ಕ್ಷೇಮ ಕುಶಲ ಮಕ್ಕಳ ಆಟ-ಪಾಠ ನಮಗೂ ಜೀವನ ಪಾಠ : ಭಾವಿಕಟ್ಟಿ

Jun 21, 2025 - 11:27
 0
ಕ್ಷೇಮ ಕುಶಲ  ಮಕ್ಕಳ ಆಟ-ಪಾಠ ನಮಗೂ ಜೀವನ ಪಾಠ : ಭಾವಿಕಟ್ಟಿ


ಸಿಂದಗಿ: ಮಕ್ಕಳ ಬಣ್ಣಬಣ್ಣದ ಆಟಿಕೆಗಳು, ಅದನ್ನು ಕಂಡಾಗ ಅವರ ಕಣ್ಣಲ್ಲಿ ಕಾಣುವ ಖುಷಿ-ಬೆರಗು, ಸಿಕ್ಕ ಯಾವುದೇ ವಸ್ತುವನ್ನೂ ಅವರ ಆಟದಲ್ಲಿ ಸೂಕ್ತವಾಗಿ ಉಪಯೋಗಿಸಿಕೊಳ್ಳುವ ಸೃಜನಶೀಲತೆ, ತೊದಲು ನುಡಿಯಲ್ಲಿ ತಪ್ಪುತಪ್ಪಾಗಿ ಪದಗಳನ್ನು ಉಚ್ಚರಿಸುವ ರೀತಿ, ಕುತೂಹಲ ತುಂಬಿದ ಅವುಗಳ ಪ್ರಶ್ನೆಗಳು ಮತ್ತು ಅದಕ್ಕೆ ಉತ್ತರಿಸಲು ಸಾಧ್ಯವಾಗದೆ ದೊಡ್ಡವರು ತಡವರಿಸಿ ಪೇಚಿಗೆ ಸಿಕ್ಕಿಕೊಳ್ಳುವ ಪ್ರಸಂಗಗಳು, ಎಷ್ಟೇ ಸ್ವಚ್ಛಗೊಳಿಸಿದರೂ ಮತ್ತೆ ಮನೆ ತುಂಬಾ ಕಸ ಹಾಕುವ ಮಕ್ಕಳ ಪ್ರವೃತ್ತಿ, ಎಲ್ಲವೂ ಜೀವನವನ್ನು ಎಷ್ಟು ಸಾಧ್ಯವೋ ಅಷ್ಟು ಹಗುರಾಗಿ ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತದೆ ಎಂದು ಆದರ್ಶ ಶಿಕ್ಷಕ ಎ ಎಂ ಭಾವಿಕಟ್ಟಿ ಹೇಳಿದರು.

ತಾಲೂಕಿನ ಆಸಂಗಿಹಾಳ ಗ್ರಾಮದ ಹತ್ತಿರ ಇಲಾರಹಳ್ಳಿ ವಸ್ತಿ ಸರಕಾರಿ ಕಿರಿಯ ಮಾದರಿ ಪ್ರಾಥಮಿಕ ಪಾಠ ಶಾಲೆಯ ಆದರ್ಶ ಶಿಕ್ಷಕರಾದ ಭಾವಕಟ್ಟಿ ಗುರುಗಳು ಮನೆಯ ಆವರಣದಲ್ಲಿ ಮಕ್ಕಳಿಗೆ ಕಚ್ಚಾ ವಸ್ತುಗಳು ಬಳಿಸಿ ಕೊಂಡು ಆಟದ ಸಾಮಾಗ್ರಿಗಳು ತಯಾರಿಸಿರುವದರಿಂದ ಮಕ್ಕಳಲ್ಲಿ ಉತ್ತಮ ಚಟುವಟಿಕೆ ಮೂಲಕ ಹಾಗೂ ಬೆಳೆಯುವ ಮಕ್ಕಳ ಆಸಕ್ತಿಗಳ ಜೊತೆ ಪೋಷಕರ ಆಸಕ್ತಿಗಳೂ ಬೆಳೆಯುತ್ತವೆ. ಮಕ್ಕಳೊಂದಿಗೆ ಆಡುವ ಆಟ, ಓದುವ ಪುಸ್ತಕಗಳು, ಅವರೊಂದಿಗೆ ಕೂಡಿ ಮಾಡುವ ಕಲೆ, ನೃತ್ಯ, ಹಾಡುಗಾರಿಕೆ – ಎಲ್ಲವೂ ನಮ್ಮಲ್ಲಿ ಹೊಸತನದ ಅಲೆಯೆಬ್ಬಿಸುತ್ತದೆ, ಹೊಸ ಕಲಿಕೆಗೂ ದಾರಿ ಮಾಡಿಕೊಡುತ್ತದೆ ಎಂಬ ಆತ್ಮ ವಿಶ್ವಾಸದಿಂದ ಗುರುಗಳು ಆಟಕ್ಕೆ ಸಾಮಾಗ್ರಿಗಳು ತಯಾರಿಸುವದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ .ಕ್ಷೇತ್ರ ಸಮನ್ವಯಾಧಿಕಾರಿ ಆಯ್ ಎಸ್ ಟಕ್ಕೆ ಹಾಗೂ ಅಪಾರ ಶಿಕ್ಷಕರು  ಹಾಗೂ ಸಿಂದಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಮಾಜಿ ಗೌರವ ಕಾರ್ಯದರ್ಶಿ ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ, ಶಿಕ್ಷಕ ಚುಟುಕು ಸಾಹಿತಿ ಬರಹಗಾರ ಕೆ ಜಿ ಹತ್ತಳ್ಳಿ ಅಭಿನಂದಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.