ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಮುದ್ದೇಬಿಹಾಳ : ಪಟ್ಟಣದಿಂದ ಬಿದರಕುಂದಿ ಗ್ರಾಮದ ಕಡೆಗೆ ತೆರಳುತ್ತಿದ್ದ ಬೈಕ್‌ವೊಂದು ರಸ್ತೆ ಪಕ್ಕದ ಸಿಮೇಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ್ದು ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಗುರಡ್ಡಿ ಪೆಟ್ರೋಲ್ ಪಂಪ್ ಎದುರಿಗೆ ಸೋಮವಾರ ನಡೆದಿದೆ.
ಸಾವನ್ನಪ್ಪಿದ ಸವಾರರನ್ನು ಬಿದರಕುಂದಿ ಗ್ರಾಮದ ಆಕಾಶ ಮಲ್ಲಪ್ಪ ಕುರಿ(೨೨) ಎಂದು ಗುರುತಿಸಲಾಗಿದೆ.
ಅದೇ ಗ್ರಾಮದ ಅನ್ವರ್ ಜಾಲಗಾರ(೨೦)ಗಾಯಗೊಂಡಿದ್ದು ಆತನನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಪಿಎಸೈ ಸಂಜಯ ತಿಪರೆಡ್ಡಿ ಭೇಟಿ ನೀಡಿದ್ದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.