ರಸಪ್ರಶ್ನೆ ಸ್ಪರ್ಧೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೀಠಿಕೆ ಇದ್ದಂತೆ

Jul 15, 2025 - 01:35
 0
ರಸಪ್ರಶ್ನೆ ಸ್ಪರ್ಧೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೀಠಿಕೆ ಇದ್ದಂತೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಸಿಂದಗಿ: ರಸಪ್ರಶ್ನೆ ಸ್ಪರ್ಧೆ ಎಂಬುದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೀಠಿಕೆ ಇದ್ದಂತೆ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ರಸ ಪ್ರಶ್ನೆ ನಡೆಸುವದರಿಂದ ವಿದ್ಯಾರ್ಥಿಗಳು ಮುಂದೆ  ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡಲು ನಡೆಯುವ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ  ನಿಂಗನಗೌಡ ಸಾ ಬಿರಾದಾರ ಹೇಳಿದರು.            

ತಾಲೂಕಿನ ಬಂದಾಳ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಶನಿವಾರರಂದು ವಿದ್ಯಾರ್ಥಿಗಳಿಗೆ ಕೌನ ಬನೇಗಾ ವಿದ್ಯಾಧಿಪತಿ  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸರಕಾರಿ ಶಾಲೆಯ ಮಕ್ಕಳಿಗೆ ಈ ಪ್ರಕಾರವಾಗಿ ಕಾರ್ಯಕ್ರಮ ಮಾಡುವದು ಹೆಮ್ಮಯ ವಿಷಯವಾಗಿದೆ ಮಕ್ಕಳಿಗೆ  'ಬೇರೆ ಸಾಂಸ್ಕೃತಿಕ ಸ್ಪರ್ಧೆಗಳಿಗಿಂತ ರಸಪ್ರಶ್ನೆ ಸ್ಪರ್ಧೆ ವಿಭಿನ್ನವಾಗಿರುತ್ತದೆ. ಶಾಲಾ ಪರೀಕ್ಷೆಯಲ್ಲಿ ಕೇವಲ ತರಗತಿಯ ಪಠ್ಯಪುಸ್ತಕಕ್ಕೆ ಸಂಬAಧಿಸಿದ ಪ್ರಶ್ನೆಗಳು ಇರುತ್ತವೆ. ಆದರೆ, ರಸಪ್ರಶ್ನೆ ಸ್ಪರ್ಧೆಯಲ್ಲಿ ಯಾವ ಪ್ರಶ್ನೆಗಳು ಬರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಇದಕ್ಕೆ ಯಾವುದೇ ಒಂದು ಪಠ್ಯಪುಸ್ತಕದ ಚೌಕಟ್ಟು, ಸೀಮೆ ಎಂಬುದು ಇರುವುದಿಲ್ಲ ಎಂದರು.                

ಎಸ್ ಡಿ ಎಂ ಸಿ ಸದಸ್ಯ ನಬಿ ರಸೂಲ್ ಬೆಕಿನಾಳ ಮಾತನಾಡಿ ‘ರಸಪ್ರಶ್ನೆ ಸ್ಪರ್ಧೆಯಲ್ಲಿ  ಎಲ್ಲಾ ಮಕ್ಕಳು  ಭಾಗವಹಿಸಿದಾಗ ದೇಶ, ವಿದೇಶದ ವಿದ್ಯಾಮಾನಗಳನ್ನು ತಿಳಿದುಕೊಳ್ಳಲು ಪ್ರತಿನಿತ್ಯ ದಿನ ಪತ್ರಿಕೆಗಳನ್ನು ಓದಬೇಕು, ವಾರ್ತೆಗಳನ್ನು ನೋಡಬೇಕು, ಕೇಳಬೇಕು. ಕುತೂಹಲ ಇರಬೇಕು ಎಂದು ಸಲಹೆ ನೀಡಿದರು.    ವಿಜ್ಞಾನ ಶಿಕ್ಷಕ ಕೃಷ್ಣರಾವ್ ಕುಲಕರ್ಣಿ ಮಾತನಾಡಿದರು.

 ಕಾರ್ಯಕ್ರಮದಲ್ಲಿ ಗ್ರಾ ಪಂ ಸದಸ್ಯ ಪ್ರತಿನಿಧಿ ಅಶೋಕ ತಳವಾರ, ಮುಖ್ಯಗುರು ನಿಂಗನಗೌಡ ಪಾಟೀಲ, ಶಿಕ್ಷಕರಾದ ಚಂದ್ರಶೇಖರ ಬುಯ್ಯಾರ, ಪಿ ವ್ಹಿ ಕುಲಕರ್ಣಿ ಎಸ್ ಬಿ ಪೊದ್ದಾರ, ಚಿಕ್ಕ ಮಕ್ಕಳ ಸಾಹಿತಿ ಬಸವರಾಜ ಅಗಸರ .ಭಾಗೇಶ ಗೋಲಗೇರಿ, ದಯಾನಂದ ಅಂಬಿಗೇರ ಶ್ರೀಮತಿ ಆಯ್ ಜಿ ನಾಗಠಾಣ, ಶ್ರೀಮತಿ ಸುಮಂಗಲ ಕೆಂಭಾವಿ, ಶ್ರೀಮತಿ ಅಕ್ಷತಾ ಉಡಕೇರಿ ಶಿಕ್ಷಕರು ಶ್ರೀಮತಿ ಮಲ್ಲಮ್ಮ ಹಿಪ್ಪರಗಿ ಶಿವಶರಣ ಕಂಟಿಗೊAಡ  ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.