ನಿಗದಿತ ಕಾಲಾವಧಿಯಲ್ಲಿ ಜನನ ಮರಣ ನೊಂದಣಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಜಿಲ್ಲೆಯಲ್ಲಿ ಜಗುರುವ ಪ್ರತಿಯೊಂದು ಜನನ ಮರಣ ಘಟನೆಗಳನ್ನು ನಿಗದಿತ ೨೧ ದಿನಗಳೊಳಗಾಗಿ ನೋಂದಣಿಗೆ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.
ಶನಿವಾರ ನಗರದ ಜಿಲ್ಲಾಧಿಕಾರಿಗಳ ಕೇಸ್ವಾನ್ ಕಚೇರಿ ಸಭಾಂಗಣದಲ್ಲಿ ವಿಡಿಯೋ ಸಂವಾದದ ಮೂಲಕ ನಡೆದ ಜನನ-ಮರಣ ನೊಂದಣಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಾ ಪಂಚಾಯತ್ ಕಾರ್ಯನಿವಾಹಕ ಅಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ೨೧ ದಿನಗಳೊಳಗಾಗಿ ಜನನ-ಮರಣ ನೊಂದಣಿಗೆ ಅಗತ್ಯ ಕ್ರಮ ವಹಿಸಬೇಕು. ತಾಲೂಕಾ ಮಟ್ಟದಲ್ಲಿ ತರಬೇತಿಯನ್ನು ಆಯೋಜಿಸಿ. ನೊಂದಣಿಯಾಗದೇ ಇರುವುದರಿಂದ ಉಂಟಾಗುವ ತೊಡಕುಗಳ ಕುರಿತು ಸೂಕ್ತ ತಿಳುವಳಿಕೆ ಮೂಡಿಸಿ ನಿಗದಿತ ಕಾಲಾವಧಿಯಲ್ಲಿ ಜನನ-ಮರಣ ನೊಂದಣಿಯಾಗುವಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಪಾಲಕರ ವಿದ್ಯಾರ್ಹತೆ, ಉದ್ಯೋಗ, ಮರಣ ಹೊಂದಿದವರ ವಯಸ್ಸು ಸರಿಯಾಗಿ ನಿರ್ವಹಿಸದೇ ಇರುವುದರಿಂದ ಮಾಹಿತಿ ಕ್ರೋಢಿಕರಣಕ್ಕೆ ಸಮಸ್ಯೆಯಾಗುತ್ತದೆ. ಮಾಹಿತಿದಾರರ ಕಾಲಂನಲ್ಲಿ ಜನನ ಹಾಗೂ ಮರಣ ಸಂಬಂಧಿಸಿದಂತೆ ಅವರ ಸಂಬಂಧಿಕರಿಂದ ಕಡ್ಡಾಯವಾಗಿ ಸಹಿ ಪಡೆಯಬೇಕು ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಾಗುವ ಜನನ,-ಮರಣ ಹಾಗೂ ನಿರ್ಜೀವ ಜನನ ಘಟನೆಗಳನ್ನು ನಿಗದಿತ ಅವಧಿಯಲ್ಲಿಯೇ ದಾಖಲಿಸಿ, ಅನುಮೋದಿಸಬೇಕು. ಆರೋಗ್ಯ ಸಂಸ್ಥೆಗಳ ವೈದ್ಯಾಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಯ ಆರೋಗ್ಯ ನಿರೀಕ್ಷಕರು ಯಾವುದೇ ಕಾರಣಕ್ಕೂ ಜನನ ಮರಣ ಘಟನೆ ಸಂಭವಿಸಿ ೩೦ ದಿನಗಳ ನಂತರ ದಾಖಲಿಸಬಾರದು. ಅನಿವಾರ್ಯವಾಗಿ ೩೦ ದಿನಗಳ ನಂತರ ೩೬೫ ದಿನಗಳ ಒಳಗಾಗಿ ದಾಖಲಿಸಬೇಕಾಗಿ ಅನಿವಾರ್ಯತೆ ಇದ್ದಲ್ಲಿ ಗ್ರಾಮಾಂತರ ಪ್ರದೇಶಕ್ಕೆ ಸಂಬಂಧಿಸಿದಂತೆ ತಹಶೀಲದಾರರು ಹಾಗೂ ನಗರ/ಪಟ್ಟಣ ಪ್ರದೇಶಕ್ಕೆ ಸಂಬಂಧಪಟ್ಟಲ್ಲಿ ಆಯುಕ್ತರು, ಮಹಾನಗರ ಪಾಲಿಕೆ ಪಟ್ಟಣ ಪಂಚಾಯಿತಿಯ, ಮುಖ್ಯಾಧಿಕಾರಿಯವರ ಲಿಖಿತ ಅನುಮತಿ ಪಡೆದು ದಾಖಲಿಸಲು ಕ್ರಮ ವಹಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಆರೋಗ್ಯ ಸಂಸ್ಥೆಗಳಲ್ಲಿ ಜನನ ಮರಣ ಘಟನೆಗಳು ಸಂಭವಿಸಿ, ಯಾವುದೇ ಕಾರಣದಿಂದ ೩೬೫ ದಿನಗಳ ನಂತರವೂ ಇ-ಜನ್ಮ ತಂತ್ರಾಂಶದಲ್ಲಿ ದಾಖಲಿಸದೇ ಇದ್ದ ಸಂದರ್ಭದಲ್ಲಿ “ಆಸ್ಪತ್ರೆಯ ರಕ್ಷಾ ಸಮಿತಿ ನಿಧಿ”(ಎಆರ್.ಎಸ್) ಅನುದಾನ ಬಳಸಿ ಅಗತ್ಯ ಕ್ರಮ ವಹಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ, ತಾಲ್ಲೂಕುಗಳಲ್ಲಿ ಹಾಗೂ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ನೋಂದಣಿಯಾದ ಜನನ, ಮರಣ ವಿಳಂಬ ನೋಂದಣಿಯ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಸಂಖ್ಯಾಸಂಗ್ರಹಣಾಧಿಕಾರಿಗಳಿಗೆ ಸೂಚಿಸಿದರು.
ಜನನ-ಮರಣ, ನಿರ್ಜೀವ ಜನನ ಘಟನೆಗಳ ನೋಂದಣಿ ನಮೂನೆಗಳಾದ ೧, ೨ ಹಾಗೂ ೩ರ ಕಾನೂನು ಭಾಗ ಹಾಗೂ ಸಾಂಖ್ಯಿಕ ಭಾಗದ ಎಲ್ಲ ಕಾಲಂಗಳನ್ನು ಸ್ಪಷ್ಟವಾದ ಬರವಣಿಗೆಯಲ್ಲಿ ಹಾಗೂ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಬೇಕು. ಗ್ರಾಮಾಂತರ ಪ್ರದೇಶದ ಎಲ್ಲಾ ನೋಂದಣಿ ಹಾಗೂ ಉಪನೋಂದಣಾಧಿಕಾರಿಗಳಿಂದ ಆರೋಗ್ಯ ಸಂಸ್ಥೆಗಳು, ಸಂಬಂಧಿಸಿದ ತಹಶೀಲದಾರರು ಹಾಗೂ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ತಿಂಗಳ ೫ರೊಳಗಾಗಿ ಸಾಂಖ್ಯಿಕ ಭಾಗದ ಮಾಹಿತಿಯನ್ನು ಸ್ವೀಕರಿಸಿ, ಆ ಮಾಹೆಯ ೧೦ರೊಳಗಾಗಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಗೆ ಮಾಹಿತಿ ಸಲ್ಲಿಸಬೇಕು. ಪಟ್ಟಣ ಪ್ರದೇಶದ ನೋಂದಣಿದಾರರು ೧೦ನೇ ದಿನಾಂಕದೊಳಗಾಗಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಜಿಲ್ಲೆಯ ನೋಂದಣಾಧಿಕಾರಿಗಳು ಹಾಗೂ ಉಪನೋಂದಣಾಧಿಕಾರಿಗಳಿಗೆ ನಿಗದಿತ ಸಮಯದಲ್ಲಿ ಸಾಂಖ್ಯಿಕ ಭಾಗದ ಮಾಹಿತಿಯನ್ನು ಒದಗಿಸುವಂತೆ ಸೂಚಿಸಲಾಯಿತು.
೨೦೨೩ನೇ ಸಾಲಿನ ಅವಧಿ ಮುಕ್ತಾಯಗೊಂಡ ಗ್ರಾಮಾಂತರ ಪ್ರದೇಶದ ಜನನ-ಮರಣ ಹಾಗೂ ನಿರ್ಜೀವ ಜನನ ಘಟನೆಗಳ ಕಾನೂನು ಭಾಗಗಳನ್ನು ಗ್ರಾಮ ಆಡಳಿತಾಧಿಕಾರಿಯವರು ಮತ್ತು ಸರ್ಕಾರಿ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿಯವರು ತಹಶೀಲ್ದಾರ್‌ರವರಿಗೆ ಹಾಗೂ ಪಟ್ಟಣ-ನಗರ ಪ್ರದೇಶದ ಆರೋಗ್ಯ ಸಂಸ್ಥೆಯವರು ಕಾನೂನು ಭಾಗಗಳನ್ನು ಸಂಬಂಧಿಸಿದ ಮಹಾನಗರ ಪಾಲಿಕೆಯ ಆಯುಕ್ತರಿಗೆ, ಮುಖ್ಯಾಧಿಕಾರಿ ಪುರಸಭೆ/ಪಟ್ಟಣ ಪಂಚಾಯತ ಅವರಿಗೆ ಕಡ್ಡಾಯವಾಗಿ ಹಸ್ತಾಂತರಿಸುವ ಕುರಿತು ಅಗತ್ಯ ಕ್ರಮ ವಹಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತçದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕೆ.ಕೆ.ಚವ್ಹಾಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸಂಪತ ಗುಣಾರಿ, ಜಿಲ್ಲಾ ಸಂಖ್ಯಾ ಸಂಗ್ರಹಾಣಾಧಿಕಾರಿ(ಪ್ರ) ಅಲ್ತಾಫಅಹ್ಮದ ಬಾಶಾಲಾಲ ಮಣಿಯಾರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕ ಬಿ.ಎ.ಸೌದಾಗರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡ್ಡಮನಿ ಸೇರಿದಂತೆ ತಹಶೀಲದಾರರು, ತಾಲ್ಲೂಕು ಪಂಚಾಯತಿಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಪುರಸಭೆ,ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಉಪಸ್ಥಿರಿದ್ದರು.