ಯೋಗ ಅಭ್ಯಾಸ ಮಾಡಿದರೆ ಮಾನಸಿಕವಾಗಿ ಸಮತೋಲನದ ಜೀವನ ನಡೆಸಲು ಸಾಧ್ಯ : ಪ್ರೊ. ಹನುಮಂತಯ್ಯ ಪೂಜಾರಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ: ಪ್ರತಿದಿನ ಕನಿಷ್ಠ ೩೦ ನಿಮಿಷ ಯೋಗ ಅಭ್ಯಾಸ ಮಾಡಿದರೆ ದೈಹಿಕ ಹಾಗೂ ಮಾನಸಿಕವಾಗಿ ಸಮತೋಲನದ ಜೀವನ ನಡೆಸಲು ಸಾಧ್ಯ ಎಂದು ಮಹಿಳಾ ವಿವಿಯ ದೈಹಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಹನುಮಂತಯ್ಯ ಪೂಜಾರಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಹಾಗೂ ಇಂಡಿಯನ್ ಸೈನ್ಸ ಕಾಂಗ್ರೆಸ್ ಅಸೋಸಿಯೇಶನ್ ವಿಜಯಪುರ ಚಾಪ್ಟರ್ ವತಿಯಿಂದ ಶನಿವಾರ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಯೋಗ ಆರೋಗ್ಯವನ್ನು ವೃದ್ಧಿಸಲು, ಮನಸ್ಸನ್ನು ಶಾಂತಗೊಳಿಸಲು ಮತ್ತು ಒತ್ತಡವನ್ನು ತಗ್ಗಿಸಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ‘ಯೋಗಾ ಫಾರ್ ಒನ್ ಅರ್ಥ್ ಅಂಡ್ ಒನ್ ಹೆಲ್ತ್’ ಎಂಬ ಶೀರ್ಷಿಕೆ ಅಡಿಯಲ್ಲಿ ಸುಮಾರು ೧೫೦ ವಿದ್ಯಾರ್ಥಿನಿಯರಿಗೆ ಯೋಗ ಅಭ್ಯಾಸ ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ರಾಜಕುಮಾರ ಮಾಲಿ ಪಾಟೀಲ, ಡಾ.ಸಕ್ಪಾಲ್ ಹುವಣ್ಣಾ, ಡಾ.ಶ್ರೀನಿವಾಸ, ಡಾ.ಕಿರಣ ಹಾಗೂ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಡಾ.ಬಾಬು. ಆರ್.ಎಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಕಸ್ತೂರಿ ರಜಪೂತ ವಿದ್ಯಾರ್ಥಿನಿಯರಿಗೆ ಯೋಗ ಅಭ್ಯಾಸವನ್ನು ಮಾಡಿಸಿದರು.