ಶಿಕ್ಷಕರು ಕೇವಲಪಾಠ ಹೇಳುವವನಲ್ಲ, ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕಿನ ದಾರಿ ತೋರುವ ದೀಪ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಹೊರ್ತಿ:"ಶಿಕ್ಷಕನ ಪಾತ್ರ ಕೇವಲ ಪಾಠ ಹೇಳುವವನು ಮಾತ್ರವಲ್ಲ, ಬದಲಾಗಿ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕಿನ ದಾರಿ ತೋರಿಸುವ ದೀಪವಾಗಿದ್ದಾನೆ' ಎಂದು ನಿವೃತ್ತ ಶಿಕ್ಷಕ
ನಬಿಲಾಲ ಎಂ. ಹರನಾಳ ಹೇಳಿದ(ಅಭಿಪ್ರಾಯಪಟ್ಟ)ರು.
ಸಮೀಪದ ಕಪನಿಂಬರಗಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶುಕ್ರವಾರ ಸನ್ಮಾನ ಸ್ವೀಕರಿಸಿ ತಮ್ಮ ಅನುಭವ ಹಂಚಿಕೊಂಡರು.
ಗ್ರಾಮದ ಹಿರಿಯ ಬಿ.ಎನ್.ಮಹಿಷಿ ಮಾತನಾಡಿ ಹರನಾಳ ನಿಷ್ಠೆ ಮತ್ತು ಕಠಿಣ ಪರಿಶ್ರಮವು ಶಾಲೆಗೆ ಮಾದರಿಯಾಗಿದೆ. ಇಂಥಹ ಶಿಕ್ಷಕರು ಶಿಕ್ಷಣ ಕ್ಷೇತ್ರದಲ್ಲಿ ದೀಪಸ್ತಂಭರಾಗಿ ಇರುವಂತವರು,” ಎಂದರು
ಹಳೇ ವಿದ್ಯಾರ್ಥಿನಿ ರಕ್ಷಿತಾ ಜಾಧವ ಮತ್ತು ಪ್ರಣಾವತಿ ಕದಂ ಮಾತನಾಡಿ, “ಹರನಾಳ ಅವರು ಕಲಿಸಿದ್ದ ಪಾಠಗಳು,ಇಂದಿಗೂ ನಮ್ಮೊಂದಿಗೆ ಜೀವಂತವಾಗಿವೆ. ಜೀವನದ ಎಂಥಾ ಘಟ್ಟದಲ್ಲಾದರೂ ಅವರ ಮಾರ್ಗದರ್ಶನ ಮರೆಯಲಾಗದು'ಎಂದು ಭಾವನಾತ್ಮಕವಾಗಿ ಹೇಳಿದರು. ಶಾಲಾ ಮುಖ್ಯೋಪಾಧ್ಯಾಯ ಕೆ.ಜಿ.ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು
ಎನ್ ಎಂ.ಹರನಾಳರ ಶಿಕ್ಷಣ ಸೇವೆಯನ್ನು ಸ್ಮರಿಸಿ, ನುಡಿನಮನ ಸಲ್ಲಿಸಿದರು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.
ಈ ಕಾರ್ಯಕ್ರಮವು ಗ್ರಾಮ ಪಂಚಾಯಿತಿ ಅಧ್ಯಕ್ಷ ಜ್ಞಾನೇಶ್ವರ ಠೋಕೆ ರವರ ಅಧ್ಯಕ್ಷತೆಯಲ್ಲಿ ಜರುಗಿತು.ಶಾಲಾ ಮುಖ್ಯೋಪಾಧ್ಯಾಯ ಕೆ.ಜಿ.ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮದ ಪ್ರಮುಖರಾದ ಗಿರೀಶ್ ಗೌಡ ಬಿರಾದಾರ, ದಾದಾಸಾಹುಕಾರ ಖಾನಾಪುರ, ಕರಿಯಪ್ಪ ಹೊಸೂರು,ಮುಖ್ಯ ಶಿಕ್ಷಕಿ ಕೆ.ಎಸ್ ಮುರಾಳ, ಎ ಎನ್.ಬಿರಾದಾರ, ಸಂತೋಷ ಜಾಧವ, ಸಂತೋಷ ಬಿರಾದಾರ, ಎಸ್.ಎಚ್.ಸಿನಕೇಡ, ಗ್ರಾಮದ ಪ್ರಮುಖರು, ಪೋಷಕರು, ಸಹ ಶಿಕ್ಷಕರು ಹಾಗೂ ಗ್ರಾಮಸ್ಥರು ಮತ್ತು 100ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.