ಸಸಿ ನೀಡುವುದರ ಮೂಲಕ ಜನ್ಮದಿನ ಆಚರಣೆ

ಇಂಡಿ : ಇಂದಿನ ತಂತ್ರಜ್ಞಾನ ಯುಗದಲ್ಲಿ ಪರಿಸರ ಉಳಿಸುವುದು ಮತ್ತು ಸಂರಕ್ಷಣೆ ಮಾಡುವದು ನಾಗರೀಕ ಸಮಾಜದ ಜವಾಬ್ದಾರಿಯಾಗಿದೆ. ಅಂತಹ ಕಾರ್ಯವನ್ನು ವಿದ್ಯಾರ್ಥಿ ನಾಯಕ ರಾಹುಲ ಮಡ್ಡಿಮನಿ ಅವರ ಗೆಳೆಯರ ಬಳಗ ಮಾಡುತ್ತಾ ಬಂದಿದೆ ಎಂದೂ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಸುನೀಲ ಕುಮಾರ ಹೇಳಿದರು.
ಭಾರತೀಯ ರಾಷ್ಟ್ರೀಯ ವಿಧ್ಯಾರ್ಥಿ ಒಕ್ಕೂಟ ಮತ್ತು ಗೆಳೆಯರ ಬಳಗದ ವತಿಯಿಂದ ರಾಹುಲ ಮಡ್ಡಿಮನಿ ಅವರ ಜನ್ಮ ದಿನದ ಪ್ರಯುಕ್ತ ಇಂಡಿ ನಗರ ವಿವಿಧ ಶಾಲಾ ಕಾಲೇಜು ಮತ್ತು ಹಾಸ್ಟೆಲ್ ಆವರಣದಲ್ಲಿ ಸಸಿ ನೆಡುವ ಮೂಲಕ ಮತ್ತು ಸಸಿ ಕೊಡುವ ಮೂಲಕ ವಿಶೇಷವಾಗಿ ಜನ್ಮ ದಿನಾಚರಣೆ ಆಚರಿಸಿದರು ಇದೆ ಸಂದರ್ಭದಲ್ಲಿ. ರಾಹುಲ ಅವರು ಚಿಕ್ಕಂದಿನಿAದಲೂ ಪರಿಸರ ಪ್ರೇಮಿ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಭಾರತೀಯ ರಾಷ್ಟ್ರೀಯ ವಿಧ್ಯಾರ್ಥಿ ಒಕ್ಕೂಟ ಮೂಲಕ ವಿದ್ಯಾರ್ಥಿ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕ ಅಂತಹ ನಾಯಕನ ಜನ್ಮ ದಿನಾಚರಣೆ ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇತರರಿಗೆ ಮಾದರಿ ಎಂದು ಸುನೀಲ ಅತನೂರ ಅವರು ಹೇಳಿದರು.
ಈ ಸಂದರ್ಭದಲ್ಲಿ ಈಶ್ವರ ಸಜ್ಜನ. ಪ್ರಕಾಶ ರವಳಿ, ಹನುಮಂತ ಮೇಲಿನಮನಿ, ರಮೇಶ್ ಮಾವಿನಹಳ್ಳಿ, ಭಾರತರತ್ನ ಮಡ್ಡಿಮನಿ, ಭೀಮಶಂಕರ್ ಮೇಲಿನಕೇರಿ, ರಾಜಕುಮಾರ್ ಸಾಲೋಟಗಿ, ಮರಳಸಿದ್ದ ನಡಿಗೇರಿ, ಆನಂದ ಆಲಮೇಲ ಮತ್ತಿತರು ಉಪಸ್ಥಿತರಿದ್ದರು.