ಸಿದ್ದರಾಮಯ್ಯನವರ ಕನಸಿನ ಕೂಸು ನಮ್ಮ ಕ್ಲಿನಿಕ್ : ಶಾಸಕ ಅಶೋಕ ಮನಗೂಳಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಸಿಂದಗಿ; ಬಡವರಿಗೆ ತ್ವರಿತ ಗತಿಯಲ್ಲಿ ಆರೋಗ್ಯ ಸೇವೆ ಪಡೆಯಲು ಪ್ರತಿ ೨-೩ ವಾರ್ಡುಗಳ ಜನರಿಗೆ ಅನುಕೂಲವಾಗಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸ್ಸಿನ ಕೂಸು ನಮ್ಮ ಕ್ಲಿನಿಕ್ ಆದರೆ ರೂ ೨೦ ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ತಾಯಿ ಮಕ್ಕಳ ಆಸ್ಪತ್ರೆ ಮಾಡುವ ನನ್ನ ಕನಸ್ಸಾಗಿದೆ ಎಂದು ಶಾಸಕ ಅಶೋಕ ಎಮ್ ಮನಗೂಳಿ ಹೇಳಿದರು.
ಪಟ್ಟಣದ ಕನಕದಾಸ ಬಡಾವಣೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ತಾಲೂಕು ಆಸ್ಪತ್ರೆ ಇವುಗಳ ಸಹಯೋಗದಲ್ಲಿ ಸರಕಾರದ ಮಹಾಂತಾಕ್ಷಿ ಯೋಜನೆಯಾದ ನಮ್ಮ ಕ್ಲಿನಿಕ್‌ನ್ನು ಉದ್ಘಾಟಿಸಿ ಮಾತನಾಡಿ, ಪಟ್ಟಣದ ಜನತೆಗೆ ಆರೋಗ್ಯ ಸೇವೆ ಮನೆ ಮನೆಗೆ ಸಿಗುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ನಮ್ಮ ಕ್ಲೀನಿಕ ತೆರೆಯುವ ಮಹಾದಾಸೆಯಿಂದ ಒಂದು ವಿದ್ಯಾನಗರ, ಬಂದಾಳ ಕ್ರಾಸ್, ಕನಕದಾಸ ಬಡಾವಣೆ ಹೀಗೆ ಮೂರು ನಮ್ಮ ಕ್ಲೀನಿಕ ಮಂಜೂರು ನೀಡಿದ್ದಾರೆ. ಅಲ್ಲದೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು ೧೦೦ ರಿಂದ ೧೨೦ ಹೆರಿಗೆ ಮತ್ತು ೭ ಸಿಜರಿನ್ ಅಲ್ಲದೆ ಜನತೆ ಆರೋಗ್ಯ ಚಿಕಿತ್ಸೆಯು ಕೂಡಾ ಸರಿಯಾದ ಚಿಕಿತ್ಸೆ ದೊರೆಯುತ್ತಿದೆ ಕಾರಣ ನಮ್ಮ ಕ್ಲಿನಿಕ್‌ದ ಚಿಕಿತ್ಸೆ ಪಡೆದುಕೊಂದು ರೋಗ ಮುಕ್ತ ಸಮಾಜ ನಿರ್ಮಾಣ ಮಾಡಿ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಎ.ಎ.ಮಾಗಿ ಮಾತನಾಡಿ, ಪಟ್ಟಣದ ಜನತೆಗೆ ತ್ವರಿತ ಗತಿಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಳ್ಳಲು ಸಾರ್ವಜನಿಕ ಆಸ್ಪತ್ರೆ ದೂರವಾಗುವ ಹಿನ್ನಲೆಯಲ್ಲಿ ಸರಕಾರ ಪ್ರತಿ ಮೂರು ವಾರ್ಡಿಗೊಂದು ನಮ್ಮ ಕ್ಲಿನಿಕ್‌ನ್ನು ಪ್ರಾರಂಭಿಸುತ್ತಿದೆ ಇಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲವಾಗಲಿದೆ ಇಲ್ಲ ಮುಖ್ಯ ವೈಧ್ಯಾಧಿಕಾರಿ, ರಸ್ತೆ ತಪಾಷಣೆ, ಸಕ್ಕರೆ ಕಾಯಿಲೆ ತಪಾಷಣೆ ಸೇರಿದಂತೆ ಅನೇಕ ರೋಗಗಳ ಲಕ್ಷಣಗಳನ್ನು ಚಿಕಿತ್ಸೆ ಪಡೆದುಕೊಳ್ಳಬಹುದು ಎಲ್ಲರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಜಿಲ್ಲಾ ಕೆಡಿಪಿ ಸದಸ್ಯ ನೂರಅಹ್ಮದ ಅತ್ತಾರ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶಾಂತೂ ರಾಣಾಗೋಳ, ಸತೀಶ ಕಕ್ಕಸಗೇರಿ, ಜಾಂಗೀರ ಸಿಂದಗಿಕರ, ವಿನಾಯಕ ಕುಲಕರ್ಣಿ, ಆಶ್ರಯ ಕಮಿಟಿ ಸದಸ್ಯ ಚನ್ನು ಗೋಣಿ, ಸಿದ್ದು ಮಲ್ಲೇದ, ಸಾಯಬಣ್ಣ ಪುರದಾಳ, ಮಹಾನಂದ ಬಮ್ಮಣ್ಣಿ, ಜಯಶ್ರೀ ಹದನೂರ, ಶಶಿಕಲಾ ಅಂಗಡಿ, ಸಿದ್ದು ಬೀರಗೊಂಡ, ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಸ್ವಾಗತಿಸಿ ನಿರೂಪಿಸಿದರು.