ಅಮ್ಮ ಫೌಂಡೇಶನ್ ಕಾರ್ಯ ಶ್ಲಾಘನೀಯ : ಡಾ.ಮಲ್ಲಿಕಾ ಘಂಟಿ

Jul 7, 2025 - 22:28
 0
ಅಮ್ಮ ಫೌಂಡೇಶನ್ ಕಾರ್ಯ ಶ್ಲಾಘನೀಯ : ಡಾ.ಮಲ್ಲಿಕಾ ಘಂಟಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ: ವಿಶ್ವಗುರು ಬಸವಣ್ಣನವರ ಸಿದ್ಧಾಂತದOತೆ ನಡೆದುಕೊಂಡು ಸಮ ಸಮಾಜ ನಿರ್ಮಾಣ ಮಾಡಬೇಕು ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಸ್ಮರಿಸುವ ಕಾರ್ಯ ಮಾಡಿದ ಅಮ್ಮ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಹೇಳಿದರು.            

ನಗರದ ಕಂದಗಲ್ ಹನುಮಂತರಾಯ ರಂಗಮ0ದಿರದಲ್ಲಿ ಅಮ್ಮ ಪೌಂಡೇಶನ ದೇವರಹಿಪ್ಪರಗಿ-ವಿಜಯಪುರ ಹಮ್ಮಿಕೊಂಡ ರಾಜ್ಯಮಟ್ಟದ ಬಸವ ಸಂಸ್ಕೃತಿ ಉತ್ಸವ-೨೦೨೫ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.                      

 ಬಸವಣ್ಣನವರನ್ನು ಒಂದು ಜಾತಿಗೆ ಸಿಮಿತಗೊಳಿಸದೆ, ಅವರನ್ನು ವಿಶಾಲತೆಯಿಂದ ಕಾಣಬೇಕು. ಬಸವಣ್ಣ ಮಹಿಳೆಯರಿಗೆ ಘನತೆಯ ಬದುಕು ದೊರಕಿಸಿಕೊಟ್ಟವರು.ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಣೆ ಮಾಡಿದ್ದು ಅಭಿನಂದನೀಯವಾಗಿದೆ. ಇಂಗ್ಲಿ ಸಂಸ್ಕೃತಿ ಬಳಕೆಯಿಂದ ನಮ್ಮ ಸಂಸ್ಕೃತಿಗೆ ಧಕ್ಕೆಯಾಗುತ್ತಿದ್ದು, ನಾವೆಲ್ಲರೂ ಬಸವ ಸಂಸ್ಕೃತಿಯ ಕಡೆಗೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಅಮ್ಮ ಫೌಂಡೇಶನ್ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಸಂತಸದ ಸಂಗತಿ ಎಂದರು.                        

ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ವಿಶ್ವ ಕಂಡ ಅಪರೂಪದ ನಾಯಕ ಬಸವಣ್ಣ, ನಮ್ಮೆಲ್ಲರಿಗೂ ಆರಾಧ್ಯರಾಗಿದ್ದಾರೆ. ಇಂತಹ ಮಹನೀಯರ ನಾಡಿನಲ್ಲಿ ಜನಿಸಿರುವುದೇ ನಮ್ಮೆಲ್ಲರ ಪುಣ್ಯವಾಗಿದೆ ನಾವೆಲ್ಲ ಯುಗಪುರುಷನನ್ನು ಗೌರವಿಸಿ ಅವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡಾಗ ಜೀವನ ಪಾವನವಾಗುತ್ತದೆ ಎಂದರು.                      

 ಎಸ್ಪಿ ಲಕ್ಷ್ಮಣ ಬಿ ನಿಂಬರಗಿ ಮಾತನಾಡಿ, ಬಸವಾದಿ ಶರಣರ ವಚನಗಳು ಸರ್ವಕಾಲಿಕ ಪ್ರಸ್ತುತವಾಗಿವೆ. ಪ್ರಭುತ್ವದ ವಿರುದ್ದ ಹೋರಾಡಿ, ಅನುಭವ ಮಂಟಪ ನಿರ್ಮಿಸಿ ಪ್ರಜಾಪ್ರಭುತ್ವ ಸ್ಥಾಪಿಸಿದವರು ಬಸವಾದಿ ಶರಣರು. ಬಸವಣ್ಣನವರನ್ನು ಹಾಗೂ ಬಸವಾದಿ ಶರಣರ ವಚನಗಳು ಕರ್ನಾಟಕಕ್ಕೆ ಸಿಮೀತಗೊಳಿಸದೇ, ವಚನಗಳು ಬೇರೆ ಬೇರೆ ಭಾಗಳಿಗೆ ಅನುವಾದ ಆಗುವುದರ ಮೂಲಕ ಬಸವ ಚಿಂತನೆ, ಸಿದ್ದಾಂತ ವಿಶ್ವದ ಇತರೆ ಭಾ?ೆಗಳಲ್ಲಿ ಪ್ರಚಾರ ಪಡಿಸುವ ಅಗತ್ಯ ಇದೆ ಎಂದು ಹೇಳಿದರು.                    

ಆಲಮೇಲ ವಿರಕ್ತ ಮಠದ ಶ್ರೀ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮ ಸಂಘಟಕ ಅಮ್ಮ ಫೌಂಡೇಶನ್ ಸಂಚಾಲಕ ಕಬೂಲ್ ಕೊಕಟನೂರ ಪ್ರಾಸ್ತಾವಿಕವಾಗಿ ಮಾತನಾಡಿ ಫೌಂಡೇಶನ್ ಕುರಿತು ತಿಳಿಸಿದರು.                     

 ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಡಾ. ವಿಜಯಾ ಕೊರಿಶೆಟ್ಟಿ, ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರಪ್ಪ ಮಾತನಾಡಿದರು.                    

 ಸಮಾರಂಭದಲ್ಲಿ ಡಾ.ಪ್ರಭುಗೌಡ ಲಿಂಗದಳ್ಳಿ, ಉಮೇಶ ಕಾರಜೋಳ, ಎಸ್ ಎಂ ಪಾಟೀಲ (ಗಣಿಹಾರ), ಡಾ. ಆರ್‌ಎಸ್ ಪಾಟೀಲ, ಎಂ.ಸಿ.ಮುಲ್ಲಾ, ಎ.ಎಂ.ತಾAಬೋಳಿ, ಸಯ್ಯದಜುಬೇರ ಕೆರೂರ, ಹಣಮಂತ ಕೊಣದಿ, ಅಲ್ಲಾಬಕ್ಷ ವಾಲಿಕಾರ, ಎ.ಬಿ.ನಾಯಿಕ, ಜಗದೀಶ ಬೋಳಸೂರ, ಡಿವೈಎಸ್ಪಿ ಬಸವರಾಜ ಯಲಿಗಾರ, ಸಿಪಿಐ ರವಿ ಯಡವನ್ನವರ, ಯು.ಐ.ಶೇಖ ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಸೇರಿದಂತೆ ೧೫೦೦ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಬಸವಚೇತನ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.