ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ : ಕೊಳಾರಿ

Jul 15, 2025 - 01:11
 0
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ : ಕೊಳಾರಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಆಲಮೇಲ: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳು ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಪಂಚ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ಒದಗಿಸುವ ಮೂಲಕ ನುಡಿದಂತೆ ನಡೆದುಕೊಂಡಿದೆ ಎಂದು ಗ್ಯಾರಂಟಿ ಸಮೀತಿಯ ತಾಲೂಕ ಅಧ್ಯಕ್ಷ ಅಶೋಕಗೌಡ ಕೊಳಾರಿ ಹೇಳಿದರು.                

ಸೋಮವಾರ ಪಟ್ಟಣದ ಬಸ್ ನಿಲ್ದಾನದಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದ್ದಾದ ಶಕ್ತಿಯೋಜನೆಯ ಮೂಲಕ ೫೦೦ ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದ ಸಂಭ್ರಮ ಆಚರಿಸಿ ಮಾತನಾಡಿದರು.                

ಶಕ್ತಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರು ರಾಜ್ಯಾದ್ಯಂತ ಉಚಿತ ಪ್ರಯಾಣ ಮಾಡುತ್ತಿದ್ದು ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯೋಜನೆ ಜಾರಿಗೊಂಡಿ ಇಲ್ಲಿವರೆಗೂ ೫೦೦ ಕೋಟಿ ಉಚಿತ ಟಿಕೆಟ್‌ಗಳು ಶಕ್ತಿಯೋಜನೆ ಯಡಿಯಲ್ಲಿ ವಿತರಿಸಲ್ಪಟ್ಟಿವೆ ಎಂದು ಹೇಳಿದರು.                    

ಪ.ಪಂ ಅಧ್ಯಕ್ಷ ಸಾಧಿಕ ಸುಂಬಡ ಮಾತನಾಡಿ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡು ಪಂಚ ಗ್ಯಾರಂಟಿ ಯೋಜನೆಗಳು ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಯಾವುದೆ ಸರ್ಕಾರದ ಯೋಜನೆಗಳು ಜನಸಾಮನ್ಯರಿಗೆ ಸಂಪೂರ್ಣವಾಗಿ ತಲುಪತಿರಲಿಲ್ಲ ಮದ್ಯ ದಲ್ಲಾಳಿಗಳ ಹಾವಳಿಯು ಹೆಚ್ಚಾಗಿತ್ತು ಹಿಗಾಗಿ ಸರ್ಕಾರದ ಯೋಜನೆಗಳು ಯಶಸ್ವಿಯಾಗುತಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳು ನೇರವಾಗಿ ಜನರಿಗೆ ತಲುಪಿಸುವಂತೆ ಕೆಲಸ ಮಾಡುವ ಮೂಲಕ ಸಂಪರ್ಣವಾಗಿ ಯಶಸ್ವಿಯಾಗಿದೆ ಎಂದು ಹೇಳಿದರು. ೫೦೦ ಕೋಟಿ ಉಚಿತ ಟಿಕೆಟ್‌ಗಳು ಶಕ್ತಿಯೋಜನೆಯಡಿಯಲ್ಲಿ ವಿತರಿಸಲ್ಪಟ್ಟಿರುವ ನಿಮಿತ್ಯ ಗ್ಯಾರಂಟಿ ಸಮೀತಿ ವತಿಯಿಂದ ಸರ್ಕಾರಿ ಸಾರಿಗೆ ಬಸ್‌ಗೆ ತಳಿರು ತೋರಣಗಳಿಂದ ಶೃಂಗರಿಸಿ ಇಶೇಷ ಪೂಜೆಗೈದು ಸಿಹಿ ಹಂಚಿ ಸಂಭ್ರಮಿಸಿದರು.                

ಈ ವೇಳೆ ಸಿಂದಗಿ ಸಾರಿಗೆ ಘಟಕದ ಅಧಿಕಾರಿಗಳಾದ ಸಂತೋಷ ಹತ್ತರಕಿ, ಶಿವಾನಂದ ಮರಬಿ, ಗ್ಯಾರಂಟಿ ಸಮೀತಿಯ ಸದಸ್ಯರಾದ ವಾಹಬ ಸುಂಬಡ, ಪ್ರಶಾಂತ ನಾಶೀ, ಮಲ್ಲು ಪ್ಯಾಟಿ, ಬಸವರಾಜ ನಂದೂರ, ಸಂತೋಷ ಜರಕರ, ಭೀಮು ಬಮ್ಮನಹಳ್ಳಿ, ಮಲ್ಲು ಅಚಲೇರಿ, ಈರಣ್ಣ ಕಲ್ಲೂರ, ಅಪ್ಪುಗೌಡ ಪಾಟೀಲ, ಶೈಲಾ ಹೊಸಮನಿ, ಸೈಪನ ಪ್ಯಾಟಿ ಮುಂತಾದವರು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.