ರಾಷ್ಟ್ರೀಯ ಮಿಲಿಟರಿ ಶಾಲೆಗೆ ಕು.ರೋಹಿತ ಆಯ್ಕೆ

Jan 30, 2025 - 23:02
Jan 31, 2025 - 00:08
 0
ರಾಷ್ಟ್ರೀಯ ಮಿಲಿಟರಿ ಶಾಲೆಗೆ ಕು.ರೋಹಿತ ಆಯ್ಕೆ

ವಿಜಯಪುರ : ೨೦೨೫-೨೬ ನೆಯ ಸಾಲಿಗಾಗಿ ಭಾರತ ದೇಶಾದ್ಯಂತ ಕೇವಲ ಐದು ಶಾಲೆಗಳಿರುವ ಪ್ರತಿಷ್ಠಿತ ರಾಷ್ಟ್ರೀಯ ಮಿಲಿಟರಿ ಶಾಲೆಯ ೬ ನೆಯ ತರಗತಿಯ ಪ್ರವೇಶಕ್ಕಾಗಿ ೮/೧೨/೨೦೨೪ ರಂದು ನಡೆದ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿರುವ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸೆಸ್ ನ ವಿದ್ಯಾರ್ಥಿ ಕು.ರೋಹಿತ ರಾಜು ಚವ್ಹಾಣ ಒಟ್ಟು ೧೫೦ ಅಂಕಗಳಿಗೆ ೧೨೭ ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಆಯ್ಕೆಯಾಗಿ ಸಂಸ್ಥೆಯ ಕೀರ್ತಿ ಪತಾಕೆಯನ್ನು ನಾಡಿನಾದ್ಯಂತ ಪಸರಿಸಿದ್ದಾನೆ.                

\ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷ  ಸುರೇಶ ಜತ್ತಿ, ಪ್ರಧಾನ ಕಾರ್ಯದರ್ಶಿ ನೀಲಾ ಜತ್ತಿ, ಆಡಳಿತಾಧಿಕಾರಿ ಮಧು ಬಿರಾದಾರ, ಮುಖ್ಯ ಶಿಕ್ಷಕಿ ಸುಚಿತ್ರ ಹೊಸಮನಿ , ಸಂತೋಷ್ ಕುಲಕರ್ಣಿ, ವೃಂದಾ ಕುಲಕರ್ಣಿ, ರಾಜೇಶ್ವರಿ ಮುಳಜಿ, ಲಕ್ಷ್ಮಿ ಘಂಟಿ, ಪೃಥ್ವಿ, ಸೇರಿದಂತೆ ಶಿಕ್ಷಕ/ಶಿಕ್ಷಕಿಯೇತರ ಸಿಬ್ಬಂದಿ ವರ್ಗ, ಮುದ್ದು ಮಕ್ಕಳು, ಪಾಲಕರು ಹಾಗೂ ಸಂಸ್ಥೆಯ ಹಿತೈಷಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.