ವೇದಗಳು ಪ್ರಾಚೀನ ಭಾರತದ ಜ್ಞಾನದ ಮೂಲ : ವಿನಾಯಕ ಭಟ್

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಪಂಚಮುಖಿ ಶಿಕ್ಷಣವು ಐದು ಮುಖಗಳನ್ನು ಹೊಂದಿರುವ ಶಿಕ್ಷಣ ವ್ಯವಸ್ಥೆ, ಇದು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯನ್ನು ಗುರಿಯಾಗಿಸಿಕೊಂಡಿದೆ ಎಂದು ಗದಗ ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಂಸ್ಕೃತ ಅಧ್ಯಾಪಕ ವಿನಾಯಕ ಭಟ್ ಶೇಡಿಮನೆ ಹೇಳಿದರು.
ಅವರು ರವಿವಾರದಂದು ನಗರದ ಕಂದಗಲ್ ಹನುಮಂತ ರಾಯ ರಂಗಮAದಿರದಲ್ಲಿ ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತ ವಿಜಯಪುರ ಜಿಲ್ಲಾ ಘಟಕದಿಂದ ಜರುಗಿದ ಗುರು ನಮನ ಹಾಗೂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದ ಗೋಷ್ಠಿ-೨ ರಲ್ಲಿ ಪಂಚಮುಖಿ ಶಿಕ್ಷಣ-ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ವೇದಗಳು ಪ್ರಾಚೀನ ಭಾರತದ ಜ್ಞಾನದ ಮೂಲವಾಗಿದ್ದು, ಅವುಗಳ ಅಧ್ಯಯನವು ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ತಿಳುವಳಿಕೆ ನೀಡುತ್ತದೆ.
ಪಂಚಮುಖಿ ಶಿಕ್ಷಣವು ಗಣಿತ, ವಿಜ್ಞಾನ, ಇತಿಹಾಸ ಮತ್ತು ಭಾಷೆಗಳಂತಹ ಆಧುನಿಕ ವಿಷಯಗಳನ್ನೂ ಸಹ ಒಳಗೊಂಡಿದೆ. ಇದು ವಿದ್ಯಾರ್ಥಿಗಳನ್ನು ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷೆ ಗುಣಸಾಗರಿ ಮಂಗಾನವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿದ್ದೇಶ್ವರ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ ಎಚ್ ವೆಂಕಟೇಶ, ಇಂಡಿಯನ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಮಲ್ಲು ಗುಡ್ಡದ ಉಪಸ್ಥಿತರಿದ್ದರು.
ಪ್ರಾಂತ ಸಹಕಾರ್ಯದರ್ಶಿ ಸಿದ್ದು ಮದರಖಂಡಿ, ಜಿಲ್ಲಾಧ್ಯಕ್ಷ ಬಿ ಎಸ್ ಬಾಪಗೊಂಡ, ಪ್ರೊ ಉದಯಕುಮಾರ ಕುಲಕರ್ಣಿ, ಚಂದ್ರಶೇಖರ ಉಂಡೋಡಿ, ಪ್ರೊ ರಾಜಕುಮಾರ ಮಾಲಿಪಾಟೀಲ, ಎಸ್ ಬಿ ಪಾಟೀಲ, ಸಂತೋಷ ಬಂಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.