ವಿದೇಶಿ ಪ್ರಯಾಣ ಪ್ರಪಂಚವನ್ನು ಅರ್ಥಮಾಡಿಕೊಳ್ಳುವ ಒಂದು ಉತ್ತಮ ಮಾರ್ಗ : ಶಿವರಾಜ ಅಂಡಗಿ

Jul 6, 2025 - 09:55
 0
ವಿದೇಶಿ ಪ್ರಯಾಣ ಪ್ರಪಂಚವನ್ನು ಅರ್ಥಮಾಡಿಕೊಳ್ಳುವ ಒಂದು ಉತ್ತಮ ಮಾರ್ಗ : ಶಿವರಾಜ ಅಂಡಗಿ
ಜಯನಗರ ಕಾಲೋನಿಯಲ್ಲಿ ರಟಕಲ್ ಕುಟುಂಬದ ದಂಪತಿಗಳು ವಿದೇಶಕ್ಕೆ ಪ್ರಯಾಣದ ಮುನ್ನದಿನ ವಚನೋತ್ಸವ ಪ್ರತಿಷ್ಠಾನದ ಟ್ರಸ್ಟ್ ಸಮಿತಿ ವತಿಯಿಂದ ವಚನ ಗ್ರಂಥ ನೀಡುವ ಮೂಲಕ ಪ್ರಯಾಣಕ್ಕೆ ಶುಭಕೋರಿದರು, ಬಸವರಾಜ ಗೋಳಾಗುಂಡಿ, ಶಿವರಾಜ ಅಂಡಗಿ, ರೇವಣಸಿದ್ದಪ್ಪ ಬೋಗಶೆಟ್ಟಿ, ಕಲ್ಯಾಣಪ್ಪ ಬಿರಾದಾರ, ರೇವಣಸಿದ್ದಪ್ಪ ಜೀವಣಗಿ, ಶೋಭಾದೇವಿ ಚಕ್ಕಿ ಉಪಸ್ಥಿತರಿದ್ದರು.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 
ಪ್ರಯಾಣವು ಕೇವಲ ವಿರಾಮ ಚಟುವಟಿಕೆಗಳಿಗಿಂತ ಹೆಚ್ಚಿನದಾಗಿರದೇ ಇದು ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಕಲಿಯುವ, ಬೆಳೆಯುವ ಮತ್ತು ಅರ್ಥಮಾಡಿಕೊಳ್ಳುವ ಒಂದು ಉತ್ತಮ ಮಾರ್ಗವಾಗಿದೆ. ಇದರಿಂದ ನಾವು ಜೀವನದಲ್ಲಿ ವಿವಿಧ ಸಂಸ್ಕೃತಿ, ಭಾಷೆ, ಉಡುಗೆ-ತೊಡಟುಗೆ, ನಾಡು-ನುಡಿಗಳಿಂದ ಅಮೂಲ್ಯವಾದ ಪಾಠಗಳನ್ನು ಕಲಿಯಬಹುದು ಎಂದು ಇತ್ತೀಚಿಗೆ ಜಯನಗರ ಬಡಾವಣೆ ವಚನೋತ್ಸವ ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿಗಳಾದ ವಿ.ಎಸ್. ರಟಕಲ್ ಹಾಗೂ ಪಾರ್ವತಿ ರಟಕಲ್ ದಂಪತಿಗಳು ಅಮೇರಿಕ ವಿದೇಶಕ್ಕೆ ಪ್ರಯಾಣಕ್ಕಿಂತ ಪೂರ್ವಭಾವಿಯಾಗಿ ನಡೆದ ಬೀಳ್ಕೊಡುವ ಸಮಾರಂಭದಲ್ಲಿ ವಚನೋತ್ಸವ ಪ್ರತಿಷ್ಠಾನದ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ಮಾತನಾಡಿದರು. 
ಜ್ಞಾನವನ್ನು ಸಂಪಾದಿಸುವ ಹಲವು ಮಾರ್ಗಗಳಿವೆ, ದೇಶವನ್ನು ಸುತ್ತುವುದರ ಮೂಲಕ ನೋಡಿ, ಕೇಳಿ ವಿಷಯಗಳನ್ನು ಅರಿತು ಬುದ್ದಿವಂತರಾಗಬಹುದು ಎನ್ನುತ್ತಾ ದೇಶ ಸುತ್ತು ಕೋಶ ಓದು ಎಂಬ ಜನಪರ ಗಾದೆ ಕುರಿತು ಅನೇಕ ವಿಚಾರಗಳು ವಚನೋತ್ಸವ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಬಸವರಾಜ ಧೂಳಾಗುಂಡಿ ಮಾತನಾಡಿದರು. 
ಪ್ರಪಂಚದ ಅನೇಕ ದೇಶಗಳು ನಮ್ಮ ಭಾರತ ದೇಶದ ಮುಖ ಮಾಡಿರುವುದಲ್ಲದೇ, ನಮ್ಮ ಸಂಸ್ಕೃತಿ ಆಚರಣೆಯನ್ನು ಅನುಕರಣೆ ಮಾಡುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ತಾವು ವಿದೇಶಕ್ಕೆ ಹೋಗುತ್ತಿರುವ ವಿಷಯ ಬಹಳ ಸಂತೋಷ ನಮ್ಮ ವಚನ ಸಾಹಿತ್ಯ ವಿದೇಶದಲ್ಲಿ ಕೂಡ ಬಿತ್ತಿ ಬೆಳೆಸುವಂತೆ ಮಾರ್ಗದರ್ಶನ ಮಾಡುತ್ತಾ ನಿಮ್ಮ ಪ್ರಯಾಣ ಸುಖಕರವಾಗಲಿ ಎಂದು ವಚನೋತ್ಸವ ಪ್ರತಿಷ್ಠಾನದ ಟ್ರಸ್ಟ್ ಕಮಿಟಿಯ ಹಿರಿಯ ಸದಸ್ಯರಾದ ರೇವಣಸಿದ್ದಪ್ಪ ಬೋಗಶೆಟ್ಟಿ ಮಾತನಾಡಿದರು. 
ಪ್ರಾರಂಭದಲ್ಲಿ ವಚನೋತ್ಸವ ಪ್ರತಿಷ್ಠಾನದ ಸಂಚಾಲಕರಾದ ಕಲ್ಯಾಣಪ್ಪ ಬಿರಾದಾರ ಹಾಗೂ ವಿಶ್ವನಾಥ ಮಂಗಲಗಿ ವಚನ ಗಾಯನ ಮಾಡಿದರು. ಹಿರಿಯರಾದ ರೇವಣಸಿದ್ದಪ್ಪ ಜೀವಣಗಿ ಸ್ವಾಗತಿಸಿದರು, ಶೋಭಾದೇವಿ ಚಕ್ಕಿ ವಂದಿಸಿದರು. 
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.