ಬೆಂಗಳೂರಿನಲ್ಲಿ ಇಂದು ಜಿ.ಬಿ.ಮಂಗಳಗಟ್ಟಿ ಸ್ಮರಣಾರ್ಥ ಸಪ್ತಾಹ

Jun 20, 2025 - 11:48
 0
ಬೆಂಗಳೂರಿನಲ್ಲಿ ಇಂದು ಜಿ.ಬಿ.ಮಂಗಳಗಟ್ಟಿ ಸ್ಮರಣಾರ್ಥ ಸಪ್ತಾಹ

ಬೆಂಗಳೂರು:  ಇಂಚಗೇರಿ ಆಧ್ಯಾತ್ಮ ಸಾಂಪ್ರದಾಯದ ನಾಮಧಾರಿಕರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರದ ನಿಲಯ ನಿರ್ದೇಶಕ ದಿ. ಜಿ. ಬಿ. ಮಂಗಳಗಟ್ಟಿ ಹಾಗೂ ಶ್ರೀಕ್ಷೇತ್ರ ಇಂಚಗೇರಿ ಭಾವೈಕ್ಯತೆಯ ತಾಣದ ಸ್ವಾತಂತ್ರ‍್ಯ ಸೇನಾನಿ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಯವರ ಪಾವನ ಸ್ಮರಣಾರ್ಥವಾಗಿ ಪ್ರತಿ ವರ್ಷದಂತೆ ಈ ಬಾರಿಯು ಆಧ್ಯಾತ್ಮ ಸಪ್ತಾಹವನ್ನು ಜೂನ್ ೨೦ /೨೦೨೫ ಶುಕ್ರವಾರ ಬೆಂಗಳೂರು ನಗರದಲ್ಲಿರುವ  ಮಾಧವಾನಂದ.ಜಿ. ಮಂಗಳಗಟ್ಟಿ ಅವರ ನಿವಾಸದಲ್ಲಿ, ಶ್ರೀಕ್ಷೇತ್ರ ಇಂಚಗೇರಿ ಮಠದ ಪೀಠಾಧಿಪತಿ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿದೆ.     

ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಭಾಗವಹಿಸುವ ಮೂಲಕ ಶ್ರೀ ಸದ್ಗುರುಗಳ ಕೃಪೆಗೆ ಪಾತ್ರರಾಗಿ ಎಂದು ಮಾಧವಾನಂದ ಮಂಗಳಗಟ್ಟಿ ಮತ್ತು ಕುಟುಂಬಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸಪ್ತಾಹ ಸ್ಥಳ : ಸ್ಥಳ: ಶ್ರೀ ಮಾಧವಾನಂದ.ಜಿ. ಮಂಗಳಗಟ್ಟಿ ಅವರ ಮನೆ, ಬೆಂಗಳೂರು
G02 Harsha Gateway Apartment clubhouse, Kadugodi 
Bangalore 560067

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.