ನಿತ್ಯಯೋಗದಿಂದ ಏಕಾಗ್ರತೆ ಹಾಗೂ ಆರೋಗ್ಯ ಸಂಪತ್ತು ವೃದ್ಧಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಆಲಮೇಲ : ಪಟ್ಟಣದ ಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಲಮೇಲ ಪಟ್ಟಣದ ಖ್ಯಾತ ಯೋಗಪಟುಗಳು, ರಾಷ್ಟ್ರ ಮಟ್ಟದ ಸಾವಯವ ಕೃಷಿ ತಜ್ಞರು, ಪತಂಜಲಿ ಪರಿವಾರದ ಸೇವಾಧಾರಿಗಳು, ರಾಷ್ಟ್ರ ಮಟ್ಟದ ಕೃಷಿ ತಜ್ಞ ಪ್ರಶಸ್ತಿ ಪುರಸ್ಕೃತರು ಸುನೀಲ ನಾರಾಯಣಕರ ಹಾಗೂ ಯೋಗಪಟುಗಳಾದ ದೀಕ್ಷಿತಾ ನಾರಾಯಣಕರ ಹಾಗೂ ಪೂರ್ವಿ ನಾರಾಯಣಕರ ಅವರಿಂದ ವಿವಿಧ ಯೋಗಾಸನಗಳನ್ನು ಮಕ್ಕಳಿಗೆ ಪ್ರಾತ್ಯಕ್ಷಿಕವಾಗಿ ಹೇಳಿ ಕೊಡಲಾಯಿತು.
ಈ ವೇಳೆ ಮಾತನಾಡಿದ ಕುಮಾರಿ ದೀಕ್ಷಿತಾ ಇಂದಿನ ದಿನಮಾನಗಳಲ್ಲಿ ಯೋಗವು ಪ್ರತಿಯೊಬ್ಬರಿಗೂ ಅತ್ಯವಶ್ಯಕ ಪ್ರತಿನಿತ್ಯ ಯೋಗ ಮಾಡುವುದರಿಂದ ಆರೋಗ್ಯ ಸಂಪತ್ತು,ಏಕಾಗ್ರತೆ ವೃಧ್ಧಿಯಾಗುತ್ತದೆ ಎಂದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಎಸ್.ಆಯ್ .ಜೋಗೂರ ಸದಸ್ಯರಾದ ಅಲೋಕ ಬಡದಾಳ,ಮುಖ್ಯ ಗುರುಗಳು ಲಕ್ಷ್ಮೀಪುತ್ರ ಕಿರನಳ್ಳಿ ,ಚಂದ್ರಕಾAತ ದೇವರಮನಿ, ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ದೈಹಿಕ ಶಿಕ್ಷಕಿಯರಾದ ಸೀತಾ ಆರೇಶಂಕರ, ಪ್ರಶಾಂತ ಗಡದೆ, ಸರುಬಾಯಿ ಬಂಡಗರ,ಸುನೀತಾ ಗುಂಡದ, ವೀಣಾ ಗುಡಿಮಠ ಉಪಸ್ಥಿತರಿದ್ದರು