ಅಚ್ಚುಕಟ್ಟಾಗಿ ಕ್ರೀಡಾಕೂಟ ಆಯೋಜನೆ ಮಾಡಿ; ಬಳೋಲಮಟ್ಟಿ

ವಿಜಯಪುರ: ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಅಚ್ಚುಕಟ್ಟಾಗಿ ಕ್ರೀಡಾಕೂಟ ಆಯೋಜನೆ ಮಾಡಬೇಕು ಎಂದು ವಿಜಯಪುರ ಗ್ರಾಮೀಣವಲಯದ ಬಿಇಓ ಪ್ರಮೋದಿನಿ ಬಳೋಲಮಟ್ಟಿ ಹೇಳಿದರು.
ನಗರದ ಅಗಸ್ತ್ಯ ಫೌಂಡೇಶನದಲ್ಲಿ ಗುರುವಾರ ನಡೆದ 2025-26 ನೇ ಸಾಲಿನ ಕ್ರೀಡಾಕೂಟದ ಪೂರ್ವ ಭಾವಿ ಸಭೆಯಲ್ಲಿ ತಾಲ್ಲೂಕ ದೈಹಿಕ ಶಿಕ್ಷಣ ಶಿಕ್ಷಕರಿಗೆ ಹೇಳಿದರು.
ಈ ವರ್ಷದ ಕ್ರೀಡಾಕೂಟಗಳನ್ನು ಆಯೋಜನೆ ಮಾಡಿ ಮಕ್ಕಳು ಪಾಠದ ಜೊತೆ ಆಟದಲ್ಲೂ ಆಸಕ್ತಿ ಹೊಂದಬೇಕು. ಮಕ್ಕಳಿಗೆ ಕ್ರೀಡಾಕೂಟ ಏರ್ಪಡಿಸುವದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಮರ್ಥರಾಗುವರು. ಮಕ್ಕಳು ಸರ್ವಾಂಗೀಣ ಅಭಿವೃದ್ಧಿ ಹೊಂದಿ ನಾಯಕತ್ವ ಗುಣ, ಕ್ರೀಡಾ ಪ್ರತಿಭೆ, ಸ್ಪರ್ಧಾತ್ಮಕ ಮನೋಭಾವನೆ ಹಾಗೂ ಮನರಂಜನೆ ಹೊಂದುವರು.
ಶಾಲೆಯಲ್ಲಿ ಶಿಸ್ತು ಸುಚಿತ್ವ ಕಾಪಾಡುವದು, ಶಾಲೆಯ ಎಲ್ಲ ಸಹಪಠ್ಯ ಚಟುವಟಿಕೆಗಳ ಜೊತೆ ಬಿಸಿ ಊಟದ ಸಂಪೂರ್ಣ ಉಸ್ತುವಾರಿ ವಹಿಸುವುದು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸ್ಪಷ್ಟ ಓದು, ಶುದ್ಧ ಬರಹ, ಸರಳ ಲೆಕ್ಕಗಳನ್ನು ಬರುವ ಹಾಗೆ ನೋಡಿಕೊಳ್ಳುವದು. ಶಾಲೆಯ ಎಲ್ಲ ಸಂಪೂರ್ಣ ಯಶಸ್ವೀಯಲ್ಲಿ ಶಿಕ್ಷಕರ ಪಾತ್ರ ಬಹಳಷ್ಟು ಇದೆ ಅದನ್ನು ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೋಮಶೇಖರ ಬಿರಾದಾರ, ಪ್ರಭು ಬಿರಾದಾರ, ಇಸಿಓ, ಸಿಆರ್ಪಿ, ಶಾಲಾ ಮುಖ್ಯ ಗುರುಗಳು, ದೈಹಿಕ ಶಿಕ್ಷಣ ಶಿಕ್ಷಕರು ಹಾಜರಿದ್ದರು.