ಶ್ರೀ ಖಾಸ್ಗತ ಜಾತ್ರೋತ್ಸವದಲ್ಲಿ ಭಕ್ತರಿಗೆ ಪಾನಿಪುರಿ ಪ್ರಸಾದ

Jul 6, 2025 - 09:59
 0
ಶ್ರೀ ಖಾಸ್ಗತ ಜಾತ್ರೋತ್ಸವದಲ್ಲಿ ಭಕ್ತರಿಗೆ ಪಾನಿಪುರಿ ಪ್ರಸಾದ
ಪಾನಿಪುರಿ ತಯಾರಿಕೆಯಲ್ಲಿ ತೊಡಗಿರುವ ತಂಡದೊ0ದಿಗೆ ಸಿದ್ದಲಿಂಗಶ್ರೀಗಳು ಕೈಜೋಡಿಸಿದರು.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 
ಜಿ.ಪಿ. ಘೋರ್ಪಡೆ
ತಾಳಿಕೋಟೆ,  ಐತಿಹಾಸಿಕ ಹಿನ್ನೇಲೆಹೊಂದಿರುವ ತಾಳಿಕೋಟೆ ನಗರಿ ಸದ್ಯ ಧಾರ್ಮಿಕ ಮತ್ತು ದಾಸೋಹ ಕ್ಷೇತ್ರದಲ್ಲಿಯೂ ಕೂಡಾ ರಾಜ್ಯದಲ್ಲಿ ಸದ್ದು ಮಾಡುತ್ತಿದ್ದು ಸದ್ಯ ಶ್ರೀ ಖಾಸ್ಗತೇಶ್ವರ ಜಾತ್ರೆ ನಡೆದಿರುವದರಿಂದ ನಿತ್ಯ ದಾಸೋಹದ ವಿವಿಧತೆ ಪ್ರಸಾದದಲ್ಲಿ ಈ ಭಾರಿ ೫೦ ಸಾವಿರಕ್ಕೂ ಮೇಲ್ಪಟ್ಟು ಭಕ್ತರಿಗೆ ನಿತ್ಯ ಫಕ್ವಾನ ಭೋಜನದ ಪ್ರಸಾದದ ಜೊತೆಗೆ ಪಾನಿಪುರಿ ಪ್ರಸಾದ ಸಿಗಲಿದೆ.
        ರಾಜ್ಯದ ಧಾರ್ಮಿಕ ಕ್ಷೇತ್ರದ ಮಠಗಳಲ್ಲಿಯೇ ಅತ್ಯಂತ ಹೆಸರು ಮಾಡಿರುವ ತಾಳಿಕೋಟೆಯ ಶ್ರೀ ಖಾಸ್ಗತಮಠವು ಲಕ್ಷಾಂತರ ಭಕ್ತಸಮೂಹವನ್ನು ಹೊಂದಿದ ಮಠವಾಗಿದೆ ಶ್ರೀ ಖಾಸ್ಗತರ ಜಾತ್ರೆಗೆ ಈ ಭಾಗದಲ್ಲಿ ಅಜ್ಜನ ಜಾತ್ರೆ ಎಂದೇ ಅತ್ಯಂತ ಪ್ರಚಲಿತಹೊಂದಿರುವ ಶ್ರೀ ಖಾಸ್ಗತ ಮಠದಲ್ಲಿ ಜಾತ್ರಾ ನಿಮಿತ್ಯವಾಗಿ ಇಂದು ಲಕ್ಷ ಪಾನಿಪುರಿ ತಯಾರಿಸುವದರೊಂದಿಗೆ ಎಲ್ಲ ಭಕ್ತರಿಗೆ ಉಣಬಡಿಸುವಂತಹ ಕಾರ್ಯ ನಡೆಯಲಿದೆ.
ಹಿಂದಿನ ಪೀಠಾಧೀಪತಿ ಲಿಂ.ವಿರಕ್ತ ಮಹಾಸ್ವಾಮಿಗಳ ನುಡಿಯಂತೆ ಅವರ ಮೇಲೆ ಭಕ್ತರು ಇಟ್ಟಿದ್ದ ಭಕ್ತಿ, ಪ್ರೀತಿ, ವಾತ್ಸಲ್ಯ ಈಗಲೂ ಕೂಡಾ ಮಠದ ಮೇಲೆ ಭಕ್ತರು ತೋರಿಸುತ್ತಿದ್ದು ವಿರಕ್ತಶ್ರೀಗಳ ದಾರಿಯಲ್ಲಿ ಈಗೀನ ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗದೇವರು ಕೂಡಾ ಭಕ್ತರೇ ಶ್ರೀಮಠದ ಆಸ್ತಿ ಎಂದು ಸಾರಿ ಸಾರಿ ಹೇಳುತ್ತಿದ್ದು ಇದರಿಂದ ಲಿಂ.ವಿರಕ್ತಶ್ರೀಗಳ ಮೇಲಿನ ಪ್ರೀತಿ ಇನ್ನಷ್ಟು ಇಮ್ಮಡಿಗೊಳಿಸುವಂತೆ ಮಾಡಿದೆ ಅಲ್ಲದೇ ಶ್ರೀ ಖಾಸ್ಗತಮಠದ ಮೇಲಿನ ಭಕ್ತಿ ನಂಬಿಕೆ ಇನ್ನಷ್ಟು ಹೆಚ್ಚಲು ಕಾರಣವಾಗಿದೆ.
ಶ್ರೀ ಖಾಸ್ಗತ ಮಠದ ಜಾತ್ರೋತ್ಸವದ ದಾಸೋಹ ವ್ಯವಸ್ಥೆಗೆ ಎಲ್ಲ ಗ್ರಾಮ ಪಟ್ಟಣಗಳಿಂದ ಅವಶ್ಯಕ ದವಸ ದಾನ್ಯಗಳಲ್ಲದೇ ರೋಟ್ಟಿ ಇನ್ನಿತರಗಳನ್ನು ಭಕ್ತಾಧಿಗಳು ಅರ್ಪಿಸುತ್ತಿದ್ದು ಭಕ್ತಾಧಿಗಳು ನೀಡಿದ ದವಸ್ಯ ದಾನ್ಯಗಳಿಂದ ನಿತ್ಯ ವಿವಿಧ ರೀತಿಯ ಪ್ರಸಾದವನ್ನು ತಯಾರಿಸಿ ಭಕ್ತಾಧಿಗಳಿಗೆ ಯಾವುದೇ ರೀತಿಯ ಕೊರತೆ ಬಿಳ್ಳದ ಹಾಗೆ ಶ್ರೀಮಠದಿಂದ ನೋಡಿಕೊಳ್ಳಲಾಗುತ್ತಿದೆ.
      ಪ್ರತೀ ವರ್ಷದಂತೆ ಈ ಸಲುವೂ ಸಜ್ಜಕ ತುಪ್ಪದ ಊಟ ಭಕ್ತರಿಗೆ ಉಣಬಡಿಸಲಾಗಿದೆ ಅದರ ಜೊತೆಗೆ ಶ್ರೀಮಠದ ಬಾಲಶಿವಯೋಗಿ ಶ್ರೀಗಳ ಮಾತಿನಂತೆ ಪಾನಿಪುರಿ ಪ್ರಸಾದವನ್ನು ಭಕ್ತರಿಗೆ ಉಣಬಡಿಸುವ ಸಲುವಾಗಿ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ. ಪಾನಿಪುರಿ ಪ್ರಸಾದ ಭಕ್ತಾಧಿಗಳಿಗೆ ಸವಿಯಲು ಮತ್ತು ಗದ್ದಲ ವಾತಾವರಣ ತಡೆಯಲು ಪೂರ್ವ ಸಿದ್ದತೆಯನ್ನು ಕೈಗೊಳ್ಳಲಾಗಿದೆ.
ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮ ಶ್ರೀ ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೆ ಹಾಗೂ ರಥೋತ್ಸವ ಅಂಗವಾಗಿ ದಿ. ೭ ಸೋಮವಾರರಂದು ನಸುಕಿನ ಜಾವ ೫-೩೦ ಕ್ಕೆ ಅಸಂಖ್ಯಾತ ಭಕ್ತ ಸಮೂಹದ ಸಮ್ಮುಖದಲ್ಲಿ ಗೋಪಾಲ ಕಾವಲಿ(ಮೊಸರು ಗಡಿಗೆ) ಒಡೆಯುವ ಕಾರ್ಯಕ್ರಮವು ಭಕ್ತಿ ಭಾವದೊಂದಿಗೆ ಜರುಗಲಿದೆ. ೯ ದಿನಗಳ ಕಾಲ ನಡೆದು ಬಂದ ಸಪ್ತ ಭಜನಾ ಕಾರ್ಯಕ್ರಮವು ಗೋಪಾಲಕಾವಲಿ(ಮೊಸರುಗಡಿಗೆ) ಒಡೆಯುವದರ ಮೂಲಕ ಮಂಗಲಗೊಳ್ಳಲಿದೆ. 
     ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಘನ ಅಧ್ಯಕ್ಷತೆಯಲ್ಲಿ ಜರುಗಲಿರುವ ಈ ಗೋಪಾಲ ಕಾವಲಿ ಒಡೆಯುವ ಮುಂಚೆ ಭವ್ಯ ಪ್ರಭಾತ ಪೇರಿಯೊಂದಿಗೆ ಧ್ವಜದ ಮೆರವಣಿಗೆ ನಡೆಯುವದು. 
---
     “ಭಕ್ತರೇ ಶ್ರೀಮಠದ ಆಸ್ತಿ” ಎಂದು ನಾನು ಶ್ರೀ ಖಾಸ್ಗತರ ಹಾಗೂ ಶ್ರೀ ವಿರಕ್ತಶ್ರೀಗಳ ವಾಣಿಯಂತೆ ನಡೆದಿದ್ದೆನೆ ಈ ಭಾರಿಯ ಜಾತ್ರೆಯಲ್ಲಿ ವಿಶೇಷತೆಯೊಂದಿಗೆ ಭಕ್ತಾಧಿಗಳಿಗೆ ಪಾನಿಪುರಿ ಪ್ರಸಾದ ಭಕ್ತಾಧಿಗಳಿಗೆ ನೀಡಲಾಗುತ್ತಿದೆ ಎಲ್ಲ ಭಕ್ತರು ಪ್ರಸಾದ ಸ್ವಿಕರಿಸಿ ಶ್ರೀ ಖಾಸ್ಗತರ, ವಿರಕ್ತಶ್ರೀಗಳ ಕೃಪೆಗೆ ಪಾತ್ರರಾಗಬೇಕು.
                                                         ಬಾಲಶಿವಯೋಗಿ ಶ್ರೀಸಿದ್ದಲಿಂಗ ದೇವರು.
ಶ್ರೀ ಖಾಸ್ಗತ ಮಠ ತಾಳಿಕೋಟೆ

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.