ಕಾರ್ಪೋರೇಟ್ ಜಗತ್ತು ಅಪೇಕ್ಷಿತ ಕೌಶಲ್ಯಗಳು ಅಗತ್ಯ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ: ಇಂದಿನ ನೂತನ ರಾಷ್ಟಿಯ ಶಿಕ್ಷಣ ನೀತಿಯ ಶಿಕ್ಷಣ ವ್ಯವಸ್ಥೆಯಲ್ಲಿ ಬೋಧನೆ-ಕಲಿಕೆಯು ಒಂದು ಸಂಯೋಜಿತ ಪ್ರಕ್ರಿಯೆಯಾಗಿದ್ದು, ಮಕ್ಕಳ ಕಲಿಕಾ ಆಸಕ್ತಿ, ಅಭಿರುಚಿ ಮತ್ತು ಸಾಮಥ್ಯಗಳನ್ನು ಗುರುತಿಸಿ ಬೋಧನೆಯನ್ನು ವಿದ್ಯಾರ್ಥಿ ಕೇಂದ್ರಿತವನ್ನಾಗಿಸಬೇಕು. ಪ್ರಸ್ತುತ ಬೋಧನೆಯು ಸಾಂಪ್ರದಾಯಿಕ ಮತ್ತು ವಿನೂತನವಾದ ತಂತ್ರಗಳು, ಉಪಕರಣಗಳು ಮತ್ತು ಪ್ರಾಯೋಗಿಕತೆಯನ್ನು ಅಳವಡಿಸಿಕೊಂಡಿರಬೇಕು. ಅದು ಏಕಮುಖವಾಗಿರದೇ ಪಾಠ-ಪ್ರವಚನದ ಜತೆಗೆ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಂಡು, ಪ್ರಶ್ನೋತ್ತರ-ಸಂವಾದ, ಗುಂಪು ಚರ್ಚೆ, ವಿಶ್ಲೇಷಣೆ, ತಾರ್ಕಿಕ ಮತ್ತು ಚಿಂತನಾಶಕ್ತಿಯನ್ನು ಒಡಮೂಡಸುವಂತಿರಬೇಕು. ಅಂದಾಗ ಶಿಕ್ಷಣದ ಉದ್ಧೇಶವು ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನ ಗುರಿಯನ್ನು ಈಡೇರಿಸಲು ಸಾಧ್ಯ ಎಂದು ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ ಸಹ ಪ್ರಾಧ್ಯಾಪಕ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
.
ಅವರು ಬೆಂಗಳೂರಿನ ಅಜೀಂ ಪ್ರೇಮಜೀ ವಿಶ್ವವಿದ್ಯಾಲಯ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಇವುಗಳ ಸಹಯೋಗದಲ್ಲಿ ಸರ್ಕಾರಿ ಪದವಿ ಪ್ರಾಧ್ಯಾಪಕರಿಗಾಗಿ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪ್ರತಿಕ್ರಿಯೆ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಅವರು ಗೋಷ್ಠಿಯಲ್ಲಿ ಮಾತನಾಡುತ್ತಾ, ವಿದ್ಯಾರ್ಥಿಗಳು ಬದಲಾಗುತ್ತಿರುವ ಕಾರ್ಪೊರೇಟ್ ಜಗತ್ತಿಗೆ ಅಗತ್ಯವಾಗಿರುವ ಕೌಶಲ್ಯಗಳನ್ನು ಒಡಮೂಡಿಸಿಕೊಂಡಾಗ ಮಾತ್ರ ದೊರೆಯುವ ಉದ್ಯೋಗಾವಕಾಶಗಳನ್ನು ಬಾಚಿಕೊಳ್ಳಲು ಸಹಕಾರಿಯಾಗಲಿದೆ. ಕೇವಲ ಪದವಿ, ಅಂಕ, ಅರ್ಹತೆ ಇದ್ದರೆ ಸಾಲದು. ವಿಷಯ ಜ್ಞಾನದ ಜತೆಗೆ ಸಂವಹನ ಕೌಶಲ್ಯ, ಪ್ರಾಯೋಗಿಕತೆ, ತಾಂತ್ರಿಕತೆ, ಸೃಜನಾತ್ಮಕತೆ, ಕಂಪ್ಯೂಟರ್ ಜ್ಞಾನ, ಕ್ರಿಯಾತ್ಮಕ ಚಿಂತನೆ, ವಿಭಿನ್ನವಾದ ಆಲೋಚನೆ, ವಾಕ್ಚಾತುರ್ಯ, ಶ್ರಮ ವಿಭಜನೆ ಮತ್ತು ವೈಶಿಷ್ಟಿö್ಯÃಕರಣಗಳಂತಹ ವಿಶೇಷ ಕೌಶಲ್ಯಗಳನ್ನು ಹೊಂದುತ್ತಾ ದೊರೆಯುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಲಿಕೆ ಎಂಬುದು ನಿಂತ ನೀರಾಗಬಾರದು. ಶಿಕ್ಷಕರು ಪ್ರಸ್ತುತ ವಿಷಯದಲ್ಲಾಗುತ್ತಿರುವ ಬದಲಾವಣೆ, ಹೊಸ ಬೋಧನಾ ವಿಧಾನ, ಆಧಾರ ಗ್ರಂಥಗಳ ಓದುವಿಕೆ ಮತ್ತು ಹೊಸತನವನ್ನು ಬೋಧನೆಯಲ್ಲಿ ಅಳವಡಿಸಿಕೊಳ್ಳುವ ಮನಸ್ಥಿತಿ ನಮ್ಮದಾಗಬೇಕು. ಅದರಲ್ಲಿ ಈ ಅಜೀ ಪ್ರೇಮಜೀ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ನೌಕರಿ ಪಡೆಯಲು ಅಥವಾ ಉದ್ಯೋಗಾಕಾಂಕ್ಷಿಗಳನ್ನಾಗಿ ರೂಪಿಸದೇ ಸಮುದಾಯಿಕ ಅಭಿವೃದ್ಧಿಗೆ ಸಹಕಾರಿಯಾಗಬಲ್ಲ ಉದ್ಯಮಶೀಲತೆ, ವ್ಯವಹಾರ, ಕೈಗಾರಿಕೆ ಮತ್ತು ಯಾವುದೇ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸುವಂತೆ ಕೌಶಲ್ಯಪೂರ್ಣರನ್ನಾಗಿ ರೂಪಿಸುತ್ತಿರುವದು ಒಂದು ವಿಶೇಷ. ಅದಕ್ಕಾಗಿ ಇಂತಹ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಬೋಧನೆ-ಕಲಿಕೆ, ಉಪನ್ಯಾಸ ಪದ್ಧತಿ, ಪರೀಕಾ ವಿಧಾನ, ಮೌಲ್ಯಮಾಪನ ವ್ಯವಸ್ಥೆಗಳ ಬಗ್ಗೆ ಅರಿತುಕೊಂಡು ನಮ್ಮ ಸರ್ಕಾರಿ ಕಾಲೇಜುಗಳಲ್ಲಿಯೂ ಅಳವಡಿಸಿಕೊಳ್ಳಲು ಈ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದರು.
ಈ ಗೋಷ್ಠಿಯಲ್ಲಿ ಅಜೀಂ ಪ್ರೇಮಜೀ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಋಷಿಕೇಶ ಬಿ.ಎಸ್, ಎರಡನೇಯ ಗೋಷ್ಠಿಯ ಸಂಪನ್ಮೂಲ ವಿಷಯ ಪರಿಣಿತರಾದ ಪ್ರೊ. ರೋನಿತಾ ಶರ್ಮಾ, ಪ್ರೊ. ಕಿನ್ನರಿ ಪಾಂಡ್ಯ, ಪ್ರೊ. ನಿತ್ಯಾ ವಾಸುದೇವನ, ಕಾರ್ಯಾಗಾರ ಸಂಚಾಲಕರಾದ ಪ್ರೊ. ಅರುಣ. ಎಂ., ಪ್ರೊ. ಶರದ. ಟಿ. ಇನ್ನಿತರರು ಸಹ ಉಪಸ್ಥಿತರಿದ್ದರು.
ಈ ಎರಡು ದಿನಗಳ ಕಾರ್ಯಾಗಾರದಲ್ಲಿ ರಾಜ್ಯದ ಸರ್ಕಾರಿ ಕಾಲೇಜುಗಳ ಸುಮಾರು ೧೫೦ ಕ್ಕೂ ಹೆಚ್ಚು ಜನ ಪ್ರಾಧ್ಯಾಪಕರು ಭಾಗವಹಿಸಿದ್ದರು.