ವಿಕಲಚೇತನರ ಕಾಳಜಿ ಸಾಮಾಜಿಕ ಕರ್ತವ್ಯ : ಸಚಿವ ಎಂ.ಬಿ.ಪಾಟೀಲ

Aug 15, 2025 - 22:44
 0
ವಿಕಲಚೇತನರ ಕಾಳಜಿ ಸಾಮಾಜಿಕ ಕರ್ತವ್ಯ : ಸಚಿವ ಎಂ.ಬಿ.ಪಾಟೀಲ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 
 
ವಿಜಯಪುರ : ವಿಕಲಚೇತನರಿಗೆ ಅನುಕಂಪ-ಸಹಾನುಭೂತಿ ಅವಶ್ಯಕತೆ ಇಲ್ಲ. ಅವರ ಕಾಳಜಿ ವಹಿಸುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ-ಕರ್ತವ್ಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು. 
ಶುಕ್ರವಾರ ನಗರದ ಬಿಎಲ್‌ಡಿಇ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರ, ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮ (ಅಲಿಂಕೋ) ಇವರ ಸಹಯೋಗದಲ್ಲಿ ಭಾರತ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್‌ನ ೨೦೨೫-೨೬ನೇ ಸಾಲಿನ ಸಿಎಸ್‌ಆರ್ ಅನುದಾನದಲ್ಲಿ ಕೃತಕ ಅಂಗಾAಗಳ ಜೋಡಣೆ, ಸಾಧನೆ ಸಲಕರಣೆಗಳು ಹಾಗೂ ಶ್ರವಣ ಸಾಧನಗಳನ್ನು ಜಿಲ್ಲಾ ವಿಕಲಚೇತನ ಫಲಾನುಭವಿಗಳಿಗೆ ವಿತರಣೆ ಮಾಡಿ ಅವರು ಮಾತನಾಡಿದರು.
ಅಂಗವಿಕಲತೆ ಯಾವುದೇ ಶಾಪ ಅಲ್ಲ. ಅದು ಯಾರಿಗೂ, ಯಾವ ಸಂದರ್ಭದಲ್ಲಿಯೂ ಬರಬಹುದು. ಹೀಗಾಗಿ ಅವರಿಗೆ ಸಹಾನೂಭೂತಿಯ ಅವಶ್ಯಕತೆ ಇಲ್ಲ. ಅವರ ಕಾಳಜಿ ವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಂಡು ಅವರಿಗೆ ಅವಕಾಶವನ್ನು ಒದಗಿಸುವ ಮೂಲಕ ವಿಕಲಚೇತನರ ಸಹಾಯ-ಸಹಕಾರಕ್ಕೆ ಮುಂದಾಗುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಅಂಗವಿಕಲರ ಸುಸ್ಥಿರ-ಸುಭದ್ರ ಬದುಕಿಗಾಗಿ ಕೇಂದ್ರ- ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿ ಅನುಷ್ಠಾನಗೊಳಿಸುತ್ತವೆ. ಆದರೆ ಕೇವಲ ಸರ್ಕಾರಗಳು ಸಹಾಯ ಹಸ್ತ ನೀಡಿದರೆ ಸಾಲದು. ಸಂಘ-ಸ0ಸ್ಥೆಗಳು ಈ ಕಾರ್ಯಕ್ಕೆ ಕೈ ಜೋಡಿಸಬೇಕು. ಸಂಸ್ಥೆಗಳು ತಮಗೆ ಬಂದಿರುವ ಲಾಭದ ಹಣವನ್ನು ಇಂತಹ ಕಾರ್ಯಗಳಿಗೆ ಬಳಸುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿ-ಕರ್ತವ್ಯವನ್ನು ನಿಭಾಯಿಸಬೇಕು ಎಂದು ಅವರು ಹೇಳಿದರು.

ಭಾರತ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್‌ನ ಸಿಎಸ್‌ಆರ್ ಅನುದಾನದಲ್ಲಿ ಜಿಲ್ಲೆಯ ೮೦ಕ್ಕೂ ಹೆಚ್ಚು ವಿಕಲಚೇತನ ಫಲಾನುಭವಿಗಳಿಗೆ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತಿದ್ದು, ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಬಿಎಲ್‌ಡಿಇ ಸಂಸ್ಥೆ ಅತ್ಯಂತ ಹಳೆಯದಾದ ಸಂಸ್ಥೆಯಾಗಿದೆ. ವಿವಿಧ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದೆ. ಜಿಲ್ಲಾ ವಿಕಲಚೇತನರ ಪುನರವಸತಿ ಕೇಂದ್ರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ವಿಕಲಚೇತನರಿಗೆ ಸದುಪಯೋಗವಾಗಲು ಅಗತ್ಯವಿದ್ದ ವಿಕಲಚೇತನರಿಗೆ ಕೇಂದ್ರದ ಕುರಿತು ಮಾಹಿತಿ ಒದಗಿಸುವಂತೆ ತಿಳಿಸಿದ ಅವರು, ವಿಕಲಚೇತನರಿಗೆ ಅಗತ್ಯ ಸಾಧನ-ಸಲಕರಣೆ ಒದಗಿಸಲು ಕ್ರಮ ವಹಿಸಲಾಗುವುದು. 

-ಡಾ.ಆನಂದ ಕೆ. ಜಿಲ್ಲಾಧಿಕಾರಿ

ಸಿಎಸ್‌ಆರ್ ಅನುದಾನವನ್ನು ಬಳಸಿಕೊಂಡು ಈಗಾಗಲೇ ಬಬಲೇಶ್ವರ ಮತಕ್ಷೇತ್ರದ ಹಲವು ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ನಾಗಠಾಣ, ಸಿಂದಗಿ, ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತೆ ಅನುದಾವನ್ನು ಬಳಕೆ ಮಾಡಿ,  ಶಿಕ್ಷಣಕ್ಕೆ ಒತ್ತು ನೀಡಿ, ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಭಾರತ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕ ವೆಂಕಟೇಶ ಪ್ರಾಸ್ತಾವಿಕವಾಗಿ ಮಾತನಾಡಿ, ಬಹುತೇಕರು ಸಿಎಸ್‌ಆರ್ ಅನುದಾನವನ್ನು ತಮ್ಮ ವೈಯಕ್ತಿಕ ಸಂಸ್ಥೆಗಳಿಗೆ ಬಳಸಿಕೊಳ್ಳುತ್ತಾರೆ. ಆದರೆ ಜನಪರ ಕಾಳಜಿ ಹೊಂದಿದ, ಹೃದಯ ವೈಶಾಲ್ಯತೆ ಹೊಂದಿದ ಸಚಿವ ಎಂ.ಬಿ.ಪಾಟೀಲರು ತಮ್ಮ ಸಂಸ್ಥೆಗೆ ಬಳಸಿಕೊಳ್ಳದೇ ಸಿಎಸ್‌ಆರ್ ಅನುದಾನವನ್ನು ಜನೋಪಯೋಗಿಯಾಗಿ ಬಳಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸಾಮಾಜಿಕ ಕಾರ್ಯಗಳಿಗಾಗಿ ಭಾರತ ಪೆಟ್ರೋಲಿಯಂ ಲಿ.ವತಿಯಿಂದ ಈ ವರ್ಷ ೫೦ ಲಕ್ಷರೂ. ಅನುದಾನವನ್ನು ಒದಗಿಸಲಾಗಿದ್ದು, ಈ ಅನುದಾನದಲ್ಲಿ ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ, ಕೃತಕ ಅಂಗಾAಗಳ ಜೋಡಣೆ ಸೇರಿದಂತೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ.  ಇಷ್ಟೇ ಅಲ್ಲದೇ ಮುಂದೆಯೂ ಸಹ ಸದಾ ನಮ್ಮ ಸಂಸ್ಥೆ ಸಾಮಾಜಿಕ ಕಾರ್ಯಗಳಿಗಾಗಿ ಕೈ ಜೋಡಿಸಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕೌಶಲ್ಯಾಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಕಾಂತಾ ನಾಯ್ಕ, ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷö್ಮಣ ನಿಂಬರಗಿ, ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ.ವೈ.ಎ.ಜಯರಾಜ್ ಅಧೀಕ್ಷಕ ಹೊನ್ನುಟಗಿ,  ವೈದ್ಯಕೀಯ ಕಾಲೇಜ್  ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಡಿಡಿಆರ್‌ಸಿ ನೋಡಲ್ ಅಧಿಕಾರಿ ಈಶ್ವರ ಭಾಗೋಜಿ, ಬಿಪಿಸಿಎಲ್ ಅಧಿಕಾರಿ ಅಭಿಷೇಕಕುಮಾರ ಆನಂದ, ಹೃದ್ರೋಗ ತಜ್ಞರಾದ ಕಿಶೋರಕುಮಾರ ಸರೋಜ, ತಾಂತ್ರಿಕ ಸಿಬ್ಬಂದಿ ಸೋನು ಸೇರಿದಂತೆ ಇತರರು ಉಪಸ್ಥಿತರಿದ್ದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.