ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಕಾಂಗ್ರೆಸ್ ಪಕ್ಷದ ಕಾರ್ಯಾಲಯಕ್ಕೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರ ಅಹವಾಲನ್ನು ಸ್ವೀಕರಿಸಿದರು.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ಅವರು ಅಧ್ಯಕ್ಷತೆಯನ್ನು ವಹಿಸಿ ಸಚಿವರಿಗೆ ಸನ್ಮಾನಿಸಿದರು. ಈ ವೇಳೆ ಪ್ರಾಸ್ತಾವಿಕ ಮಾತನಾಡಿದ ಅವರು ಕಾಂಗ್ರೆಸ್ ಸರಕಾರದ ಯಾವುದೇ ಸಚಿವರು ವಿಜಯಪುರಕ್ಕೆ ಬಂದರೆ ಜಿಲ್ಲಾ ಕಾಂಗ್ರೆಸ್ ಕಾರ್ಯಲಯಕ್ಕೆ ಬಂದು ಪಕ್ಷದ ನಾಯಕರ, ಕಾರ್ಯಕರ್ತರ ಅಹವಾಲನ್ನು ಸ್ವೀಕರಿಸುವ ಕಾರ್ಯಕ್ರಮ ನಡೆಯುತ್ತಿತ್ತು ಆದರೆ ಸಚಿವ ಸಂತೋಷ್ ಲಾಡ್ ರವರು ತಮ್ಮ ಪ್ರವಾಸದ ದೈನಂದಿನ ಪಟ್ಟಿಯಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಭೇಟಿ ಎಂದು ಸಮಯ ನೀಡಿ ನಾಲ್ಕು ದಿನ ಮುಂಚೆಯೆ ನನಗೆ ಮಾತನಾಡಿರುವ ಜನಪ್ರೀಯ ನಾಯಕರು, ಇವರು ಸರಳ, ನಿಷ್ಠುರ ಮಾತನಾಡುತ್ತಾ ಎಲ್ಲ ಸಮುದಾಯಗಳ ಚಿಂತನೆ ಮಾಡುವ ನಾಯಕರು ಎಂದು ಹೇಳಿದರು.
ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ ಇಂದು ಬಡವರ ಸಹಾಯಕ್ಕಾಗಿ ಐದು ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನೂ ಕೂಡಾ ಮಾಡುತ್ತಿರುವ ಸರಕಾರ ಎಂದರೆ ಅದು ಕಾಂಗ್ರೆಸ್ ಸರಕಾರ. ಗ್ಯಾರಂಟಿಗಳಿAದ ಅಭಿವೃದ್ಧಿ ಕಾರ್ಯಕುಂಠಿತಗೊAಡಿಲ್ಲ ನನ್ನ ಮತಕ್ಷೇತ್ರದಲ್ಲಿ ನಾನು ಹಾಕಿಕೊಂಡ ಕಾಮಗಾರಿಗಳು ಇಂದು ಶೇ. ೫೦ ರಷ್ಟು ಕಾಮಗಾರಿ ಮುಗಿದಿದೆ ಉಳಿದ ಕಾಮಗಾರಿ ನಡೆಯುತ್ತಾ ಇದೆ. ಈಗಾಗಲೇ ನಮ್ಮ ಮತಕ್ಷೇತ್ರಕ್ಕೆ ಮತ್ತೆ ೫೦ ಕೋಟಿ ಹಣ ಮಂಜೂರು ಮಾಡಲಾಗಿದೆ. ನುಡಿದಂತೆ ನಡೆದ ಸರಕಾರವೆಂದರೆ ಅದು ಕಾಂಗ್ರೆಸ್ ಸರಕಾರ ಎಂದು ಹೇಳಿದರು.
ಕರ್ನಾಟಕ ರಾಜ್ಯ ಬಾಲ ವಿಕಾಸ ನಿಗಮದ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಮಾತನಾಡಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಾಗಿ ನಿರಂತರವಾಗಿ ಸೇವೆ ಸಲ್ಲಿಸುವ ಕಾರ್ಯಕರ್ತರನ್ನು ಗುರುತಿಸಿ ನಿಗಮ ಮಂಡಳಿಗಳಿಗೆ ನಾಮ ನಿರ್ದೇಶನ ಮಾಡಬೇಕೆಂದು ಮಾನ್ಯ ಸಚಿವರಲ್ಲಿ ವಿನಂತಿ ಮಾಡಿದರು. ಮಾನ್ಯ ಸಚಿವರು ಇಂದು ದೇಶದಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೆ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾರ್ಮಿಕ ಸಚಿವ ಸಂತೋಷ ಲಾಡ್ ರವರಿಗೆ ಕಳಿಸುತ್ತಾರೆ, ಕೊಟ್ಟ ಕೆಲಸವನ್ನು ಬಹಳ ನಿಷ್ಠೆಯಿಂದ ನಿಭಾಯಿಸುವ ಧೀಮಂತ ನಾಯಕರು` ಹಾಗೂ ದೇಶದ ಯಾವುದೇ ಜನ ಸಹಾಯಕ್ಕೆ ಬಂದಾಗ ಬಹಳ ಮುತವರ್ಜಿ ವಹಿಸಿ ಅವರಿಗೆ ಸಹಾಯ ಸಹಕಾರ ಮಾಡುವ ನಾಯಕರು, ಅವರಿಗೆ ನಾನು ಸ್ವತಃ ಕಂಡಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ೨೦೨೩ ರ ವಿಜಯಪುರ ನಗರ ಕಾಂಗ್ರೆಸ್ ಅಭ್ಯರ್ಥಿಯಾದ ಹಮೀದ ಮುಶ್ರೀಫ, ಗಂಗಾಧರ ಸಂಬಣ್ಣಿ ವಿಜಯಕುಮಾರ ಘಾಟಗೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಸುಭಾಸ ಕಾಲೆಬಾಗ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶಿಗಳಾದ ಎಂ. ಎಂ. ಮುಲ್ಲಾ (ದ್ಯಾಬೇರಿ), ದೇಸು ಚವ್ಹಾಣ, ಬ್ಲಾಕ್ ಅಧ್ಯಕ್ಷರುಗಳಾದÀ ಜಮೀರ ಬಕ್ಷಿ, ಶಾಹಜಾನ ಮುಲ್ಲಾ, ಸುರೇಶ ಹಾರವಾಳ, ಕಲ್ಲನಗೌಡ ಬಿರಾದಾರ, ಆರತಿ ಶಾಹಪೂರ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶಕೀಲ ಬಾಗಮಾರೆ, ಶ್ರೀದೇವಿ ಉತ್ಲಾಸ್ಕರ, ಸಲೀಮ ಪೀರಜಾದೆ, ಅಂಗ ಘಟಕಗಳ ಅಧ್ಯಕ್ಷರುಗಳಾದ ಆನಂದ ಜಾಧವ, ರಮೇಶ ಗುಬ್ಬೇವಾಡ, ಸರಫರಾಜ ಮಿರ್ದೆ, ಶ್ರೀಕೃಷ್ಣಾ ಕಾಮಟೆ, ಬೀರಪ್ಪ ಜುಮನಾಳ, ಸುನಂದಾ ಸೊನ್ನಹಳ್ಳಿ, ರೇಖಾ ಎಸ್. ಮುತ್ತಪ್ಪನವರ, ಸಾಹೆಬಿ ತಾಂಬೋಳಿ, ಸಂಗೀತಾ ನಾಡಗೌಡ, ಸಬಿನಾ ಮಂಟೂರ, ಸಂತೋಷ ಗಣಾಚಾರಿ, ಎಂ. ಎಲ್. ಮಕಾಂದಾರ, ಹರೀಶ ಕೌಲಗಿ, ಫಯಾಜ ಕಲಾದಗಿ, ಲಾಲಸಾಬ ಕೋರಬು, ಲಕ್ಷö್ಮಣ ಇಲಕಲ್, ಅರ್ಜುನ ನಾಯಕವಾಡಿ, ಅಬ್ದುಲ ಪೀರಾ ಜಮಖಂಡಿ, ಭಾರತಿ ನಾವಿ, ಲಕ್ಷಿö್ಮÃ ಕ್ಷೀರಸಾಗರ, ಭಾರತಿ ಹೊಸಮನಿ, ಶಮೀಮ ಅಕ್ಕಲಕೋಟ, ಇಲಿಯಾಸ ಮುಲ್ಲಾ, ದಾದಾಪೀರ ಬಾಗಮಾರೆ, ಸಂತೋಷ ಬಾಲಗಾವಿ, ಅಬುಬಕರ ಕಂಬಾಗಿ, ಹಮೀದ ಮನಗೂಳಿ, ಲಕ್ಷö್ಮಣ ಹಂಚಿನಾಳ, ಶ್ರೀಕಾಂತ ಮಾನೆ, ಸಾಜಿದ ರಿಸಾಲದಾರ, ಐಜಾಜ ಮುಕ್ಬಿಲ, ತಾಜುದ್ದೀನ ಖಲೀಫಾ, ಕೃಷ್ಣಾ ಲಮಾಣಿ, ಆಸ್ಮಾ ಕಾಲೇಬಾಗ, ಲಕ್ಷಿö್ಮÃಬಾಯಿ ಬಳ್ಳಾರಿ, ಪೀರಪ್ಪ ನಡವಿನಮನಿ, ಕಾಶಿಬಾಯಿ ಹಡಪದ, ಎನ್. ಎಸ್. ಪಟೇಲ, ಬಾಬುಸಾಬ ಯಾಳವಾರ, ಪ್ರದೀಪ ಸೂರ್ಯವಂಶಿ, ಅಶೋಕ ಕಾಂಬಳೆ, ಸಂಜು ಗುನ್ನಾಪೂರ, ಗಂಗವ್ವ ಕಣಮುಚನಾಳ, ಅಶೋಕ ನಾಯ್ಕೋಡಿ ಹಾಗೂ ಇನ್ನಿತರ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.