ದೂರದರ್ಶನದಲ್ಲಿ ಯೋಗ ಸಪ್ತಾಹ ಯಶಸ್ವಿ : ಆಯುಷ್ ಇಲಾಖೆಯಿಂದ "ಯೋಗ ಸಂಗಮ ಪುರಸ್ಕಾರ" ಪ್ರದಾನ

Jun 25, 2025 - 07:23
 0
ದೂರದರ್ಶನದಲ್ಲಿ ಯೋಗ ಸಪ್ತಾಹ ಯಶಸ್ವಿ : ಆಯುಷ್ ಇಲಾಖೆಯಿಂದ "ಯೋಗ ಸಂಗಮ ಪುರಸ್ಕಾರ" ಪ್ರದಾನ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಬೆಂಗಳೂರು: ಅಂತರರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದಿAದ ‘ಯೋಗ ಸಪ್ತಾಹ’ವನ್ನು ಆಚರಿಸಲಾಯಿತು. ಯಶಸ್ವಿಯಾಗಿ ಯೋಗ ಕಾರ್ಯಕ್ರಮಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಕೇಂದ್ರ ಆಯುಷ್ ಸಚಿವಾಲಯ ಪ್ರಶಂಶಿಸಿ "ಯೋಗ ಸಂಗಮ ಪತ್ರ" ನೀಡಿ ಗೌರವಿಸಿದೆ.

ಜೂನ್ 18ರಿಂದ 24 ರವರೆಗೆ ಪ್ರತಿದಿನ ಸಂಜೆ ೫ ಗಂಟೆಗೆ, ಬೆಂಗಳೂರು ದೂರದರ್ಶನದ ಆವರಣದಲ್ಲಿ, ಯೋಗ ಶಿಕ್ಷಕಿ ಪೂರ್ಣಿಮಾ ಕಂದಿ ಅವರು ದೈನಂದಿನ ಬದುಕಿಗೆ ಅಗತ್ಯವಾಗಿರುವ ವಿವಿಧ ಆಸನಗಳನ್ನು ಕಲಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಯೋಗದ ಮಹತ್ವ ಕುರಿತು ಅರಿವು ಮೂಡಿಸುವ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು.

ಜೂನ್ 21ರಂದು ಯೋಗ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ, ಅಖಿಲ ಭಾರತ ತಾಂತ್ರಿಕ ಪರಿಷತ್ತಿನ ಅಧ್ಯಕ್ಷ ಟಿ. ಜಿ. ಸೀತಾರಾಮ್ ಹಾಗೂ ಬೆಂಗಳೂರು ವಿ.ವಿ.ಐ.ಪಿ. ಉಪ ಆರಕ್ಷಕ ಆಯುಕ್ತರಾದ ಮಂಜುನಾಥ್ ಬಾಬು ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಪಿ. ಐ. ಬಿ. ಹೆಚ್ಚುವರಿ ಮಹಾನಿರ್ದೇಶಕರಾದ ಎಸ್. ಜಿ. ರವೀಂದ್ರ, ದೂರದರ್ಶನದ ಅಭಿಯಂತರ ಮಹಾನಿರ್ದೇಶಕಾದ ಹಾಗೂ ಕಚೇರಿ ಮುಖ್ಯಸ್ಥರಾದ ಎ.ಹನುಮಂತ್, ಆರ್. ವಿ. ಕಾಲೇಜಿನ ಪ್ರಾಂಶುಪಾಲರಾದ ಕೆ. ಎನ್. ಸುಬ್ರಮಣ್ಯ ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.