ಭೃಷ್ಟಾಚಾರ ನಿರ್ಮೂಲನೆಯಾದರೆ ದೇಶ ಪ್ರಗತಿ ಹೊಂದಲು ಸಾಧ್ಯ : ಶಾಸಕ ವಿಠ್ಠಲ ಕಟಕಧೋಂಡ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಚಡಚಣ : ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗ ಗತಿಯಲ್ಲಿ ನಡೆಯುತ್ತಿವೆ. ಆದರೆ, ಅಭಿವೃದ್ಧಿಯ ಜೊತೆ ಜೊತೆಗೆ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ಸಂಪೂರ್ಣ ಭ್ರಷ್ಟಾಚಾರ ನಿರ್ಮೂಲನೆಯಾದಾಗ ಮಾತ್ರ ರಾಜ್ಯ, ದೇಶ ಜಗತ್ತಿನಲ್ಲಿ ಅತ್ಯುನ್ನತ ಸ್ಥಾನಕ್ಕೇರುವದರಲ್ಲಿ ಸಂಶಯವಿಲ್ಲ ಎಂದು ಶಾಸಕ ವಿಠ್ಠಲ ಕಟಕಧೋಂಡ (mla vittala katakadhonda) ಅವರು ಹೇಳಿದರು.
ತಾಲೂಕಾಡಳಿತ ವತಿಯಿಂದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ೭೯ನೇ ಸ್ವಾತಂತ್ರೊö್ತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ದೇಶವು ಬ್ರಿಟೀಷರ ಆಳ್ವಿಕೆಯಿಂದ ನಮಗೆ ಸ್ವಾತಂತ್ರö್ಯ ಸಹಜವಾಗಿ ದೊರಕಿಲ್ಲ. ಮಹಾನ್ ನಾಯಕರಾದ ಮಹಾತ್ಮಾ ಗಾಂಧಿ, ಸುಭಾಷ ಚಂದ್ರ ಬೋಸ್, ಭಗತ್ ಸಿಂಗ, ವಲ್ಲಭಬಾಯಿ ಪಟೇಲ ಸೇರಿದಂತೆ ಮುಂತಾದ ಮಹನೀಯರ ಜೊತೆ ಸಾವಿರಾರು ಸ್ವಾತಂತ್ರ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ೧೯೪೭ರ ಆಗಷ್ಟ ೧೫ ರಂದು ನಮಗೆ ಸಂಪೂರ್ಣ ಸ್ವಾತಂತ್ರ ದೊರಕ್ಕಿದ್ದರ ಪರಿಣಾಮ ಇಂದು ನಾವೆಲ್ಲರೂ ಸ್ವತಂತ್ರ ಭಾರತದ ಪ್ರಜೆಗಳಾಗಿದ್ದೇವೆ. ನಮಗೆ ಸ್ವಾತಂತ್ರö್ಯ ಸಿಕ್ಕ ಆ. ೧೫ರಂದು ನಾವು ದೇಶವಾಸಿಗಳು ದೇಶದ ಉದ್ದಗಲಕ್ಕೂ ಸ್ವಾತಂತ್ರö್ಯ ಹಬ್ಬವನ್ನು ಆಚರಿಸುತ್ತಿದ್ದೇವೆ.
ಇಂದು ಭಾರತ ದೇಶ ಜಗತ್ತಿಗೆ ಹೆದರದೇ ಸ್ವಾವಲಂಬಿಯಾಗಿದೆ. ದೇಶ ಆರ್ಥಿಕವಾಗಿ, ತಂತ್ರಜ್ಞಾನದಲ್ಲಿ ಹೆಚ್ಚು ಸಾಧನೆ ಮಾಡುತ್ತಿದೆ. ಶತಮಾನಗಳಲ್ಲಿ ಭಾರತ-ಪಾಕ್, ಭಾರತ-ಚೀನಾ ಯುದ್ಧಗಳಲ್ಲಿ ನಮ್ಮ ಸೈನಿಕರು ಪರಾಕ್ರಮ ಮೆರೆದು ದೇಶಕ್ಕೆ ಜಯ ಸಾಧಸಿ ಕೊಟ್ಟಿದ್ದಾರೆ, ಅಷ್ಟೇ ಅಲ್ಲದೇ ಕೆಲವು ತಿಂಗಳುಗಳ ಹಿಂದೆ ಜಮ್ಮು-ಕಾಶ್ಮೀರದಲ್ಲಿ ನಡೆದ ಹಿಂದೂಗಳ ಹತ್ಯೆಯ ವಿರುಧ್ಧ ಸಿಂಧೂರ ಹೆಸರಿನಲ್ಲಿ ಕಾರ್ಯಾಚರಣೆ ಮಾಡಿ ಉಗ್ರರನ್ನು ಹಾಗೂ ಉಗ್ರರನ್ನು ಪೋಷಿಸುವ ದೇಶಗಳನ್ನು ಬಗ್ಗು ಬಡಿಯುವಲ್ಲಿ ನಮ್ಮ ದೇಶದ ಸೈನಿಕರು ತಮ್ಮ ಪರಾಕ್ರಮ ಮೆರೆದು ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಧ್ವಜಾರೋಹಣ ನೆರವೇರಿಸಿ, ಪ್ರಾಸ್ತಾವಿಕವಾಗಿ ಚಡಚಣ ತಹಶೀಲದಾರ ಸಂಜಯ ಇಂಗಳೆ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರೊ. ರವಿಕುಮಾರ ಅರಳಿ ಅವರು ಸ್ವಾತಂತ್ರö್ಯ ದಿನಾಚರಣೆ ಹಾಗೂ ಸ್ವಾತಂತ್ರö್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ತಾ.ಪಂ. ವತಿಯಿಂದ ಅಂಗವಿಕಲರಿಗೆ ೨೦೨೪-೨೫ನೇ ಸಾಲಿನ ೮ ತ್ರಿಚಕ್ರ ವಾಹನಗಳನ್ನು ಶಾಸಕ ವಿಠ್ಠಲ ಕಟಕಧೋಂಡ ಅವರು ಹಸ್ತಾಂತರಿಸಿದರು. ಮಾಜಿ ಸೈನಿಕ ರವಿ ಕುಲಕರ್ಣಿ ಅವರನ್ನು ಶಾಸಕ ವಿಠ್ಠಲ ಕಟಕಧೋಂಡ ಸನ್ಮಾನಿಸಿದರು.
ನಂತರ ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವೇದಿಕೆಯ ಮೇಲೆ ತಾ.ಪಂ. ಇಓ ಸಂಜಯ ಖಡಗೇಕರ, ಪ.ಪಂ. ಮುಖ್ಯಾಧಿಕಾರಿ ಬಾಬಾಸಾಹೇಬ ತಾವಸೆ, ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ, ಸಿ.ಪಿ.ಐ. ಸುರೇಶ ಬೆಂಡಗುAಬಳ, ಬಿಇಓ ಬಸವರಾಜ ನಾಡಗೇರಿ, ಉಪಖಜಾನಾಧಿಕಾರಿ ರಮೇಶ ವಾಲಿಕಾರ, ಪಂಚ ಗ್ಯಾರಂಟಿ ತಾಲೂಕಾ ಅಧ್ಯಕ್ಷ ರವಿ ಜಾಧವ, ಕೆ.ಡಿ.ಪಿ. ಸದಸ್ಯರಾದ ಶಿವಣ್ಣ ಪಾಂಡ್ರೆ, ರವಿ ಬಿರಾದಾರ, ಪ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ, ಉಪಾಧ್ಯಕ್ಷ ಇಲಾಯಿ ನದಾಫ ಸೇರಿದಂತೆ ಪ.ಪಂ.ನ ಸರ್ವ ಸದಸ್ಯರು ಉಪಸ್ಥಿತರಿದ್ದರು.