ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಸಿಂದಗಿ: ಶಿಕ್ಷಕರು ವಿಜ್ಞಾನದ ಮಹತ್ವ, ಪ್ರಯೋಗ, ಜ್ಞಾನಿಗಳ ಕಥೆ ಹೇಳುವುದರಿಂದ ಮಕ್ಕಳಿಗೆ ವಿಜ್ಞಾನ ವಿಷಯದಲ್ಲಿ ಆಸಕ್ತಿ ಹೆಚ್ಚಲು ಅನುಕೂಲವಾಗುತ್ತದೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ನಿಂಗನಗೌಡ ಬಿರಾದಾರ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಪಾಠ ಶಾಲಾ ಆವರಣದಲ್ಲಿ ಬುಧುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಜ್ಞಾನ ಮಹತ್ವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲೆಯ ಹಿರಿಯ ಶಿಕ್ಷಕ ಚಂದ್ರಶೇಖರ ಬುಯ್ಯಾರ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಸುತ್ತ ಮುತ್ತಲಿನಲ್ಲಿ ನಡೆಯುವ ಅನೇಕ ಪ್ರಾಕತಿಕ ಘಟನೆಗಳ ಕಡೆ ಹೆಚ್ಚು ಗಮನಹರಿಸಬೇಕು. ಇದರಿಂದ ವಿಜ್ಞಾನ ವಿಷಯ ಕಲಿಕೆಯಲ್ಲಿ ತಮ್ಮಗೆ ಉತ್ಸಾಹ ಹೆಚ್ಚುತ್ತದೆ. ಅದೇ ರೀತಿ ಪ್ರಾಕೃತಿಕ ಘಟನೆಗಳನ್ನು ಕುತೂಹಲದಿಂದ ವೀಕ್ಷಿಸುವ, ನಾನಾ ಸಂದೇಹಗಳಿಗೆ ಉತ್ತರ ಕಂಡುಕೊಳ್ಳುವ ಮನೋಭಾವವನ್ನು ಮಕ್ಕಳಲ್ಲಿ ಶಿಕ್ಷಕರು ಬೆಳೆಸುವುದು ಮುಖ್ಯ ಎಂದರು.
ವಿಜ್ಞಾನ ಶಿಕ್ಷಕ ಕೃಷ್ಣರಾವ್ ಕುಲಕರ್ಣಿ ಮಾತನಾಡಿ ಸಿ.ವಿ.ರಾಮನ್, ಥಾಮಸ್ ಆಲ್ವ ಎಡಿಸನ್, ಮೇರಿ ಕ್ಯೂರಿ, ಪಿಯರಿ ಕ್ಯೂರಿ ಮುಂತಾದ ವಿಜ್ಞಾನಿಗಳ ಕಥೆ ಹೇಳಿದರಲ್ಲದೆ ನಿತ್ಯ ಜೀವನದಲ್ಲಿ ವಿಜ್ಞಾನದ ಮಹತ್ವವೇನು ಎಂಬ ಬಗ್ಗೆ ತಿಳಿಸಿದರು.
ಸಿ.ವಿ.ರಾಮನ್ ಅವರು ತಮ್ಮ ಸಂಶೋಧನೆಯಾದ ರಾಮನ್ ಪರಿಣಾಮವನ್ನು ಇಂದು ಜಗತ್ತಿನಲ್ಲಿ ಮೂಢನಂಬಿಕೆಯನ್ನು ತೊರೆದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಎಸ್ ಡಿ ಎಂ ಸಿ ಸದಸ್ಯ ನಭಿರುಸಲ್ ಬೆಕಿನಾಳ, ಪಾಲಕ ಬಾಳು ಬಿರಾದಾರ, ಮುಖ್ಯ ಶಿಕ್ಷಕ ನಿಂಗನಗೌಡ ಪಾಟೀಲ ಶಿಕ್ಷಕ ಭಾಗಣ್ಣ ಗೋಲಗೇರಿ ದಯಾನಂದ ಅಂಬಿಗೇರ ವೇದಿಕೆ ಮೇಲೆ ಇದ್ದರು.
ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ಸ್ವಾಗತಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ಶಾಲೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.