ಯ ಮಾಪನ ವರದಿಯ ಪ್ರತಿಶತ ಶೇ.೮೦ ರಷ್ಟು ಪಲಿತಾಂಶವನ್ನು  ಪಡೆದಲ್ಲಿ ಆಯಾ ತಾಲೂಕಿನ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು ಸದರಿ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮ"ಎಂದು ಘೋಷಣಾ ಪತ್ರವನ್ನು ಗ್ರಾಮ ಪಂಚಾಯತಗಳಿಗೆ ನೀಡಬೇಕು ಮತ್ತು ಜನರಿಗೆ ಅರಿವನ್ನು ಮೂಡಿಸಲು ತಂಬಾಕು ಮುಕ್ತ ಗ್ರಾಮಕ್ಕೆ ಸ್ವಾಗತ ನಾಮಫಲಕಗಳನ್ನು ಹಾಕಬೇಕು ಎಂದರು.
        ಮುಜರಾಯಿ ಇಲಾಖೆಯಿಂದ ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲಿ ತಂಬಾಕು ಮುಕ್ತ ದೇವಾಲಯ ಎಂಬ ನಾಮಫಲಕವನ್ನು ಅಳವಡಿಸಬೇಕು ಮತ್ತು ಜಿಲ್ಲೆಯಲ್ಲಿನ  ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾಕಾಲೇಜುಗಳಲ್ಲಿ ನಾಮಫಲಕಗಳನ್ನು ಅಳವಡಿಸಿದ ಮಾಹಿತಿಯನ್ನು ಅಧಿಕಾರಿಗಳು ವರದಿಯನ್ನು ಸಭೆಗೆ ನೀಡಬೇಕೆಂದು ಸೂಚಿಸಿದರು.
     ಕಾನೂನು ಸುವ್ಯವಸ್ಥೆ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಶಾಲಾ ಕಾಲೇಜುಗಳಿಗೆ ಆಹ್ವಾನಿಸಿ ತಂಬಾಕು ನಿಯಂತ್ರಣದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನು ನೀಡುವದರ ಮುಖಾಂತರ ಹಾನಿಕಾರಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ತಿಳುವಳಿಕೆಯನ್ನು ನೀಡಿದರೆ. ಕ್ಯಾನ್ಸರ್ ಪ್ರಕರಣಗಳ ಕಡಿಮೆ ಸಂಖ್ಯೆಯನ್ನು ಮಾಡಲು ಸಾಧ್ಯವಿದೆ ಎಂದು  ತಿಳಿಸಿದರು.
    ೨೦೦೩ರ ಕೋಟ್ಪಾ ಕಾಯ್ದೆಯಡಿಯಲ್ಲಿ ಹಲವಾರು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ೯ ಇಲಾಖೆಯ ಅಧಿಕಾರಗಳು ಮತ್ತು ಸಿಬ್ಬಂಧಿಗಳಿಗೆ ತರಬೇತಿ ಕಾರ್ಯಕ್ರಮ ೧೧೨ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಹಾಗೂ ಶಾಲಾ ಕಾಲೇಜುಗಳಲ್ಲಿ ಸ್ಲೋಗನ್ ಕಾರ್ಯಕ್ರಮ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ವೇದಿಕೆಯ ಕಾರ್ಯಕ್ರಮದ ಮೂಲಕ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿಯನ್ನು ಮೂಡಿಸಲಾಯಿತು. ಎಂದು ಸಭೆಗೆ ಪಿ.ಪಿ.ಟಿ.ಯ ಮೂಲಕ ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರರಾದ ಸುಜಾತಾ ಪಾಟೀಲ್ ಅಂಕಿ ಅಂಶಗಳ ಕುರಿತು ನಿಖರವಾದ ಮಾಹಿತಿಯನ್ನು  ನೀಡಿದರು.
         ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧಿಕಾರಿ ಶರಣಬಸಪ್ಪ ಕ್ಯಾತನಾಳ ಮಾತನಾಡಿ, ಪ್ರತಿಯೋಬ್ಬ ಅಧಿಕಾರಿಗಳು ಒಂದು ಬಾರಿ ಕಿದ್ವಾಯಿ ಕಾನ್ಸರ್ ಆಸ್ಪತ್ರೆಗೆ ಭೇಟಿಯನ್ನು ನೀಡಿ ಅಲ್ಲಿನ ಕ್ಯಾನ್ಸರ್ ರೋಗಿಗಳ ಪರಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಕ್ಯಾನ್ಸರ್ ರೋಗವನ್ನು ತಡುಗಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು  ಹೇಳಿದರು.
    ಸಭೆಯಲ್ಲಿ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿವೇಕಾನಂದ ರೆಡ್ಡಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷö್ಮಣ ಶೃಂಗೇರಿ, ಗ್ರಾಮೀಣ ಪೋಲಿಸ್ ಸ್ಟೇಶನ್  ಡಿ.ವೈಎಸ್.ಪಿ ಲೋಕೆಶ್ವರಪ್ಪ ಎನ್,  ಪದವಿ ಪೂರ್ವ ಶಿಕ್ಷಣ  ಇಲಾಖೆಯ ಉಪನಿರ್ದೇಶಕ ಸುರೇಶ ಕೆ. ಅಕ್ಕಣ್ಣ, ತಾಲೂಕ ಕಾರ್ಯನಿರ್ವಾಹಣ ಅಧಿಕಾರಿಗಳು ಜಿಲ್ಲಾ ಬಾಯಿ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಸಂಧ್ಯಾ ಕಾನಿಕರ್, ಎಲ್ಲ ತಹಶೀಲ್ದಾರರು, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.