ಸಂಸ್ಥೆ ಹಾಗೂ ಸಂಸ್ಥೆಯ ಅಧಿಕಾರಗಳು ವಿರುದ್ಧ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ: ನಾರಾಯಣಪ್ಪ ಕುರುಬರ

Jun 22, 2025 - 08:50
 0
ಸಂಸ್ಥೆ ಹಾಗೂ ಸಂಸ್ಥೆಯ ಅಧಿಕಾರಗಳು ವಿರುದ್ಧ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ: ನಾರಾಯಣಪ್ಪ ಕುರುಬರ
ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಾಲನ ಸಿಬ್ಬಂದಿಗಳಿಗೆ ಪಾರದರ್ಶಕವಾಗಿ ರಜೆಗಳನ್ನು ನೀಡಬೇಕೆನ್ನುವ ಉದ್ದೇಶದಿಂದ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೇಡ್ಡಿ ಸಲಹೆಯಂತೆ ತಂತ್ರಾಶ ಆಧಾರಿತ ರಜೆ ಮಂಜೂರಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿರುತ್ತದೆ. ಸಂಪೂರ್ಣವಾಗಿ ಪಾರದರ್ಶಕವಾಗಿದ್ದು ಎಲ್ಲಾ ಚಾಲನ ಸಿಬ್ಬಂದಿಗಳಿಗೆ ಯೂಸರ್ ಐಡಿ ಹಾಗೂ ಪಾಸ್ವರ್ಡ್ಗಳನ್ನು ನೀಡಲಾಗಿರುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ತಿಳಿಸಿದ್ದಾರೆ. 

        
ಎಲ್ಲ ಸಿಬ್ಬಂದಿಗಳು ತಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ಬಳಸಿ ತಮ್ಮ ರಜೆ ಖಾತೆಯನ್ನು ತೆರೆಕೊಳ್ಳಬಹುದಾಗಿರುತ್ತದೆ ರಜೆ ಖಾತೆಯಲ್ಲಿ ತಮಗೆ ಬೇಕಾಗಿರುವ ರಜೆಯನ್ನು ನಮೂದು ಮಾಡಿದಲ್ಲಿ ಅವರಿಗೆ  ತಂತ್ರಾAಶವು ರಜೆಯನ್ನು ಮಂಜೂರು ಮಾಡುತ್ತದೆ ಪ್ರತಿ ಚಾಲನಾ ಸಿಬ್ಬಂದಿಯು ಕರ್ತವ್ಯಕ್ಕೆ ಒಂದು ತಿಂಗಳಲ್ಲಿ ೨೨ ದಿನಗಳ ಕರ್ತವ್ಯವನ್ನು ಮಾಡಿದರೆ ತಂತ್ರಾAಶದಲ್ಲಿ ರಜೆ ತಾನೇ  ಮಂಜೂರು ಆಗುತ್ತದೆ ದಿಢೀರ್ ಸಂದರ್ಭಗಳಲ್ಲಿ ತಂದೆಯ ತಾಯಿಯ ಮರಣ ಬಂಧು ಬಳಗದ ಮರಣ ವೈದ್ಯಕೀಯ ಕಾರಣದಿಂದ ರಜೆ ಬೇಕಾಗುವ ಸಮಯದಲ್ಲಿ ಚಾಲನಾ ಸಿಬ್ಬಂದಿಗಳು ಘಟಕ ವ್ಯವಸ್ಥಾಪಕರ ಮೂಲಕ ರಜೆ ಅರ್ಜಿಗಳನ್ನು ಸಂಬAಧಪಟ್ಟ ದಾಖಲೆಗಳೊಂದಿಗೆ ಸಲ್ಲಿಸತಕ್ಕದ್ದು. ಈಗಾಗಲೇ ವಿಜಯಪುರ ವಿಭಾಗದಲ್ಲಿ ತಂದೆ ತಾಯಿ ಮೃತಪಟ್ಟಲ್ಲಿ ಅವರಿಗೆ ಏಳು ದಿನಗಳ ರಜೆಯನ್ನು ಎಲ್ಲ ಸಿಬ್ಬಂದಿಗಳಿಗೂ ಮಂಜೂರು ಮಾಡಲಾಗುತ್ತಿದೆ ವೈದ್ಯಕೀಯ ಕಾರಣದಿಂದ ದಾಖಲೆಗಳನ್ನು ಆಧರಿಸಿ ವೈದ್ಯರ ಶಿಫಾರಸಿನಂತೆ ರಜೆ ಮಂಜೂರು ಮಾಡಲಾಗುತ್ತಿದೆ ನಿಗಮದಲ್ಲಿ ಕಾರ್ಮಿಕ ಕಲ್ಯಾಣ ಅಧಿಕಾರಿಗಳು ಇದ್ದು ವೈದ್ಯಕೀಯ ಆಧಾರದಲ್ಲಿ ರಜೆ ಕೇಳಿದಾಗ ಕಾರ್ಮಿಕ ಕಲ್ಯಾಣ ಅಧಿಕಾರಿಗಳು  ಸಿಬ್ಬಂದಿಗಳನ್ನು ಖುದ್ದಾಗಿ ಭೇಟಿಯಾಗಿ ಅವರಿಗೆ ಬೇಕಾಗುವ ರಜೆಯನ್ನು ಮಂಜೂರು ಮಾಡಲು ಶಿಫಾರಸು ಮಾಡುತ್ತಾರೆ. ಅದೇ ರೀತಿ ಸಂಸ್ಥೆಯ ಸಿಬ್ಬಂದಿಗಳು ಮತ್ತು ಅವರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ವೈದ್ಯಕೀಯ ಮುಂಗಡವನ್ನು ಸಹ ನೀಡಲಾಗುತ್ತಿದೆ ಮತ್ತು ವೈದ್ಯಕೀಯ ಹಣ ಮರುಪಾವತಿ ಸಹ ಮಾಡಲಾಗುತ್ತಿದೆ. ರಜೆಯನ್ನು ನೀಡುವ ವ್ಯವಸ್ಥೆಯು ಸಂಪೂರ್ಣವಾಗಿ ಪಾರದರ್ಶಕ ಇರುತ್ತದೆ ದಿನಾಂಕ ೧೮/೦೬.೨೦೨೫ ರಂದು ವಿಜಯಪಥ ಈ ಪೇಪರನಲ್ಲಿ ತಂದೆಯ ಮರಣದ ನಾಲ್ಕನೇ ದಿನಕ್ಕೆ ಕರ್ತವ್ಯಕ್ಕೆ ಬಾ ಎಂದು ಕರೆದ ನಾರಾಯಣಪ್ಪ ಕುರುಬರ ಎನ್ನುವ ತಲೆಬರಹದಲ್ಲಿ  ಆಧಾರ ರಹಿತ ಆರೋಪಗಳನ್ನು ಮಾಡಿ ಲೇಖನ ಪ್ರಕಟಿಸಿರುತ್ತಾರೆ.        

ಹೀರಗಪ್ಪ ತಳವಾರವರು ನವೆಂಬರ್ ೨೦೨೩ ರಲ್ಲಿ ಕರ್ತವ್ಯಕ್ಕೆ ಹಾಜರಾಗಿರುವುದರಿಂದ ನವೆಂಬರ್ ೨೦೨೩ರಲ್ಲಿ ಹೀರಗಪ್ಪ ತಳವಾರವರಿಗೆ ಅಪಾಧನಾ ಪತ್ರ ನೀಡಲಾಗಿರುತ್ತದೆ. ಆ ಸಮಯದಲ್ಲಿ ಎ.ಒ.ಫೈಜ್ ರವರು ವಿಭಾಗೀಯ ನಿಯಂತ್ರಣಾಧಿಕಾರಿ ಆಗಿದ್ದರು. ಆ ಸಮಯದಲ್ಲಿ ನಾರಾಯಣಪ್ಪ ಕುರುಬರವರು ವಿಭಾಗೀಯ ನಿಯಂತ್ರಣಾಧಿಕಾರಿ ಆಗಿರಲಿಲ್ಲ ನಾರಾಯಣಪ್ಪ ಕುರುಬರವರು, ಅವರ ತಂದೆಯ ಮರಣ ಪ್ರಮಾಣ ಪತ್ರವನ್ನು ಪರಿಶೀಲಿಸಿ ಎಲ್ಲ ಸಿಬ್ಬಂದಿಗಳಿಗೆ ನೀಡುವ ಹಾಗೆ ಏಳು ದಿನಗಳ ರಜೆಯನ್ನು ಮಂಜೂರು ಮಾಡಲಾಗಿರುತ್ತದೆ.        

ಅದೇ ರೀತಿ ಹೀರಗಪ್ಪ ತಳವಾರ್ ಇವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಮಯದಲ್ಲಿ, ಕಾರ್ಮಿಕ ಕಲ್ಯಾಣ ಅಧಿಕಾರಿಗಳ ಶಿಫಾರಸ್ಸಿನಂತೆ ರಜೆಯನ್ನು ಮಂಜೂರು ಮಾಡಲಾಗಿರುತ್ತದೆ. ಸದಾ ಕಾಲ ಸಂಸ್ಥೆ ಹಾಗೂ ಅಧಿಕಾರಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಾ ತೇಜೋವದೆ ಮಾಡಿ ಅಂತಹ ಪ್ರಕರಣದಲ್ಲಿಯೇ ಸೇವೆಯಿಂದ ವಜಾ ಆಗಿರುವ ಸಂಸ್ಥೆಯ ಒಬ್ಬ ವ್ಯಕ್ತಿಯು ಇಂತಹ ಸುಳ್ಳು ಸುದ್ದಿಗಳನ್ನು ಸಾಮಾಜೀಕ ಜಾಲತಾಣದಲ್ಲಿ ಪದೇಪದೇ ಹಾಕುತ್ತಿದ್ದಾರೆ.                

ಇಂತಹ ಸುಳ್ಳು ಸುದ್ದಿಗಳಿಂದಲೇ ಅವರು ಸೇವೆಯಿಂದ ವಜಾಗೊಂಡಿರುತ್ತಾರೆ. ರಜೆ ಮಂಜೂರಾತಿಯು ಪಾರದರ್ಶಕವಾಗಿರುತ್ತದೆ.                

ಈ ಸುಳ್ಳು ಸುದ್ದಿಯಿಂದ ಸಂಸ್ಥೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರಲ್ಲಿ ಸಂಸ್ಥೆಯ ಬಗ್ಗೆ ಮತ್ತು ವಿಭಾಗದ ಅಧಿಕಾರಿಗಳ ಬಗ್ಗೆ ತಪ್ಪು ಭಾವನೆ ಮೂಡಬಾರದೆಂದು ಈ ಪ್ರಕಟಣೆ ನೀಡಲಾಗಿರುತ್ತದೆ ಸುಳ್ಳು ಸುದ್ದಿ ಹರಡಿರುವ ವ್ಯಕ್ತಿಯ ಕುರಿತು ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳುವ ಅವಕಾಶವನ್ನು ಇಟ್ಟುಕೊಳ್ಳಲಾಗಿರುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.