ಕೆಎಸ್‍ಆರ್‍ಟಿಸಿಗೆ ರಾಷ್ಟ್ರೀಯ ಇಕಾನಾಮಿಕ್ ಟೈಮ್ಸ್ ಪಿಎಸ್‍ಯು ಲೀಡರ್‍ಶಿಪ್ ಅಂಡ್ ಎಕ್ಸಲೆನ್ಸ್ ಪ್ರಶಸ್ತಿ – 2025

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆ.ಎಸ್.ಆರ್.ಟಿ.ಸಿ.) ಕೈಗೊಂಡಿರುವ ಬಸ್‍ಗಳ ಬ್ರಾಂಡಿಂಗ್ ಉಪಕ್ರಮಕ್ಕೆ ಬಳಕೆದಾರರ ಅನುಭವವನ್ನು ಹೆಚ್ಚಿಸುವಲ್ಲಿ ಸಾಧನೆಗೈದ ಕಾರಣಕ್ಕಾಗಿ ಇಕಾನಾಮಿಕ್ ಟೈಮ್ಸ್ ಪಿಎಸ್‍ಯು ಲೀಡರ್‍ಶಿಪ್ ಅಂಡ್ ಎಕ್ಸಲೆನ್ಸ್ ಅವಾರ್ಡ್ 2025 ಪುರಸ್ಕಾರ ದೊರಕಿದೆ.
ಈ ಪ್ರಶಸ್ತಿಯನ್ನು ಹೈಯಟ್ ರಿಜೆನ್ಸಿ ಹೋಟೆಲ್, ನವದೆಹಲಿಯಲ್ಲಿ 2025ರ ಜೂನ್ 19ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಯಿತು.
ಈ ಪುರಸ್ಕಾರವನ್ನು ಭಾರತ ಸರ್ಕಾರದ ನ್ಯಾಷನಲ್ ಇನ್‍ಫಾರ್ಮೆಟಿಕ್ಸ್ ಸೆಂಟರ್ (ಎನ್ ಐ ಸಿ) ನ ಡೈರೆಕ್ಟರ್ ಜನರಲ್ ಇಂದರ್ ಪಾಲ್ ಸಿಂಗ್ ಅವರು ನಿಗಮಕ್ಕೆ ನೀಡಿದರು.
ಈ ಪ್ರಶಸ್ತಿಯನ್ನು ನಿಗಮದ ಪರವಾಗಿ ವೆಂಕಟೇಶ್ ಟಿ, ಮುಖ್ಯ ಕಾನೂನು ಅಧಿಕಾರಿ ಮತ್ತು ಕುತ್ಬುದ್ದೀನ್ ಹವಾಲ್ದಾರ್, ಮುಖ್ಯ ಕಾಮಗಾರಿ ಅಭಿಯಂತರರು, ಕೇಂದ್ರ ಕಚೇರಿ, ಬೆಂಗಳೂರು ಇವರು ಸ್ವೀಕರಿಸಿದರು.