ಕಟ್ಟ ಕಡೆಯ ಮಹಿಳೆಗೂ ತಲುಪಿದ ಶಕ್ತಿ ಯೋಜನೆ : ಸಂತಸ ವ್ಯಕ್ತಪಡಿಸಿದ ಸಿಎಂ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ೫೦೦ ಕೋಟಿ ಮಹಿಳೆಯರು ದಾರಿ ಚೀಟಿ ಪಡೆದ ಪ್ರಯುಕ್ತ ಜಿಲ್ಲೆಯ ಇಂಡಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪೂಜೆ ಸಲ್ಲಿಸಿದರು.
ಶಕ್ತಿ ಯೋಜನೆಯಿಂದ ಲಾಭ ಪಡೆದಂತ ಮಹಿಳೆಯರಿಂದ ಸಂವಾದವನ್ನು ನಡೆಸಿದರು.
ಇಂಡಿ ತಾಲೂಕಿನ ಬಬಲಾದ ಗ್ರಾಮದ ಒಡಲ ದನಿ ಮಹಿಳಾ ಒಕ್ಕೂಟದ ಮಹಿಳೆಯರು ಹಾಗೂ ಒಡಲದ್ವನಿ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಡಾ. ಭುವನೇಶ್ವರಿ ಕಾಂಬಳೆ ತಮ್ಮ ಸಾವಯವ ಆಹಾರಗಳಾದ ಶೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಚಟ್ನಿ ಇತ್ಯಾದಿಗಳನ್ನು ಬೆಂಗಳೂರಿಗೆ ಹೋಗಿ ಮಾರಾಟ ಮಾಡಿ ಲಕ್ಷ ರೂಪಾಯಿಗಳ ಆದಾಯ ಪಡೆಯುತ್ತಿರುವದಾಗಿ ತಮ್ಮ ಯಶೋಗಾಥೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಮುಖ್ಯಮಂತ್ರಿಗಳು ಅವರ ಯಶೋಗಾಥೆಯನ್ನು ಕೇಳಿ ತಾವು ಜಾರಿಗೆ ತಂದAತಹ ಶಕ್ತಿ ಯೋಜನೆಯು ಕಟ್ಟ ಕಡೆಯ ಮಹಿಳೆಗೂ ಸಹ ತಲುಪಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಮಹಿಳಾ ಒಕ್ಕೂಟದ ಮಹಿಳೆಯರಿಗೆ, ಸರ್ಕಾರದ ಯೋಜನೆಗಳ ಲಾಭಗಳನ್ನು ಪಡೆದು ಸ್ವಾವಲಂಬಿಗಳಾಗಿ ಬಾಳಬೇಕೆಂದು ಶುಭ ಹಾರೈಸಿದರು.
ಈ ವೇಳೆ ಶಾಸಕ ಯಶವಂತರಾಯಡ ಪಾಟೀಲ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಜಿಲ್ಲಾಮಟ್ಟದ ಅಧಿಕಾರಿಗಳು ಸೇರಿದಂತೆ ಇನ್ನೀತರರು ಇದ್ದರು.