ಒಳ್ಳೆಯ ಆರೋಗ್ಯಕ್ಕೆ ನಿತ್ಯ ಯೋಗಾಭ್ಯಾಸ ಮಾಡಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಹೊರ್ತಿ: ಒಳ್ಳೆಯ ಆರೋಗ್ಯಕ್ಕೆ ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದು ಜಿಗಜೀವಣಿ ಸಮರ್ಪಣಾ ಫೌಂಡೇಶನ್ಸ್ ನ ಇಂಚಗೇರಿ ಗ್ರಾಮದ ಜ್ಞಾನಯೋಗಿ ಇಂಟರ್ ನ್ಯಾಷನಲ್ & ಪಬ್ಲಿಕ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸೀನು ಜೋಸೆಫ್ ಹೇಳಿದರು.
ಸಮೀಪದ ಇಂಚಗೇರಿ ಗ್ರಾಮದ ಕವಾಡ ಕಚೇರಿಯಲ್ಲಿ ಶನಿವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜಿಗಜೀವಣಿ ಸಮರ್ಪಣಾ ಫೌಂಡೇಶನ್ಸ್ ನ ಜ್ಞಾನಯೋಗಿ ಇಂಟಡಿಜಿ ನ್ಯಾಷನಲ್ & ಪಬ್ಲಿಕ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಿ ಮಾತನಾಡಿ, 'ನಿತ್ಯ ಯೋಗಾಸನ ಭಂಗಿಗಳನ್ನು ಮಾಡುವುದರಿಂದ ರೋಗಗಳು ದೂರವಾಗಿ ಉತ್ತಮ ಆರೋಗ್ಯಕ್ಕೆ ಸಹಕಾರಿ ನೀಡಲಿವೆ' ಎಂದು ಹೇಳಿದರು. ಶಾಲಾ ಅಧ್ಯಕ್ಷ ವೈ ಜಿ.ಗುಡ್ಡದ, ಮುಖ್ಯ ಶಿಕ್ಷಕಿ ಸೀನು ಜೋಸೆಪ್, ಸಹ ಶಿಕ್ಷಕರಾದ ಬಿನು ಜಾನ್, ಅನ್ಸಿ ಕೆ, ಚಿದಾನಂದ ವಾಲಿಕಾರ, ಪ್ರೀತಿ ಪಿ.ನಾವಿ, ಸುಜತಾ, ಭಾಗ್ಯಶ್ರೀ, ಪ್ರೀತಿ ಬಿರಾದಾರ, ಕಾವೇರಿ ಹಾಗೂ ಚಿದಾನಂದ ಗುಡ್ಡದ, ರೇವಣಸಿದ್ಧ ಸಾತಲಗಾಂವ, ಸಂಗಮೇಶ ನಾಗೊಂಡ, ಚನ್ನಪ್ಪ ಹಳ್ಳಿ ಮತ್ತು ವಿದ್ಯಾರ್ಥಿಗಳು ಇದ್ದರು.