ನಾನು ಮಣ್ಣಿಗೆ ಹೋಗುವ ಮುನ್ನ ೧೦ ಸಾವಿರ ಉದ್ಯೋಗ ಕೊಟ್ಟು ಹೋಗುತ್ತೇನೆ : ಜನ್ಮದಿನದಂದು ಮಾಜಿ ಶಾಸಕ ನಡಹಳ್ಳಿ ಭಾವುಕ ಮಾತು

Jul 22, 2025 - 23:01
 0
ನಾನು ಮಣ್ಣಿಗೆ ಹೋಗುವ ಮುನ್ನ ೧೦ ಸಾವಿರ ಉದ್ಯೋಗ ಕೊಟ್ಟು ಹೋಗುತ್ತೇನೆ : ಜನ್ಮದಿನದಂದು ಮಾಜಿ ಶಾಸಕ ನಡಹಳ್ಳಿ ಭಾವುಕ ಮಾತು
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 
ಮುದ್ದೇಬಿಹಾಳ : ನಾನು ಮತಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರಿಂದಲೇ ಜನ ಬೆಂಬಲಿಸಲಿಲ್ಲವೋ ಏನೋ ಆದರೆ ರೈತರ ಮಕ್ಕಳು ಕಷ್ಟ ಅನುಭವಿಸಬಾರದು ಎಂಬ ಉದ್ದೇಶದಿಂದ ನಾನು  ಮಣ್ಣಿಗೆ ಹೋಗುವ ಮುನ್ನ ೧೦ ಸಾವಿರ ಉದ್ಯೋಗ ಕೊಟ್ಟು ಹೋಗುತ್ತೇನೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಭಾವುಕರಾಗಿ ಹೇಳಿದರು.
ಪಟ್ಟಣದ ಮಾರುತಿ ನಗರದಲ್ಲಿರುವ ತಮ್ಮ ಫಾರ್ಮಹೌಸ್‌ನಲ್ಲಿ ಮಂಗಳವಾರ ಅಭಿಮಾನಿಗಳು,ಕಾರ್ಯಕರ್ತರು ಹಮ್ಮಿಕೊಂಡಿದ್ದ ತಮ್ಮ ೫೬ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವೆಲ್ಲ ಜಾತಿ ವಿಷಯ ಬಂದಾಗ ಒಗ್ಗಟ್ಟು ಆಗುತ್ತೇವೆ. ಆದರೆ ಜನರ ಬದುಕು ಕಟ್ಟುವ ನಾಯಕತ್ವವನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಎಡವಿದ್ದೇವೆ.ಆಧುನಿಕ ಬದುಕು ಕಟ್ಟಿಕೊಡುವ, ಸೌಲಭ್ಯಗಳನ್ನು ಜನರಿಗೆ ತಲುಪಿಸುವ ನಾಯಕತ್ವ ಬೇಕು.ತೊಗರಿ ಬೆಳೆ ನಷ್ಟವಾದರೂ ಈ ಸರ್ಕಾರದಿಂದ ಒಂದು ರುಪಾಯಿ ಪರಿಹಾರ ಬಂದಿಲ್ಲ.ಬರುವುದೂ ಇಲ್ಲ. ಈ ಸರ್ಕಾರ,ಈಗ ನೀವು ಆಯ್ಕೆಮಾಡಿಕೊಂಡ  ಜನಪ್ರತಿನಿಧಿ ಹಾಗೆ ಇದ್ದಾರೆ.ರೈತರು ಬೆಳೆ ಇನ್ಸೂರೆನ್ಸ್ ಬಂದಿಲ್ಲ ಎಂದು ಕೇಳುತ್ತಿದ್ದಾರೆ.ಅವರಿಗೆಲ್ಲ ಈಗ ನೀವು ಬಾಯಿ ಬಡಿದುಕೊಳ್ಳಿ ಎಂದೇ ಹೇಳಿದ್ದೇನೆ ಎಂದು ತಿಳಿಸಿದರು.
 
ನೀರಾವರಿ ಯೋಜನೆಗಳು ಅಲ್ಲಿಗೆ ನಿಂತಿವೆ.ನಾಗರಬೆಟ್ಟ ಏತ ನೀರಾವರಿ ಯೋಜನೆ ಏನಾಗಿದೆ.ಬೂದಿಹಾಳ ಪೀರಾಪೂರ ಯೋಜನೆಗಾಗಿ ರೈತರು ಹೋರಾಟ ನಡೆಸುವಾಗ ನಾನು ಹೋರಾಟಕ್ಕೆ ಬೆಂಬಲಿಸುವುದಾಗಿ ಹೇಳುತ್ತಲೇ ಉಸ್ತುವಾರಿ ಸಚಿವರು ಓಡಿ ಬಂದು ಭರವಸೆ ಕೊಟ್ಟು ಹೋದರು.ನೀರಾವರಿಗಾಗಿ ಹೋರಾಟ ಅನಿವಾರ್ಯ ಎಂಬAತಾಗಿದೆ ಎಂದರು.
ಮತಕ್ಷೇತ್ರದಲ್ಲಿ ಕುಡಿವ ನೀರಿನ ಯೋಜನೆ ಸಲುವಾಗಿ ಸಿಸಿ ರಸ್ತೆ ಹಾಳುಮಾಡುತ್ತಿದ್ದಾರೆ. ಆಯ್ಕೆಯಾದವರು ನಿಮ್ಮೂರಿಗೆ ಬಂದು ಧನ್ಯವಾದ ಕೂಡಾ ಹೇಳಲಿಲ್ಲ.ಮೊದಲು ಅವರಿಗೆ ಹಳ್ಳಿಗಳ ಜನಕ್ಕೆ  ನೀರು ಕೊಡಲು ತಿಳಿಸಿ.ನನ್ನ ದುಡಿಮೆಯಲ್ಲಿ ಅರ್ಧ ರಾಜಕಾರಣಕ್ಕೆ, ದಾಸೋಹ ಕ್ಕೆ ವ್ಯಯ ಮಾಡಿದ್ದೇನೆ.ನನಗೆ ಮಂತ್ರಿಯಾಗಿ ಮೆರೆಯಬೇಕು ಎಂಬ ಭಾವನೆ ಇಲ್ಲ.ರೈತರ ಮಕ್ಕಳು ತಮ್ಮ ತಂದೆಯವರು ಅನುಭವಿಸಿದ ಕಷ್ಟ ಅನುಭವಿಸಬಾರದು ಎಂಬ ಕಾರಣದಿಂದ ರಾಜಕಾರಣಕ್ಕೆ ಬಂದಿದ್ದೇನೆ.ಇದು ಕೇವಲ ಭಾ?Àಣಕ್ಕಾಗಿ ಮಾತಲ್ಲ ಸಂಕಲ್ಪದಿAದ ಮಾತನಾಡುತ್ತಿದ್ದೇನೆ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ರಮೇಶ ಬಿದನೂರ, ರವಿಕಾಂತ ಬಗಲಿ,ಪ್ರಭುಗೌಡ ಬಿರಾದಾರ, ಪ್ರಭು ಕಡಿ, ಬಿ.ಪಿ.ಕುಲಕರ್ಣಿ, ಮಲಕೇಂದ್ರಗೌಡ ಪಾಟೀಲ, ಗಂಗಾಧರ ನಾಡಗೌಡ,ರವೀಂದ್ರ ಲೋಣಿ,ಎಂ.ಬಿ.ಅAಗಡಿ,ಎA.ಎಸ್.ಪಾಟೀಲ,ಸುಮAಗಲಾ ಕೋಟಿ,ಕೆ.ವಾಯ್.ಬಿರಾದಾರ,ಮಹದೇವಯ್ಯ ಶಾಸ್ತ್ರೀಗಳು,ಪುರಸಭೆ ಸದಸ್ಯೆ ಸಹನಾ ಬಡಿಗೇರ ಮಾತನಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸೇರಿದಂತೆ ಪಕ್ಷದ ಮುಖಂಡರು ಇದ್ದರು.ನಡಹಳ್ಳಿಯವರ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು, ಕಾರ್ಯಕರ್ತರು ರಕ್ತದಾನ ಶಿಬಿರ,ಆರೋಗ್ಯತಪಾಸಣಾ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.