ವಿಜಯಪುರ ಕಾಂಗ್ರೆಸ್ ಕಾರ್ಯಕರ್ತರ ಅಹವಾಲು ಸ್ವೀಕಾರ : ಕಾಂಗ್ರೆಸ್ ಕಾರ್ಯಾಲಯಕ್ಕೆ ಸಚಿವ ಜಾರಕಿಹೊಳಿ ಭೇಟಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಅವರು ವಿಜಯಪುರ ಕಾಂಗ್ರೆಸ್ ಪಕ್ಷದ ಕಾರ್ಯಾಲಯಕ್ಕೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲನ್ನು ಸ್ವೀಕರಿಸಿದರು.
ಈ ವೇಳೆ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ಮಾತನಾಡಿ ಜಿಲ್ಲೆಯಲ್ಲಿ ಅನೇಕ ಜನರು ಪಕ್ಷಕ್ಕಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಜನ ಬಹಳಿದ್ದಾರೆ ಬರುವ ದಿನದಲ್ಲಿ ಅವರಿಗೆ ಪಕ್ಷದಿಂದ ಅಧಿಕಾರ ಕೊಡುವ ಕಾರ್ಯ ಮಾಡಬೇಕಾಗಿ ವಿನಂತಿಸಿದರು.
ನಂತರ ಸಚಿವ ಸತೀಶ ಜಾರಕಿಹೋಳಿ ಮಾತನಾಡಿ ಮುಂದಿನ ದಿನದಲ್ಲಿ ನಿಗಮ ಮಂಡಳಿಯ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಕೆ ಅಧಿಕಾರ ನೀಡುವ ಕುರಿತು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರಿಂದ ಬಂದ ಅಹವಾಲುಗಳನ್ನು ಸ್ವೀಕಾರ ಮಾಡುವ ಮೂಲಕ ಕಾರ್ಯಕರ್ತರನ್ನು ಹುರದುಂಬಿಸಿದರು.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ಅವರು ಅಧ್ಯಕ್ಷತೆಯನ್ನು ವಹಿಸಿಕೊಂಡು ಸಚಿವರಿಗೆ ಪೇಟ ತೊಡಿಸಿ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ಕಟಕಧೋಂಡ, ಮಾಜಿ ಶಾಸಕ ರಾಜು ಆಲಗೂರ, ಹಮೀದ ಮುಶ್ರೀಫ, ಸೋಮನಾಥ ಕಳ್ಳಿಮನಿ, ಡಾ. ಪ್ರಭುಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಸುಭಾಸ ಕಾಲೆಬಾಗ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶಿಗಳಾದ ಎಂ. ಎಂ. ಮುಲ್ಲಾ (ದ್ಯಾಬೇರಿ), ಝಾಕೀರಹುಸೇನ ಮುಲ್ಲಾ, ದೇಸು ಚವ್ಹಾಣ, ರಾಘವೇಂದ್ರ ವಡವಡಗಿ ವಿಜಯಪುರ ಬ್ಲಾಕ್ ಅಧ್ಯಕ್ಷರಾದ ಜಮೀರ ಬಕ್ಷಿ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶಕೀಲ ಬಾಗಮಾರೆ, ಮಾಜಿ ಜಿಲ್ಲಾಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸುಜಾತಾ ಕಳ್ಳಿಮನಿ, ಶ್ರೀದೇವಿ ಉತ್ಲಾಸ್ಕರ, ಸಲೀಮ ಪೀರಜಾದೆ, ಅಂಗ ಘಟಕಗಳ ಅಧ್ಯಕ್ಷರುಗಳಾದ ಆನಂದ ಜಾಧವ, ರಮೇಶ ಗುಬ್ಬೇವಾಡ, ಎಂ. ಎಲ್. ಮಕಾಂದಾರ, ಹರೀಶ ಕೌಲಗಿ, ಅರ್ಜುನ ನಾಯಕವಾಡಿ, ಭಾರತಿ ನಾವಿ, ಅನುಸೂಯಾ ನಿಂಬರಗಿ, ಕಮಲಾ ಗೋಳಸಂಗಿ, ಶರಣಪ್ಪ ಯಕ್ಕುಂಡಿ, ಮಹಿಬೂಬ ಕೂಡಗಿ, ಸರಫರಾಜ ಮಿರ್ದೆ, ಶಫೀಕ ಬಗದಾದಿ, ಲಕ್ಷಿö್ಮÃ ಕ್ಷೀರಸಾಗರ, ರಾಜೇಶ್ವರಿ ಚೋಳಕೆ, ಅಬುಬಕರ ಕಂಬಾಗಿ, ಹಮೀದ ಮನಗೂಳಿ, ಲಕ್ಷö್ಮಣ ಹಂಚಿನಾಳ, ಶ್ರೀಕಾಂತ ಮಾನೆ, ಸಾಜಿದ ರಿಸಾಲದಾರ, ಐಜಾಜ ಮುಕ್ಬಿಲ, ಅನ್ನಪೂರ್ಣ ಬೀಳಗಿಕರ ಕಾರ್ಯಕರ್ತರು ಉಪಸ್ಥಿತರಿದ್ದರು.