ಪ್ರೋ. ಎಂ ಕೆ ರಬಿನಾಳ ಸಾಧನೆ ಶ್ಲಾಘನೀಯ : ಮೂಲಿಮನಿ

Jul 15, 2025 - 01:38
 0
ಪ್ರೋ. ಎಂ ಕೆ ರಬಿನಾಳ ಸಾಧನೆ ಶ್ಲಾಘನೀಯ : ಮೂಲಿಮನಿ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ದೇವರಹಿಪ್ಪರಗಿ : ಕಾಯಕನಿಷ್ಠೆ, ವೃತ್ತಿಧರ್ಮ ಪಾಲನೆಯಿಂದ ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಗಿದ ಪ್ರೋ. ಎಂ ಕೆ ರಬಿನಾಳ ಅವರ ಸಾಧನೆ ಶ್ಲಾಘನೀಯವಾಗಿದೆ ಎಂದು ಬಿಎಲ್‌ಡಿಇ ವಿಶ್ವವಿದ್ಯಾಲಯ ವಿಶ್ರಾಂತ  ಕುಲಪತಿ ಪ್ರೋ. ಬಿ ಜಿ ಮೂಲಿಮನಿ ಹೇಳಿದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಭೌತಶಾಶ್ತç ವಿಭಾಗದ ಚೇರಮನ್ ಪ್ರೋ. ಎಂ ಕೆ ರಬಿನಾಳ (ದೇವರಹಿಪ್ಪರಗಿ) ಅವರ ನಿವೃತ್ತಿ ನಿಮಿತ್ಯ ಸಂಶೋಧನಾ ವಿದ್ಯಾರ್ಥಿಗಳು ಹಮ್ಮಿಕೊಂಡ ಗೌರವ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಕಷ್ಟು ಸಂಕಷ್ಟಗಳ ಮದ್ಯೆಯೂ ವಿದ್ಯಾರ್ಥಿಗಳ ಜ್ಞಾನದ ಹಸಿವು ನೀಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ದೇವರಹಿಪ್ಪರಗಿ ಎಂಬ ಚಿಕ್ಕ ಪಟ್ಟಣದಲ್ಲಿ ಜನಿಸಿ ಶಿಕ್ಷಣ ರಂಗದಲ್ಲಿ ಅಗಾಧ ಸಾಧನೆ ಮಾಡಿದ್ದಾರೆ. ಅವರೊಬ್ಬ ರೊಲ್ ಮಾಡೆಲ್ ಆಗಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಭೌತಶಾಶ್ತç ವಿಭಾಗದ ವಿಶ್ರಾಂತ ಚೇರಮನ್ ಪ್ರೋ. ಎಂ ಕೆ ರಬಿನಾಳ, ನಿರಂತರ ಓದು, ಅವಿರತ ಪರಿಶ್ರಮ ವ್ಯಕ್ತಿಯ ವ್ಯಕ್ತಿತ್ವ ರೂಪಗೊಳ್ಳು ಸಾಧ್ತವಾಗಲಿದೆ. ಮನೆಯಲ್ಲಿ ಕಡುಬಡತನವಿದ್ದರೂ ಸಾಕಷ್ಟು ಜನರ ಸಹಕಾರ, ಮಾರ್ಗದರ್ಶನಲ್ಲಿ ಈ ಮಟ್ಟಕ್ಕೆ ಬಂದು ನಿಂತಿರುವೆ. ನಿರಂತರ ಪರಿಶ್ರಮ ನಮ್ಮ ಜೀವನ ಉತ್ಕೃಷ್ಟಗೊಳಿಸಕೊಳ್ಳಲು ಸಹಕಾರಿಯಾಗಲಿದೆ. ಸಂಶೋಧನಾ ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಸಹಕಾರ ಮನೋಭಾವ, ವೃತ್ತಿ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಸಿಂದಗಿ ಅಂಜುಮನ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎ ಐ ಮುಲ್ಲಾ, ಬೆಂಗಳೂರು ಐಎಸ್‌ಎಸ್‌ಸಿ ವಿಶ್ರಾಂತ ಮುಖ್ಯಸ್ಥ ಕೆ ರಾಜಣ್ಣ, ಪ್ರೋ. ಎ ಎಂ ಕರಗುಪ್ಪಿಕರ, ಪ್ರೋ. ಎಸ್ ಎಸ್ ಕುಬಕಡ್ಡಿ, ಪ್ರೋ ಜಯಶ್ರೀ ತೊಣ್ಣನವರ, ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸಲಾವುದ್ದೀನ ಅಯ್ಯೂಬಿ ಪುಣೇಕರ, ನ್ಯಾಯವಾದಿ ಎ ಎಂ ತಾಂಬೋಳಿ, ಶಿಕ್ಷಕ ಕಬೂಲ್ ಕೊಕಟನೂರ ಮಾತನಾಡಿದರು. ಡಾ. ರಮೇಶ ಕಳಸದ, ಡಾ.ನಿಖಿಲ ಮುರಗುಂದಿ, ಡಾ. ಜ್ಯೋತಿ ದೊಡಮನಿ, ಡಾ.ರಘು ಗುಣಗೋಳ, ಡಾ ರಫೀಕ ಮುಲ್ಲಾ ಸೇರಿದಂತೆ ಮತ್ತೀತರರು ಮಾತನಾಡಿದರು.
 
ಇದೇ ಸಂದರ್ಭದಲ್ಲಿ ವೃತ್ತಿಯಿಂದ ನಿವೃತ್ತಿ ಹೊಂದಿದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಭೌತಶಾಶ್ತç ವಿಭಾಗದ ಚೇರಮನ್ ಪ್ರೋ. ಎಂ ಕೆ ರಬಿನಾಳ ಅವರನ್ನು ದೇವರಹಿಪ್ಪರಗಿ, ಸಿಂದಗಿ, ವಿಜಯಪುರ ಧಾರವಾಡ ಗೆಳೆಯರ ಬಳಗ ಸನ್ಮಾನಿಸಿ ಗೌರವಿಸಿದರು. ಅಬ್ದುಲ್‌ಗನಿ ಪಾನಪರೋಷ, ಎನ್ ಡಿ ಭೂಸನೂರ, ಅಫ್ಜಲ್‌ಖಾನ, ಪ್ರೋ. ಎನ್ ಎಸ್ ಸಂಖೇಶ್ವರ, ಪ್ರೋ. ಎನ್ ಆರ್ ನಾಯಕ, ಪ್ರೋ ಕಾಡದೇವರಮಠ, ಡಾ. ಎ ಎಸ್ ಬೆನಾಳ, ಪ್ರೋ. ಬಡೇಸಾಬ ಚಿಲ್ಲೆದಾರ ಪ್ರೋ ನದಾಫ ಸೇರಿದಂತೆ ಮತ್ತೀತರರು ಪಾಲ್ಗೊಂಡಿದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.