ಅಧಿಕಾರಿಗಳಿಂದ ಧರಣಿ ನಿರತರ ಮನವಲಿಕೆಗೆ ಪ್ರಯತ್ನ ; ವಿಫಲ

ಬೂದಿಹಾಳ ಪೀರಾಪೂರ ಏತ ನೀರಾವರಿ ಕೊನೆಯ ಹಂತದ ಕಾಮಗಾರಿ

Jul 13, 2025 - 10:48
 0
ಅಧಿಕಾರಿಗಳಿಂದ ಧರಣಿ ನಿರತರ ಮನವಲಿಕೆಗೆ ಪ್ರಯತ್ನ ; ವಿಫಲ
ತಾಳಿಕೋಟೆ : ಬೂದಿಹಾಳ-ಫೀರಾಪೂರ ಏತ ನೀರಾವರಿ ಮುಂದುವರೆದ ಕಾಮಗಾರಿಯನ್ನು ಪ್ರಾರಂಬಿಸಬೇಕೆಂದು ಒತ್ತಾಯಿಸಿ ಪ್ರಾರಂಭಗೊಂಡ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಅಧಿಕಾರಿಗಳು ಬೆಟ್ಟಿ ನೀಡಿ ಧರಣಿ ನಿರತರ ಮನವಲಿಕೆ ಪ್ರಯತ್ನಿಸಿರುವದು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ


ತಾಳಿಕೋಟೆ : ಬೂದಿಹಾಳ ಪೀರಾಪೂರ ಏತ ನೀರಾವರಿಗೆ ಸಂಬಂಧಿಸಿದ ಕೊನೆ ಹಂತದ ಎಫ್.ಐ.ಸಿ (ಹೊಲ ಗಾಲುವೆ) ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಶನಿವಾರರಂದು ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತಾಪಿ ಜನರು ತಾಲೂಕಿನ ಕೊಡಗಾನೂರ ಕ್ರಾಸ್‌ನಲ್ಲಿ ಪ್ರಾರಂಬಿಸಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಕೆಬಿಜೆಎನ್‌ಎಲ್ ಕಾರ್ಯನಿರ್ವಾಹಕ ಅಭಿಯಂತರ ಮುಂಡಾಸ್ ಹಾಗೂ ತಹಶಿಲ್ದಾರ ಭಲರಾಮ ಕಟ್ಟಿಮನಿ, ಅವರು ಧರಣಿ ನಿರತರ ಮನವಲಿಕೆಗೆ ಪ್ರಯತ್ನಿಸಿದರಲ್ಲದೇ ಮುಂದುವರೆದ ಕಾಮಗಾರಿಗೆ ಸರ್ಕಾರದಿಂದ ಹಣ ಬಿಡುಗಡೆ ಯಾಗುವವರೆಗೂ ಧರಣಿಯಿಂದ ಹಿಂದಕ್ಕೆ ಸರಿಯುವದಿಲ್ಲಾವೆಂದು ಪಟ್ಟು ಹಿಡಿದ್ದರಿಂದ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿದ ಘಟನೆ ನಡೆಯಿತು.


          ಧರಣಿ ನಿರತರ ಜೊತೆಗೆ ಘಂಟೆ ಕಾಲ ಚರ್ಚೆ ನಡೆಸಿದ ಕೆಬಿಜೆಎನ್‌ಎಲ್ ಇಇ ಮುಂಡಾಸ್ ಅವರು ಈಗಾಗಲೇ ಈ ಯೋಜನೆ ಪೂರ್ಣಗೊಳಿಸಲು ತಾಂತ್ರಿಕ ವಿಭಾಗದಲ್ಲಿ ನಿಂತಿದೆ ೨೦೧೩-೧೪ನೇ ಸಾಲಿನ ಏಷ್ಟಿಮೇಂಟ್ ಮತ್ತು ಈಗೀನ ಏಷ್ಟಿಮೇಂಟ್ ವ್ಯತ್ಯಾಸ ವಿರುವದರಿಂದ ಅದನ್ನು ಸರಿಪಡಿಸಿ ಬೋರ್ಡ ಹಂತಕ್ಕೆ ಹೋಗುವ ಹೋಗಲಿದೆ ಈಗಾಗಲೇ ಈಭಾಗದ ಶಾಸಕರಾದ ರಾಜುಗೌಡ ಪಾಟೀಲ ಅವರು ಉಪಮುಖ್ಯಮಂತ್ರಿ ಜಲ ಸಂಪನ್ಮೂಲ ಸಚೀವ ಡಿಕೆ ಶಿವಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿ ಮುಂದುವರೆದ ಕಾಮಗಾರಿಗೆ ಒತ್ತಾಯಿಸಿದ ಹಿನ್ನೇಲೆ ಆ ಪತ್ರಕ್ಕೆ ಉಪ ಮುಖ್ಯಮಂತ್ರಿಗಳು ಡಿಪಿಆರ್ ತಯಾರಿಸಿ ಸಭೆ ಮುಂದೆ ಮಂಡಿಸಲು ಕೆಬಿಜೆಎನ್‌ಎಲ್ ಎಂ.ಡಿ. ಅವರಿಗೂ ಸೂಚಿಸಿದ್ದಾಗಿದೆ ಅದರಂತೆ ಈ ಕಾಮಗಾರಿಗೆ ಯಾವುದೇ ತೊಂದರೆಗಳಿಲ್ಲಾ ಎಂದು ಶಾಸಕ ರಾಜುಗೌಡ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರಿಗೆ ಬರೆದ ಮನವಿ ಪತ್ರಕ್ಕೆ ಅವರು ಸೂಚಿಸಿದ ಬರಹವನ್ನು ತೋರಿಸಿ ಧರಣಿ ನಿರತರ ಮನವಲಿಕೆಗೆ ಪ್ರಯತ್ನಿಸಿದರು.


       ತಹಶಿಲ್ದಾರ ಭಲರಾಮ ಕಟ್ಟಿಮನಿ ಅವರು ಇಲ್ಲಿ ಧರಣಿ ಕುಳಿತುಕೊಳ್ಳುವದರಿಂದ ಪ್ರಯೋಜನೆ ಇಲ್ಲಾ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಸೋಮವಾರರಂದು ಇಚಿಡಿ ಪಟ್ಟಣಕ್ಕೆ ಬೆಟ್ಟಿ ನೀಡುತ್ತಿದ್ದಾರೆ ಅಲ್ಲಿಗೆ ೮, ೧೦ ಜನ ರೈತ ಮುಖಂಡರು ಬರೀ ಅಲ್ಲಿ ಅವರಿಗೆ ಬೆಟ್ಟಿಯಾಗುವ ಮನವಿ ಸಲ್ಲಿಸುವ ಎಲ್ಲ ಅವಕಾಶವನ್ನು ನಾವು ಮಾಡಿಕೊಡುತ್ತೇವೆ ದಯಮಾಡಿ ಧರಣಿಯಿಂದ ಹಿಂದಕ್ಕೆ ಸರಿಯಿರಿ ಎಂದು ಮನವಿ ಮಾಡಿಕೊಂಡರು.


        ಇದಕ್ಕೆ ಉತ್ತರಿಸಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರಿಗೆ ರೈತರು ಈ ಕಾಮಗಾರಿ ಮುಕ್ತಾಯಗೊಳಿಸುವ ಕುರಿತು ಮನವಿ ಸಲ್ಲಿಸುತ್ತಾ ಬಂದಿದ್ದಾಗಿದೆ ಆದರೆ ಯಾವುದೇ ಪ್ರಯೋಜನೆಗೆ ಬಂದಿಲ್ಲಾ ಹೀಗಾಗಿ ಈ ಮುಂದುವರೆದ ಕಾಮಗಾರಿಗೆ ಸರ್ಕಾರದಿಂದ ೧೭೦ ಕೋಟಿ ಹಣ ಕೂಡಲೇ ಮಂಜೂರಿ ನೀಡಿ ಕಾಮಗಾರಿಯು ಪ್ರಾರಂಬಗೊಳಿಸಬೇಕು ಮತ್ತು ಈಗಾಗಲೇ ಮಾಡಿದ ಕಾಮಗಾರಿಯಲ್ಲಿ ೮೦ ಏಕರೆಗೆ ಒಂದರಂತೆ ಔಟಲೇಟ್ ವಾಲ್‌ಗಳನ್ನು ಕೂಡ್ರಿಸಲಾಗಿದೆ ಇವು ಕನಿಷ್ಠ ೨೦ ಏಕರೆಗೆ ೧ ರಂತೆ ಕೂಡ್ರಿಸಬೇಕು ಮತ್ತು ಈ ಮುಂದುವರೆದ ಕಾಮಗಾರಿಗೆ ಸರ್ಕಾರದ ಜನಪ್ರತಿನಿಧಿಗಳು ಸ್ಪಂದಿಸಬೇಕು ಅಲ್ಲಿಯವರೆಗೂ ನಮ್ಮ ಅಹೋರಾತ್ರಿ ಧರಣಿಯು ಶಾಂತಿಯುತವಾಗಿ ಮುಂದುವರೆಯಲಿದೆ ಕಾಮಗಾರಿ ಪ್ರಾರಂಭ ಕುರಿತು ಸರ್ಕಾರದಿಂದ ಸೂಕ್ತ ನಿರ್ದೇಶನ ಹೊರ ಬಿಳ್ಳುವವರೆಗೂ ನಾವು ಧರಣಿಯಿಂದ ಹಿಂದಕ್ಕೆ ಸರಿಯುವದಿಲ್ಲಾವೆಂದು ಪಟ್ಟು ಹಿಡಿದರು.
        ಇದನ್ನು ಗಮನಿಸಿದ ಅಧಿಕಾರಿಗಳು ರೈತಾಪಿ ಜನರ ಬೇಡಿಕೆ ಕುರಿತಂತೆ ಸರ್ಕಾರದ ಮುಂದೆ ಮಂಡಿಸುವದಾಗಿ ಹೇಳಿ ಮರಳಿದರು.


         ಈ ಸಮಯದಲ್ಲಿ ಪಿಎಸ್‌ಐ ರಾಮನಗೌಡ ಸಂಕನಾಳ, ಅಪರಾಧ ವಿಭಾಗ ಪಿಎಸ್‌ಐ ಆರ್.ಎಸ್.ಭಂಗಿ, ಒಳಗೊಂಡು ಧರಣಿ ನಿರತ ರೈತಾಪಿ ವರ್ಗದವರು ಉಪಸ್ಥಿತರಿದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.