ಸುಶೀಲ್ ಕೊಲೆ ಪ್ರಕರಣ : ಇನ್ನುಳಿದ ಆರೋಪಿಗಳ ಬಂಧನ : ಎಸ್ಪಿ ಲಕ್ಷ್ಮಣ ನಿಂಬರಗಿ

೦೧ ಕಂಟ್ರಿ ಪಿಸ್ತೂಲ್, ೦೪ ಜೀವಂತ ಗುಂಡುಗಳು ,೦೩ ಮೋಟಾರ್ ಸೈಕಲ್‌ಗಳ ಜಪ್ತಿ

Jul 17, 2025 - 23:07
 0
ಸುಶೀಲ್ ಕೊಲೆ ಪ್ರಕರಣ : ಇನ್ನುಳಿದ ಆರೋಪಿಗಳ ಬಂಧನ : ಎಸ್ಪಿ ಲಕ್ಷ್ಮಣ ನಿಂಬರಗಿ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 
ವಿಜಯಪುರ: ಕಳೆದ ಜು.೧೪ ರಂದು ನಗರದ ಎಸ್.ಎಸ್. ಕಾಂಪ್ಲೇಕ್ಸ್ನಲ್ಲಿ ನಡೆದ ಸುಶೀಲಕುಮಾರ ಕಾಳೆ ಕೊಲೆ ಪ್ರಕರಣಕ್ಕೆ ಸಂಬ0ಧಿಸಿದ0ತೆ ಇನ್ನುಳಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ ಅವರು, ಸುಶೀಲ ಕಾಳೆ ಕೊಲೆ ಕುರಿತು ಮೃತನ ತಾಯಿ ಸುಚಿತ್ರಾ ತುಳಜಾರಾಮ ಕಾಳೆ ಇವರು ಕೊಟ್ಟ ದೂರಿನ ಮೇರೆಗೆ ಗಾಂಧಿಚೌಕ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖಾಧಿಕಾರಿ ಗಾಂಧಿಚೌಕ ಪೊಲೀಸ್ ಠಾಣೆಯ ಸಿಪಿಐ ಪ್ರದೀಪ ತಳಕೇರಿ, ತಂಡದವರು ಕಾರ್ಯಪ್ರವೃತ್ತರಾಗಿ ಆರೋಪಿತರಾದ  ಆಕಾಶ ವಿಠೋಬಾ ಕಲ್ಲವ್ವಗೋಳ, ೨೯ ವರ್ಷ, ಸುದೀಪ ಅಲಿಯಾಸ್  ಸುಭಾಸ ರಮೇಶ ಬಗಲಿ,  (ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ) ಇವರುಗಳನ್ನು ಈಗಾಗಲೆ (ಜು. ೧೫ ರಂದು) ಬಂಧಿಸಲಾಗಿದೆ.
ಮುಂದುವರೆದು ಜು.೧೬ ರಂದು ಈ ಪ್ರಕರಣದಲ್ಲಿ ಇನ್ನುಳಿದ ಆರೋಪಿತರಾದ ಗೌತಮ ಹಣಮಂತ ಆಲಮೇಲ್‌ಕರ, ೨೫ ವರ್ಷ, ನಾರಾಯಣ ಗಣಪತಿ ಜಾಧವ, ೨೦ ವರ್ಷ, ಬಸವರಾಜ ಸಿದ್ದ¥
À್ಪ ಮುನ್ನಾಳ, ೨೦ ವರ್ಷ, ಪ್ರಜ್ವಲ ಶರಣಪ್ಪ ಹಳಿಮನಿ, (ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ) ಇವರನ್ನು ಬಂಧಿಸಲಾಗಿದೆ.
ಆರೋಪಿತರಿಂದ ಕೃತ್ಯಕ್ಕೆ ಬಳಸಲಾದ ೦೧ ಕಂಟ್ರಿ ಪಿಸ್ತೂಲ್, ೦೪ ಜೀವಂತ ಗುಂಡುಗಳು ಹಾಗೂ ೦೩ ಮೋಟಾರ್ ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ತಿಳಿಸಿದ್ದಾರೆ.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.