ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಆಲಮಟ್ಟಿ : ಶೈಕ್ಷಣಿಕ ಜ್ಞಾನ ವೃದ್ಧಿ ಹೆಚ್ಚಳಕ್ಕೆ ಸಹ ಪಠ್ಯೇತರ ಚಟುವಟಿಕೆಗಳು ಪೂರಕವಾಗಿವೆ. ಆ ನಿಟ್ಟಿನಲ್ಲಿ ಮಕ್ಕಳು ಓದಾಭ್ಯಾಸ ಶಿಕ್ಷಣದ ಜೊತೆಗೆ ಕಲೆ, ಸಂಗೀತ,ಯೋಗ,ಕ್ರೀಡೆಗಳಿಗೂ ಆದ್ಯತೆ ನೀಡಿ ಪ್ರಗತಿ ಕಂಡುಕೊಳ್ಳಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ.ಕೆ. ಆನಂದ ನುಡಿದರು.
ಆಲಮಟ್ಟಿಯಲ್ಲಿನ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ ಸೋಮವಾರ ಆರಂಭವಾದ ಆಂಧ್ರಪ್ರದೇಶ ಮತ್ತು ಕರ್ನಾಟಕದ ವಿವಿಧ ನವೋದಯ ಶಾಲೆಗಳ ವಲಯ ಮಟ್ಟದ ಎರಡು ದಿನಗಳ "ಶಿಕ್ಷಣದಲ್ಲಿ ಕಲೆ ಮತ್ತು ಕಲೋತ್ಸವ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂಥ ವೈವಿಧ್ಯತೆ ಕಲೆ,ಕಲೋತ್ಸವ ಮನಸ್ಸಿನ ಕೋಳಲಾಟವನ್ನು ನೀಗಿಸಿ ನವೀರೋತ್ಸವ ಮೂಡಿಸುವಲ್ಲಿ ಸಹಕಾರಿಯಾಗಿದೆ ಎಂದರು.
ಆತAಕದ ಛಾಯೆ,ಮಾನಸಿಕತೆಯ ಖಿನ್ನತೆದಂಥ ದುಗುಡ ದುಮ್ಮಾನಗಳ ಒತ್ತಡದಿಂದ ಪಾರಾಗಲು ಮಕ್ಕಳು ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು. ಅಕ್ಷರಗಳೊಂದಿಗೆ ಇಂಥ ವಿಶೇಷ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಶಿಕ್ಷಣದ ಜೀವನ ಉಲ್ಲಾಸ,ಉತ್ಸಾಹ ಕಾಣಬೇಕು. ಕಲೋತ್ಸವದ ಅಭಿರುಚಿ ವಿಶಿಷ್ಟ ಭಾವಲೋಕ ಮೇಳೈಸುತ್ತದೆ. ವಿದ್ಯಾಭ್ಯಾಸದ ಪ್ರಗತಿ ಸಾಧಿಸಲು ಪ್ರೇರೇಪಿಸುತ್ತದೆ. ಜೊತೆಗೆ ಆರೋಗ್ಯಕರ ಅಭ್ಯಾಸಗಳೊಂದಿಗೆ ಜೀವನಪಥ ಸಾಗಿಸಲು ಉತ್ತೇಜಿಸುತ್ತದೆ ಎಂದರು.
ಇಲ್ಲಿನ ನವೋದಯ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ.ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳಿಗೆ ಈ ನವೋದಯ ಶಾಲೆ ಅತ್ಯುತ್ತಮ ಜ್ಞಾನಾರ್ಜನೆ ದೀಕ್ಷೆ ನೀಡುವ ಶಾಲೆಯಾಗಿದೆ. ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿ ಹುದುಗಿರುವ ನಾನಾ ಕಲೆಗಳನ್ನು ಗುರುತಿಸಿ ಅನಾವರಣಿಸಲಾಗುತ್ತಿದೆ.ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಕಲಾ ಕೌಶಲ್ಯ ಅನವರಣಕ್ಕೆ ಇಂತಹ ಕಾರ್ಯಕ್ರಮ ವೇದಿಕೆಗಳಿಂದ ದೊರೆಯುತ್ತದೆ. ಪ್ರತಿಭಾನ್ವೇಷಣೆಯ ಪ್ರೋತ್ಸಾಹ ನವೋದಯದಲ್ಲಿ ವಿಶೇಷವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಕೆಬಿಜೆಎನ್‌ಎಲ್ ಮುಖ್ಯ ಎಂಜನಿಯರ್ ಡಿ. ಬಸವರಾಜ ಮಾತನಾಡಿ, ಸಮಾಜದ ಅಮೂಲ್ಯ ಸಂಪತ್ತು ಇಂದಿನ ಯುವ ಜನತೆಯಾಗಿದ್ದಾರೆ.ಕಾರಣ ಈ ಯುವ ಮಕ್ಕಳ ಶೈಕ್ಷಣಿಕ ವಿಕಾಸಕ್ಕೆ, ಸರ್ವಾಂಗೀಣ ಬೆಳವಣಿಗೆಗೆ ಉತ್ತಮ ಮಾರ್ಗದರ್ಶನ ನೀಡಬೇಕು. ಕಲಿಕಾ ಅಭಿವೃದ್ಧಿಗೆ ಓದುವುದರ ಜೊತೆಗೆ ಸಹಪಠ್ಯ ಚಟುವಟಿಕೆಗಳ ಆಸಕ್ತಿಯೂ ಇರಬೇಕು. ಮೊಬೈಲ್ ಗೀಳು, ವ್ಯಸನಾಸಕ್ತಿಯಿಂದ ಯುವಜನತೆ ದೂರ ಇದ್ದು ಇಂಥ ಕಲೋತ್ಸವದಲ್ಲಿ ತನ್ಮಯರಾಗಿ ತಮ್ಮದೇ ಸ್ವಂತಿಕೆ ವ್ಯಕ್ತಿತ್ವ ರೂಪಿಸಿಕೊಳ್ಳವುದು ಬಲು ಮುಖ್ಯ ಎಂದರು.
ನಿಡಗು0ದಿ ತಹಶೀಲ್ದಾರ ಎ.ಡಿ.ಅಮರಾವದಗಿ ವೇದಿಕೆಯಲ್ಲಿದ್ದರು.ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ಕೆ.ರಾಮಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎ.ಓ.ಇಟಗಿ, ಬಿ.ಸಿ.ಸಬರದ, ಮಂಜುನಾಥ ಟಿ.ಎಚ್. ಎಂ.ತಿಪ್ಪೇಸ್ವಾಮಿ, ಸಂಜೀವಕುಮಾರ ಜೋಡಟ್ಟಿ,ಹೇಮಲು ಪವಾರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಎರಡು ದಿನದ ಕಲೋತ್ಸವದಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕದ ೨೦ ಜವಾಹರ ನವೋದಯ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಕಲಾ,ಕೌಶಲ್ಯದ ನೈಪುಣ್ಯತೆಯನ್ನು ಅಚ್ಚುತನದಿಂದ ಪ್ರದರ್ಶನ ಮಾಡುತ್ತಾ ನೋಡುಗರ ಹೃನ್ಮನ ಸೆಳೆಯುತ್ತಿದ್ದಾರೆ. ನವೋದಯ ಶಾಲೆಯಲ್ಲಿಗ ನವ್ಯೋತ್ಸವದ ಕಲೋತ್ಸವ ಜನಮನ ಗಮನ ತಣಿಸುತ್ತಿದೆ.