ಹುತಾತ್ಮರ ತ್ಯಾಗಕ್ಕೆ ಬೆಲೆ ಕಟ್ಟಲಾಗದು : ಸಿದ್ದಲಿಂಗ ಚೌಧರಿ

Jan 30, 2025 - 22:48
Jan 30, 2025 - 23:59
 0
ಹುತಾತ್ಮರ ತ್ಯಾಗಕ್ಕೆ ಬೆಲೆ ಕಟ್ಟಲಾಗದು : ಸಿದ್ದಲಿಂಗ ಚೌಧರಿ
ಸಿಂದಗಿ : ಭಾರತ ದೇಶದ ರಕ್ಷಣೆಯಲ್ಲಿ ಪ್ರಾಣ ತೆತ್ತವರ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಎಂದು ಗಣಿಹಾರ ಶಾಲೆ ಮುಖ್ಯ ಶಿಕ್ಷಕ ಸಿದ್ದಲಿಂಗ ಚೌಧರಿ ಹೇಳಿದರು.
ಗಣಿಹಾರ ಅವರಣದಲ್ಲಿ ಹಮ್ಮಿಕೊಂಡ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು ದೇಶ ರಕ್ಷಣೆಯಲ್ಲಿ ನೇತಾರರೆಷ್ಟೋ, ಜವಾನರೆಷ್ಟೊ? ಮಂದಿ ನಮ್ಮನ್ನಗಲ್ಲಿದ್ದಾರೆ. ಇವರ ತ್ಯಾಗಕ್ಕೆ ಬೆಲೆ ಕಟ್ಟಲಾಗದು, ಇವರು ಇಡೀ ರಾಷ್ಟ್ರದ ಹೆಮ್ಮೆ. ನಾವು ಇವರಿಗೆ ಎಷ್ಟು ಗೌರವ ಸಲ್ಲಿಸಿದರೂ ಅದು ಕಡಿಮೆಯೇ. ಇಂದು ಗಾಂಧೀಜಿ ಅವರು ನಮ್ಮನಗಲಿದ ದಿನ ಇದರ ಸ್ಮರಣೆಗಾಗಿ "ಹುತಾತ್ಮರ ದಿನ” ಎಂದು ಆಚರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಶಿಕ್ಷಕ ಕೆ.ಜಿ ಹತ್ತಳ್ಳಿ ಸ್ವಾತಂತ್ರ‍್ಯ ಪೂರ್ವದಲ್ಲಿ ಮಾತ್ರವಲ್ಲ, ಸ್ವಾತಂತ್ರ‍್ಯ ಬಂದ ನಂತರವೂ ಹಲವಾರು ಯೋಧರು ನಮ್ಮ ದೇಶದ ರಕ್ಷಣೆಗಾಗಿ ಬಲಿದಾನ ಕೊಟ್ಟಿದ್ದಾರೆ. ಇವರನ್ನು ಸ್ಮರಿಸಲು ಕೂಡಾ ಒಂದು ದಿನವಿದೆ. ಅದುವೇ ಜನವರಿ ೩೦. ಈ ದಿನವನ್ನು ಭಾರತದಲ್ಲಿ ಹುತಾತ್ಮರ ದಿನ ಅಥವಾ ಸರ್ವೋದಯ ದಿನವೆಂದು ಆಚರಿಸಲಾಗುತ್ತದೆ. ಆ ದಿನ ನಮ್ಮ ರಾಷ್ಟ್ರಕ್ಕಾಗಿ ಹುತಾತ್ಮರಾದ ಯೋಧರಿಗೆ, ಸ್ವಾತಂತ್ರ‍್ಯ ಹೋರಾಟಗಾರರಿಗೆ ಎಷ್ಟು ಗೌರವ ಸಲ್ಲಿಸದರು ಕಡಿಮೆಯೇ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರು ಮತ್ತು ಮಕ್ಕಳು ಮೇಣಬತ್ತಿ ಬೆಳಗಿಸಿ ನಮನ ಸಲ್ಲಿಸಿದರು. ಎಸ್ ಡಿ ಎಂ ಸಿ ಸದಸ್ಯ ದಾದಾಪೀರ ಅಂಗಡಿ, ಶಿಕ್ಷಕರಾದ ಜಿ ಎ ಮುಲ್ಲಾ, ಪ್ರಕಾಶ ಎಸ್ ಓ,ಸಿ ಎಸ್ ಬೊಮ್ಮಣ್ಣಿ, ಪುಷ್ಪಾ ಸಂಕನಾಳ, ಎನ್ ಎಲ್ ಟೇಲರ್,ಜಿ ಎ ಮುಲ್ಲಾ, ಎಸ್ ಜಿ ನಾಟಿಕಾರ,ಎಸ್ ಎಸ್ ಬಿರಾದಾರ, ಆರ್ ಸಿ ಗಬ್ಬೂರ, ಸಾಹೇಬ ಪಟೇಲ್,ರೇಣುಕಾ ಪಟ್ಟಣಶೆಟ್ಟಿ, ಆರ್ ಜಿ ಬಿರಾದಾರ, ಅಬ್ದುಲಸಾಬ ದೇವರಮನಿ, ಎಸ್ ಸಿ ಬಿರಾದಾರ,ಎಂ ಡಿ ಕೆರಕಿ , ಎ ಎಸ್ ಮುಲ್ಲಾ ಎಸ್ ಎಂ ಇನಾಮದರ, ಎಂ ಜಿ ಮಲ್ಲಾಡಿ, ರುಭಿನಾ ಕೋಲಾರ, ಮುಬಿನಾ, ಸಲ್ಮಾ,ಭೀಮಣ್ಣ ನನಶೆಟ್ಟಿ ಸೇರಿದಂತೆ ಮತ್ತಿತ್ತರಿದ್ದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.