ಡ್ಯೂಡ್ ಚಿತ್ರದ ಟೀಸರ್ ಬಿಡುಗಡೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
‘ತೇಜ್ ಆರ್' ಹೆಸರು ಕೇಳಿ ಇರ್ತೀರಾ ಚಿತ್ರರಂಗದಲ್ಲಿ ರಿವೈಂಡ್, ರಾಮಾಚಾರಿ ೨.೦, ಮಿಸೆ ಚಿಗುರಿದಾಗ ಸಿನಿಮಾಗಳನ್ನು ನಿರ್ದೇಶನ ಹಾಗೂ ನಟರಾಗಿ ಕಾಣಿಸಿಕೊಂಡಿದ್ದು, ಚಿರಪರಿಚಿತ. ಈಗ ಅವರ ಮುಂದಿನ ಡ್ಯೂಡ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು. ಎಲ್ಲಾ ಕಡೆ ಉತ್ತಮ ಪ್ರತಿಕ್ರೀಯೆ ಸಿಗುತ್ತಿದೆ. ಇದು ಒಂದು ಕ್ರೀಡಾತ್ಮಕ ಸಿನಿಮಾದ ಜೊತೆಗೆ ಕಮರ್ಷಿಯಲ್ ಆಗಿ ಸಿನಿಮಾವನ್ನು ತಯಾರಿಸಿದ್ದಾರೆ.
ಡ್ಯೂಡ್ ಚಿತ್ರದಲ್ಲಿ ನಾಯಕರಾಗಿ, ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ತೇಜ್ ಆರ್ ಅವರೆ ಕಾರ್ಯ ನಿರ್ವಹಿಸಿದ್ದಾರೆ ಕ್ರಿಯೇಟಿವ್ ಆಗಿ ಭಾಗ್ಯ, ಇಮೇಲ್ ಅಹಮದ್ ಮ್ಯೂಸಿಕ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದು. ಪ್ರೇಮ್ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನ ಸಂಕಲನಕಾರರಾಗಿ ಹನಿ ಸೀನ್ ಮಾಡಿದ್ದಾರೆ. ತಾರಾಗಣದಲ್ಲಿ ಸಾನಿಯಾ ಕಾವೇರಮ್ಮ, ರಾಘವೇಂದ್ರ ರಾಜಕುಮಾರ್, ಸ್ಪರ್ಶ ರೇಖಾ, ವಿಜಯ್ ಸಿಂಧೂರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರ ಪೋಸ್ಟರ್ ಬಾರಿ ಸದ್ದು ಮಾಡುತ್ತಿದ್ದು, ಚಿತ್ರದ ಹಾಡುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಚಿತ್ರ ಕೂಡ ಇದೇ ವರ್ಷ ತೆರೆಗೆ ಬರಲು ಸಿದ್ಧವಾಗಿದೆ. ಹೀಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಸಿನಿಮಾಗಳನ್ನು ಮಾಡಿ ತೇಜ್ ಅವರು ಬೆಳೆಯಲಿ ಎಂದು ನಮ್ಮ ಆಶಯ. ಚಿತ್ರ ಯಶಸ್ವಿಯಾಗಲಿ.