ಅಭಿವೃದ್ಧಿ ಕಾಮಗಾರಿಗೆ ಯತ್ನಾಳ ಭೂಮಿಪೂಜೆ; ಅಹವಾಲು ಸ್ವೀಕಾರ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ: ನಗರದ ವಾರ್ಡ ನಂ.29ರ ಅಭಿವೃದ್ಧಿ ನಗರದಲ್ಲಿ ಬರುವ ಉತ್ತರಾಧಿಮಠದ ಹತ್ತಿರ ಶನಿವಾರ ಲೋಕೋಪಯೋಗಿ ಇಲಾಖೆಯಿಂದ ಮಂಜೂರಿಸಿರುವ ರೂ.1 ಕೋಟಿ ಅನುದಾನದಲ್ಲಿ ವಿಶ್ವೇಶ್ವರಯ್ಯ ಮುಖ್ಯ ರಸ್ತೆಯಿಂದ ಉತ್ತರಾಧಿ ಮಠದ ಮೂಲಕ ಅಭಿವೃದ್ಧಿ ನಗರದ ಆಂತರಿಕ ಸಿಸಿ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಭೂಮಿ ಪೂಜೆ ನೆರವೇರಿಸಿದರು.
ಇದೇ ವೇಳೆ ನೆರೆದ ಸಾರ್ವಜನಿಕರಿಂದ ಅಹವಾಲು ಆಲಿಸಿದರು. ನಂತರ ಉತ್ತರಾಧಿ ಮಠಕ್ಕೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ಎಂ.ಎಸ್.ಕರಡಿ, ಉಪ ಮಹಾಪೌರರಾದ ಸುಮಿತ್ರಾ ಜಾಧವ, ಸದಸ್ಯರಾದ ಪ್ರೇಮಾನಂದ ಬಿರಾದಾರ, ಗಿರೀಶ ಪಾಟೀಲ, ಮುಖಂಡರಾದ ಪಾಂಡುಸಾಹುಕಾರ ದೊಡಮನಿ, ರಾಜು ಜಾಧವ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.