ಮಕ್ಕಳೊಂದಿಗೆ ಬಿಸಿಯೂಟ ಸವಿದ ಸಿಇಒ ರಿಷಿ ಆನಂದ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ನಿಡಗುಂದಿ ತಾಲೂಕಿನ ವಂದಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಣಶ್ಯಾಳ ಪಿಸಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಭೇಟಿ ನೀಡಿ, ಮಧ್ಯಾಹ್ನದ ಬಿಸಿಯೂಟ ಗುಣಮಟ್ಟ ಪರಿಶೀಲಿಸಿ ಮಕ್ಕಳದೊಂದಿಗೆ ಬಿಸಿಯೂಟ ಸವಿದರು.
ಶಾಲೆಯಲ್ಲಿನ ಕಟ್ಟಡದ ಸ್ಥಿತಿ-ಗತಿ, ಪಾಠ ಬೋಧನೆ, ಸರ್ಕಾರದಿಂದ ಮಕ್ಕಳಿಗೆ ಒದಗಿಸುವ ಸಮವಸ್ತ್ರ, ಪುಸ್ತಕ, ಕ್ಷೀರಭಾಗ್ಯದಡಿ ಹಾಲು ವಿತರಣೆ ಮುಂತಾದ ಯೋಜನೆಗಳ ಅನು?Á್ಠನದ ಬಗ್ಗೆ ಶಾಲಾ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು. ಶಾಲೆಯ ಆವರಣದಲ್ಲಿ ಮಹಾತ್ಮ ಗಾಂಧಿ ನರೇಗಾದಡಿ ಅನುಷ್ಠಾಗೊಂಡ ಕಾಂಪೌAಡ್ ನಿರ್ಮಾಣ, ಅಡುಗೆ ಕೋಣೆ ಹಾಗೂ ಹೈಟೆಕ್ ಶೌಚಾಲಯವನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಿಡಗುಂದಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ವೆಂಕಟೇಶ ವಂದಾಲ, ಬಸವನ ಬಾಗೇವಾಡಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಕಾಶ ದೇಸಾಯಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಬಸವರಾಜ ಕುಂಬಾರ, ಸಹಾಯಕ ಅಭಿಯಂತರ ವಿ.ಬಿ.ಗೊಂಗಡಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಶ್ರೀನಿವಾಸ, ಪಿಡಿಒ ರವಿ ಗುಂಡಳ್ಳಿ, ಆಲಮಟ್ಟಿ ಗ್ರಾಮ ಪಂಚಾಯತಿ ಪಿಡಿಒ ಜಿ.ಬಿ.ಕಲ್ಯಾಣಿ, ವಂದಾಲ ಗ್ರಾಮ ಪಂಚಾಯತಿ ಪಿಡಿಒ ಮಲ್ಲಿಕಾರ್ಜುನ ಹಾವರಗಿ, ಬೇನಾಳ ಗ್ರಾಮ ಪಂಚಾಯತಿ ಪಿಡಿಒ ಎ.ಎ.ಕೀಜಿ, ಬೇನಾಳ ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ ವಂದಾಲ, ಮಣ್ಣೂರು ಗ್ರಾಪಂ ಪಿಡಿಒ ಎಸ್ .ವೈ. ಕುಂಬಾರ ಹಾಗೂ ಇತರರು ಉಪಸ್ಥಿತರಿದ್ದರು.