ಪ್ರಥಮ ಚಿಕಿತ್ಸಕರಿಗೆ ಸರ್ಕಾರ ಮಾನ್ಯತೆ ನೀಡಲಿ : ಹರನಾಳ

Jul 1, 2025 - 23:39
 0
ಪ್ರಥಮ ಚಿಕಿತ್ಸಕರಿಗೆ ಸರ್ಕಾರ ಮಾನ್ಯತೆ ನೀಡಲಿ : ಹರನಾಳ
ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರ್ನಾಟಕ ಪ್ರಾಥಮಿಕ ಚಿಕಿತ್ಸಕರ ಸಂಘ ಹಾಗೂ ಪರಿಣತ ಚಿಕಿತ್ಸಕರ ಸಂಘದಿAದ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಚಿಕ್ಕಮಕ್ಕಳ ತಜ್ಞವೈದ್ಯ ಡಾ.ಪರಶುರಾಮ ವಡ್ಡರ ಅವರನ್ನು ಸನ್ಮಾನಿಸಲಾಯಿತು.

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶಗಳಲ್ಲಿ ತಜ್ಞ ವೈದ್ಯರು ತೆರಳದ ಸ್ಥಳಗಳಿಗೆ ತೆರಳಿ ತುರ್ತು ಸಂದರ್ಭಗಳಲ್ಲಿ ಪ್ರಾಥಮಿಕ  ಚಿಕಿತ್ಸೆ ನೀಡುವ ಪ್ರಥಮ ಚಿಕಿತ್ಸಕರಿಗೆ ಸರ್ಕಾರ ಅಧಿಕೃತ ಮಾನ್ಯತೆ ನೀಡಬೇಕು ಎಂದು ಎಂ.ಜಿ.ಎ.ಕೆ ಪ.ಪೂ ಕಾಲೇಜಿನ ಪ್ರಾಚಾರ್ಯ ಎಸ್.ಕೆ.ಹರನಾಳ ಹೇಳಿದರು.


 ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಪ್ರಥಮ ಚಿಕಿತ್ಸಕರ ಸಂಘ ಹಾಗೂ ಪರಿಣಿತ  ಸಂಘದಿAದ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೋವಿಡ್ ಸಮಯದಲ್ಲಿ ಕ್ವಾರಂಟೈನ್ ಆಗಿದ್ದ ಮನೆಗಳಿಗೆ ತೆರಳಿ ತಮ್ಮ ಜೀವದ ಹಂಗು ತೊರೆದು ಚಿಕಿತ್ಸೆ ಕೊಟ್ಟವರು ಪ್ರಥಮ ಚಿಕಿತ್ಸಕರು ಎಂಬುದನ್ನು ಯಾರೂ ಮರೆಯುವಂತಿಲ್ಲ ಎಂದರು.


ಚಿಕ್ಕಮಕ್ಕಳ ತಜ್ಞ ವೈದ್ಯ ಡಾ.ಪರಶುರಾಮ ವಡ್ಡರ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿರುವವರು ಎದುರಿಸುವ ಕಷ್ಟಗಳು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ.ಚಿಕಿತ್ಸೆ ಸಂಬAಧಿತ ವಿಷಯಗಳಲ್ಲಿ ಸಾಮಾನ್ಯ ಜನರು ತಾವೇ ವೈದ್ಯರಂತೆ ನಿರ್ಣಯ ತೆಗೆದುಕೊಂಡು ಕೆಲವೊಮ್ಮ ವೈದ್ಯರೊಂದಿಗೆ ವಾದಕ್ಕಿಳಿಯುವ ಸಂದರ್ಭಗಳನ್ನು ಗಮನಿಸಿದ್ದೇನೆ.ವೈದ್ಯಕೀಯ ಕ್ಷೇತ್ರದಲ್ಲಿರುವವರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿ, ಪ್ರಥಮ ಚಿಕಿತ್ಸಕರ ಬೇಡಿಕೆಗಳನ್ನು ಶಾಸಕ ಸಿ.ಎಸ್.ನಾಡಗೌಡರ ಗಮನಕ್ಕೆ ತಂದು ಒಂದು ಬಾರಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ  ಭೇಟಿ ಮಾಡಲು ನಿಯೋಗ ತೆರಳಲು ಸಿದ್ದರಾದರೆ ಅವರನ್ನು ಭೇಟಿ ಮಾಡಿಸಲು ಸಹಕಾರ ನೀಡುವುದಾಗಿ ತಿಳಿಸಿದರು.


ಪ್ರಥಮ ಚಿಕಿತ್ಸಕರ ಸಂಘದ ಅಧ್ಯಕ್ಷ ಆಯ್.ಬಿ.ಬಡಿಗೇರ,ಎಂ.ಜಿ.ಎA.ಕೆ ಶಾಲೆಯ ಮುಖ್ಯಗುರುಮಾತೆ ವೀಣಾ ಹಿರೇಮಠ, ಮುಖಂಡ ಹಣಮಂತ ಮೇಲಿನಮನಿ, ಡಾ.ವಿಜಯಕುಮಾರ ಗೂಳಿ ಮಾತನಾಡಿದರು.ಪ್ರಥಮ ಚಿಕಿತ್ಸಕರ ಸಂಘದ ಸದಸ್ಯರಾದ ಶಿವರಾಜ ರಕ್ಕಸಗಿ,ಮುತ್ತು ಹುಣಶ್ಯಾಳ, ಆರ್.ವಿ.ಪಾಟೀಲ,ಮಹಾಂತೇಶ ನಿಡಗುಂದಿ, ಬಿ.ಜಿ.ಬಿರಾದಾರ, ಸಿದ್ದು ಕೋರಿ ಮೊದಲಾದವರು ಇದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.