ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಬೇಡಿಕೆಗಾಗಿ ಆಗಸ್ಟ್ 19ರಂದು ಕಲಬುರಗಿಯಲ್ಲಿ ಪ್ರತಿಭಟನೆ

Aug 18, 2025 - 11:32
Aug 18, 2025 - 11:34
 0
ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಬೇಡಿಕೆಗಾಗಿ ಆಗಸ್ಟ್ 19ರಂದು ಕಲಬುರಗಿಯಲ್ಲಿ ಪ್ರತಿಭಟನೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಕಲಬುರಗಿ: ಬೆಂಗಳೂರಿನಲ್ಲಿ ನಡೆಯುತ್ತಿರುವ 2025ನೇ ಸಾಲಿನ ಮುಂಗಾರು ಅಧಿವೇಶನದ ವೇಳೆ, ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ನಾನಾ ಬೇಡಿಕೆಗಳು ಹಾಗೂ ಮೀಸಲಾತಿಗಾಗಿ ಆಗಸ್ಟ್ 19, ಮಂಗಳವಾರ ಬೆಳಿಗ್ಗೆ 10:30ಕ್ಕೆ ಕಲಬುರಗಿಯಲ್ಲಿ ಭಾರಿ ಪ್ರತಿಭಟನೆ ರ್ಯಾಲಿ ನಡೆಯಲಿದೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಪ್ರಾರಂಭವಾಗುವ ಈ ರ್ಯಾಲಿಯಲ್ಲಿ, ಮಠಾಧೀಶರು, ಮಹಿಳಾ ತಾಯಂದಿರು, ಯುವಕರು ಹಾಗೂ ನೂರಾರು ಹಡಪದ ಸಮಾಜದ ಭಾಂಧವರು ಭಾಗವಹಿಸಲಿದ್ದಾರೆ.

ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ, ಹಿಂದುಳಿದ ವರ್ಗ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗುವುದು.

“ಹಡಪದ ಕ್ಷೌರಿಕ ಸಮಾಜಕ್ಕೆ ಎದುರಾಗಿರುವ ಜಲ್ವಂತ ಸಮಸ್ಯೆಗಳು, ದಿನನಿತ್ಯ ನಡೆಯುತ್ತಿರುವ ಹಲ್ಲೆಗಳು, ಜಾತಿನಿಂದನೆ ಹಾಗೂ ಅನೇಕ ಬಗೆಯ ಸಾಮಾಜಿಕ ಅನ್ಯಾಯಗಳನ್ನು ನಿವಾರಿಸಲು, ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದ ವಿಭಾಗಕ್ಕೆ ಒಳ ಮೀಸಲಾತಿ ನೀಡಬೇಕು. ಈ ಬೇಡಿಕೆಗಳಿಗೆ ನ್ಯಾಯ ಒದಗಿಸಲು ಬೃಹತ್ ಹೋರಾಟ ನಡೆಸುತ್ತಿದ್ದೇವೆ ” ಎಂದು ಜಿಲ್ಲಾಧ್ಯಕ್ಷ ಈರಣ್ಣ ಸಿ. ಹಡಪದ (ಸಣ್ಣೂರ), ಜಿಲ್ಲಾ ಕಾರ್ಯಾಧ್ಯಕ್ಷ ಭಗವಂತ ಹಡಪದ (ಕಿರಣಗಿ), ಪ್ರ. ಕಾರ್ಯದರ್ಶಿ ರಮೇಶ್ ಹಡಪದ (ನೀಲೂರ), ಹಾಗೂ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ (ಸುಗೂರ) ಅವರು ಈ ಕುರಿತು ಮಾಹಿತಿ ನೀಡಿದರು.

ನಾಯಕರು ಸಮಾಜದ ಎಲ್ಲ ಭಾಂಧವರು, ಮಹಿಳೆಯರು, ಯುವಕರು ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.