ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ : ಮುಧೋಳ ಸಂಘದಿಂದ ಸನ್ಮಾನ

Aug 16, 2025 - 22:38
Aug 17, 2025 - 08:48
 0
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ : ಮುಧೋಳ ಸಂಘದಿಂದ ಸನ್ಮಾನ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 


ಧಾರವಾಡ : ಧಾರವಾಡ ನಗರದಲ್ಲಿ ದಿವಂಗತ ಎ.ಜೆ. ಮುಧೋಳ ಅಭಿಮಾನಿಗಳ ಕಟ್ಟಡ ಮತ್ತು ಇತರೇ ನಿರ್ಮಾಣ ಸಂಘದ ವತಿಯಿಂದ ೨೦೨೪-೨೦೨೫ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮೆರೆದ ಬಡ ಕಾರ್ಮಿಕರ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ವೇಳೆ, ೭೫% ಮತ್ತು ೮೦% ಅಂಕಗಳನ್ನು ಪಡೆದ ೧೦ ಮಕ್ಕಳಿಗೆ ಚಿಕ್ಕ ಕಾಣಿಕೆ ಹಾಗೂ ಪ್ರಶಸ್ತಿ ನೀಡಿ, ಗೌರವಿಸಲಾಯಿತು.                

ಕಾರ್ಯಕ್ರಮವು ಧಾರವಾಡದ ಸಂಘದ ಕಚೇರಿ ಆವರಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಬಾಬಾಜಾನ್ ಮುಧೋಳ ಅವರು ತಮ್ಮ ಭಾಷಣದಲ್ಲಿ ಬಡ ಕಾರ್ಮಿಕರ ಕುಟುಂಬಗಳಿ0ದ ಬಂದ ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ಶಿಕ್ಷಣದ ಮಹತ್ವವನ್ನು ವಿವರಿಸಿದರು.        

"ಬಡ ಕುಟುಂಬದಲ್ಲಿ ಹುಟ್ಟಿದವರು ದಾರಿ ತಪ್ಪದೇ, ತಮ್ಮ ಕಠಿಣ ಶ್ರಮದಿಂದ ಜೀವನವನ್ನು ಮುಂದುವರಿಸಬೇಕು. ಕೆಲವೊಮ್ಮೆ ಆರ್ಥಿಕ ಸಂಕಷ್ಟಗಳು ಅವುಗಳ ಗುರುತು ಮಾಡುತ್ತವೆ, ಆದರೆ ಶಿಕ್ಷಣವೇ ಇಲ್ಲಿಯ ಮುಖ್ಯ ಮಾರ್ಗವಾಗಿದೆ," "ಸರ್ಕಾರಗಳು, ಸಮಾಜದ ಗಣ್ಯರು ಮತ್ತು ಸಾರ್ವಜನಿಕರು ಬಡ ಮಕ್ಕಳನ್ನು ಗುರುತಿಸಿ, ಅವರಿಗೆ ಶಿಕ್ಷಣದಲ್ಲಿ ನೆರವು ನೀಡಬೇಕು. ಅವರ ಏಳಿಗೆಗಾಗಿ ಕಠಿಣ ಶ್ರಮ ಮಾಡಬೇಕಾಗಿದೆ ಎಂದು ಬಾಬಾಜಾನ್ ಮುಧೋಳ ಹೇಳಿದರು. 

 ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಹಾಯವಾಣಿ ಪ್ರತ್ಯೇಕವಾಗಿ ನೀಡಲು ಹಾಗೂ ಇವರ ವಿದ್ಯಾಭ್ಯಾಸವನ್ನು ಉತ್ತೇಜಿಸಲು ಎಲ್ಲರಿಗೂ ಮನವಿ ಮಾಡಿದರು.    

ಈ ಸಂದರ್ಭದಲ್ಲಿ ಯೂಸುಫ್ ಬಳ್ಳಾರಿ, ಕಾಲು ಸಿಂಗ್ ಚವ್ಹಾಣ, ಬಿ ಎ ಮುಧೋಳ, ಪೀರಸಾಬ್ ನದಾಫ, ಶಂಕರ ಕೋಟಿ, ರಂಜಾನ್ ನದಾಫ, ರೆಹಮಾನ್ ಸಾಬ್ ಮಕಾಂದರ, ಬೀರಪ್ಪ ಕಟಗಿ, ಮಂಜುನಾಥ ಶಿಂದೆ, ರಮೇಶ್ ಭೋಸ್ಲೆ, ಮಂಜುನಾಥ ಮ್ಯುಮಿಗಟ್ಟಿ, ಪುಂಡಲೀಕ ಆಡೂರ್, ಸಿಕಂದರ್ ನದಾಫ, ಫಾತೀಮಾ ತಡಕೊಡ, ಟಿ ಎನ್ ಶಿರಿನ್, ಮೆಹಬೂಬ್ ಮುತ್ತಗಿ ಮುಂತಾದವರು ಭಾಗವಹಿಸಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.