ಆಲಮಟ್ಟಿಗೆ ಡಿಸಿ ಡಾ.ಆನಂದ ಕೆ. ಭೇಟಿ : ಮಳೆಯಿಂದ ಬೆಳೆ ಹಾನಿ ಕುರಿತು ಶೀಘ್ರ ಜಂಟಿ ಸಮೀಕ್ಷೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಆಲಮಟ್ಟಿ : ವಿಜಯಪುರ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಹಾನಿಗೀಡಾದ ಬೆಳೆಗಳ ಕುರಿತು ಶೀಘ್ರ ಜಂಟಿ ಸಮೀಕ್ಷೆ ನಡೆಸಿ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ.ಹೇಳಿದರು.
ಸೋಮವಾರ ಆಲಮಟ್ಟಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ ಅವರು, ಜಿಲ್ಲೆಯಲ್ಲಿ ಮಳೆಯಿಂದಾಗಿ ವಿವಿಧ ಸ್ತರದ ಬೆಳೆಗಳು ಹಾನಿಯಾಗಿರುವ ಮಾಹಿತಿ ಇದ್ದು,ಕೂಡಲೇ ಸಮೀಕ್ಷೆ ಕೈಗೊಳ್ಳಲು ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ಬೆಳೆ ಹಾನಿಗೀಡಾದ ರೈತರಿಗೆ ಮಾರ್ಗಸೂಚಿಯನ್ವಯ ಪರಿಹಾರ ತಂತ್ರಾಂಶ ಮೂಲಕ ರೈತರ ಖಾತೆಗೆ ಪರಿಹಾರ ಹಣ ಜಮೆ ಮಾಡಲಾಗುವುದು ಎಂದರು.
ಪಿಒಪಿ ಗಣೇಶ ಮೂತಿ೯ ನಿಷೇಧ :
ಜಿಲ್ಲೆಯಾದ್ಯಂತ ಪಿಒಪಿ ಗಣೇಶ ಮೂತಿ೯ಗಳ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ.ಈಗಾಗಲೇ ಈ ಕುರಿತು ಪೂರ್ವಭಾವಿ ಸಭೆ ನಡೆಸಲಾಗಿದೆ. ನಗರ,ಸ್ಥಳೀಯ ಸಂಸ್ಥೆಗಳಿಗೂ ಈ ಬಗ್ಗೆ ಸೂಚನೆ ನೀಡಲಾಗಿದೆ. ಪಿಒಪಿ ಗಣೇಶ ಮೂತಿ೯ಗಳ ಮೇಲೆ ಪೋಲಿಸ್ ಇಲಾಖೆ ಕಣ್ಣಾವಲು ನಿಗಾ ವಹಿಸಿದೆ. ಬುಧವಾರ ಕೂಡ ಸಮಗ್ರವಾಗಿ ಚಚಿ೯ಸಲು ಸಭೆ ನಡೆಸಲಾಗುತ್ತದೆ ಎಂದರು.
ಆಲಮಟ್ಟಿ ಜಲಾಶಯಕ್ಕೆ ಮುಖ್ಯಮಂತ್ರಿಗಳಿಂದ ಬಾಗಿನ ಅಪಿ೯ಸುವ ದಿನಾಂಕ ಇನ್ನೂ ನಿಗಿದಿಯಾಗಿಲ್ಲ ಎಂದು ಈ ವೇಳೆ ಡಿಸಿ ಡಾ.ಆನಂದ ಕೆ.ತಿಳಿಸಿದರು.