ಈಶ್ವರ ಯೋಗಾಸನ ಸಂಸ್ಥೆಯಿ0ದ ಯೋಗ ದಿನಾಚರಣೆ

Jun 24, 2025 - 18:37
 0
ಈಶ್ವರ ಯೋಗಾಸನ ಸಂಸ್ಥೆಯಿ0ದ ಯೋಗ ದಿನಾಚರಣೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ : ಈಶ್ವರ ಯೋಗ ಸಂಸ್ಥೆ ವಿಜಯಪುರ ಇವರು ಕನ್ಸಲ್ಟಿಂಗ್ ಸಿವಿಲ್  ಇಂಜಿನಿಯರ್ಸ್ ಅಸೋಸಿಯೇಷನ್ ಮತ್ತು ಶ್ರೀ ಸಿಮೆಂಟ್ ಎಂಟರ್ಪ್ರೈಸಸ್ ಅವರ ಸಹಭಾಗಿತ್ವದಲ್ಲಿ  ಯೋಗ ಭವನದಲ್ಲಿ ಮುಂಜಾನೆ ೫ ಗಂಟೆ ಗಂಟೆಯಿ0ದ ಯೋಗ ಗುರುಗಳಾದ ವಿ ಎಸ್ ಹಿರೇಮಠ, ಪಿ ಎಸ್  ಸ ಕವಟಗಿ, ಸಿದ್ದನಗೌಡ ಕರಿಗೌಡರ್ ಮತ್ತು ಜಿ ಎಸ್ ಬಳ್ಳೂರ್ ಅವರ ನೇತೃತ್ವದಲ್ಲಿ    ೧೧ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ೨೦೦ ಯುಗಾಸಕ್ತರಿಗೆ ಯೋಗಭ್ಯಾಸವನ್ನು ಮಾಡಿಸಿದರು.            

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾನಗರ ಪಾಲಿಕೆಯ ಸದಸ್ಯರಾದ ಪ್ರೇಮಾನಂದ್ ಬಿರಾದಾರ್ ಮತ್ತು ಶಿ ಮಲ್ಲಿಕಾರ್ಜುನ್ ಗಡಗಿಯವರು ಯೋಗದ ಮಹತ್ವವನ್ನು ತಿಳಿಸಿದರು ಅಲ್ಲದೆ  ಮಹಾನಗರ ಪಾಲಿಕೆಯಿಂದ  ದೊರೆಯುವ ಸೌಲಭ್ಯವನ್ನು ದೊರಕಿಸಿ ಕೊಡುವ ದಾಗಿ ತಿಳಿಸಿದರು. ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ದ ಅಧ್ಯಕ್ಷರಾದ  ಅರುಣ್ ಮಠ ಅವರು ಆರೋಗ್ಯವೇ ಭಾಗ್ಯ ಎಂದು ಹೇಳಿದರು. ಯೋಗ ಗುರುಗಳಾದ  ವಿ ಎಸ್ ಹಿರೇಮಠ ಅವರು ಈಶ್ವರ ಯೋಗಾಸಂಸ್ಥೆ  ಬೆಳೆದು ಬಂದ ದಾರಿಯನ್ನು ಪ್ರಾಸ್ತಾವಿಕವಾಗಿ  ವಿವರಿಸಿದರು.              

ಉಪನ್ಯಾಸಕರಾಗಿ ಆಗಮಿಸಿದ ಡಾ.ಮನಗೂಳಿ ಯವರು ಆಹಾರ ಮತ್ತು ಆರೋಗ್ಯದ ಕುರಿತು    ಮತ್ತು ಪತಂಜಲಿ  ಯೋಗದ ಮಹತ್ವದ ಕುರಿತು ಕುಮಾರಿ ಸುನಂದ ಹೊನವಾಡ ಅವರು ಉಪನ್ಯಾಸ ನೀಡಿದರು.        

ಶ್ರೀ  ಈಶ್ವರ ಯುಗಾ ಸಂಸ್ಥೆಯ ಅಧ್ಯಕ್ಷ ಬಿ ಎಸ್ ಚಿಕ್ಕಣ್ಣವರು ಪ್ರತಿನಿತ್ಯ ಮುಂಜಾನೆ ೫ ಗಂಟೆಯಿAದ ಏಳು ಗಂಟೆಯವರೆಗೆ ನಡೆಯುವ ಯೋಗ ಸಾಧನಯಲ್ಲಿ ಎಲ್ಲರೂ ಭಾಗವಹಿಸಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಯ್ದುಕೊಳ್ಳಲು ಕರೆ ನೀಡಿದರು.            

ನಿವೃತ್ತ ಪ್ರಾಂಶುಪಾಲ ಎಸ್ ಎಂ ಕರಡಿಯವರು ಸೊಗಸಾಗಿ ಅತಿಥಿಗಳ ಪರಿಚಯ ಮತ್ತು ಸ್ವಾಗತವನ್ನು ನೆರವೇರಿಸಿದರು. ಸಂಸ್ಥೆಯ ಖಜಾಂಚಿಗಳಾದ  ಬಿ ಆರ್ ಪಾಟೀಲ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿ. "ಯೋಗ ಫಾರ್ ಒನ್ ಅರ್ಥ ಅಂಡ್ ಒನ್ ಹೆಲ್ತ್" ಘೋಷ ವಾಕ್ಯ ಬಗ್ಗೆ ವಿವರಿಸಿದರು.  ಮಹಿಳಾ ಯೋಗ ಬಂಧುಗಳ ಪ್ರಾರ್ಥನೆಯೊಂದಿಗೆ   ಪ್ರಾರಂಭವಾದ ಕಾರ್ಯಕ್ರಮ ಐ ಎಸ್ ಚಿಮ್ಮಲಗಿ ಅವರ  ವಂದನಾರ್ಪಣೆಯೊAದಿಗೆ ಮುಕ್ತಾಯವಾಯಿತು  ರಿಯಾಜ್ ಬೀಳಗಿಯವರು ಯೋಗ ಬಂಧುಗಳಿಗೆಲ್ಲ ಉಪಹಾರದ ವ್ಯವಸ್ಥೆ ಮಾಡಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.