ಮುಗಳಖೋಡ ಪುರಸಭೆಗೆ ನೂತನ ಉಪಾಧ್ಯಕ್ಷರಾಗಿ ಲಕ್ಷ್ಮಿಬಾಯಿ ಶೇಗುಣಶಿ ಅವಿರೋಧವಾಗಿ ಆಯ್ಕೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಮುಗಳಖೋಡ: ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಅ.16ರಂದು ಉಪಾಧ್ಯಕ್ಷರ ಪುರಸಭೆಯ ಮಾಜಿ ಉಪಾಧ್ಯಕ್ಷೆ ಗಂಗವ್ವ ಹನುಮಂತ ಬೆಳಗಲಿ ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರಗೊಂಡ ಸ್ಥಾನಕ್ಕೆ ಆಗಸ್ಟ್ 16ರಂದು ಶನಿವಾರ ಉಪಾಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ರಾಯಬಾಗನ ಸುರೇಶ್ ಮುಂಜೆ ಅಧ್ಯಕ್ಷತೆಯಲ್ಲಿ ನಡೆಯಿತು.
ಸಾಮಾನ್ಯ ಮಹಿಳೆಯ ಸ್ಥಾನಕ್ಕೆ 8ನೇ ವಾರ್ಡಿನ ಸದಸ್ಯೆ ಲಕ್ಷ್ಮೀಬಾಯಿ ಶಿವಪ್ಪ ಶೇಗುಣಸಿ ಒಬ್ಬರೇ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವರೇ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರೆಂದು ತಹಶೀಲ್ದಾರ್ ಸುರೇಶ್ ಮುಂಜೆ ಘೋಷಣೆ ಮಾಡಿದರು.
ಕಂದಾಯ ನಿರೀಕ್ಷಕ ರಾಜು ದಾನೋಳ್ಳಿ, ಪುರಸಭೆ ಮುಖ್ಯಧಿಕಾರಿ ಉದಯಕುಮಾರ ಘಟಕಾಂಬಳೆ, ಗ್ರಾಮ ಆಡಳಿತಾಧಿಕಾರಿ ಎಸ್.ಎಸ್.ಹತ್ತರಕಿ ಕಾರ್ಯನಿರ್ವಹಿಸಿದರು.
ಅವಿರೋಧವಾಗಿ ಆಯ್ಕೆ ಮಾಡುವಾಗ ಪುರಸಭೆ ಅಧ್ಯಕ್ಷೆ ಶಾಂತವ್ವ ಗೋಕಾಕ, ರಾಜಶೇಖರ ನಾಯಿಕ, ಹಾಲಪ್ಪ ಶೇಗುಣಶಿ, ಚೇತನ್ ಯಡವಣ್ಣವರ, ಕೆಂಪಣ್ಣ ಅಂಗಡಿ, ಮಹಾಂತೇಶ ಯರಡತ್ತಿ, ಮಹಿಳಾ ಸದಸ್ಯರಾದ ಮಂಗಲ ಪನದಿ, ಸಾವಿತ್ರಿ ಯರಡತ್ತಿ, ಅನುಸೂಯಾ ಲಮಾನಿ, ನಿಕಟ ಪೂರ್ವ ಉಪಾಧ್ಯಕ್ಷೆ ಗಂಗವ್ವ ಬೆಳಗಲಿ, ಗೀತಾ ಪ್ರಧಾನಿ, ಪ್ರತಿಭಾ ಹೊಸಪೇಟಿ, ಐರವ್ವ ವಾಡೆನ್ನವರ ಸಭೆಯಲ್ಲಿ ಹಾಜರಿದ್ದರು.
ಸಭೆಗೆ ಗೈರಾದ ಸದಸ್ಯರು: ಸಂಜು ಕುಲಿಗೋಡ, ಪರಗೌಡ ಖೇತಗೌಡರ, ರಾವಸಾಬ ಗೌಲೆತ್ತಿಣ್ಣವರ, ಶೈಲಾ ತೂಗದಲಿ, ರಮೇಶ ಯಡವನ್ನವರ, ಬೀಮಪ್ಪ ಹಳಿಂಗಳಿ, ಮಹಾಂತೇಶ ಕುರಾಡೆ, ಅಂಜಲಿ ಕುಲಿಗೋಡ ಹಾಗೂ ಪರಶುರಾಮ ಕಡಕೋಳ ಗೈರಾಗಿದ್ದರು.
ಈ ಸಂದರ್ಭದಲ್ಲಿ ಕುಡಚಿ ಮಂಡಲ ಅಧ್ಯಕ್ಷ ಶ್ರೀಧರ ಮೂಡಲಗಿ, ಪುರಸಭೆಯ ಮಾಜಿ ಸದಸ್ಯ ಗೌಡಪ್ಪ ಖೇತಗೌಡರ, ಶಿವಾನಂದ ಮೇಕ್ಕಳಕಿ, ಕೃಷ್ಣರಾವ್ ನಾಯಿಕ, ಭೀಮಶಿ ಬನಶಂಕರಿ, ಪಿಕೆಪಿಎಸ್ ಸಂಘದ ಅಧ್ಯಕ್ಷ ಶಿವಾನಂದ ಗೋಕಾಕ, ಪ್ರತಾಪ ಶೇಗುಣಶಿ, ಅಗ್ರಾಣಿ ಶೇಗುಣಶಿ, ಲಕ್ಷ್ಮಣ ಗೋಕಾಕ, ರಾವಸಾಬ ಐಗಳಿ, ಸಚಿನ್ ಪ್ರಧಾನಿ, ಪರಶುರಾಮ ಲಮಾನಿ, ಅಲ್ಲಪ್ಪ ಬೆಳಗಲಿ, ಕೇಶವ ವಾಡೆನ್ನವರ, ಮಹಾದೇವ ಶೇಗುಣಶಿ, ಅಶೋಕ ಬಾಗಿ, ಸಿದ್ದರಾಮ ಶೇಗುಣಶಿ ಇದ್ದರು.
ಪುರಸಭೆಯ ನೂತನ ಉಪಾಧ್ಯಕ್ಷರಾಗಿ ಲಕ್ಷ್ಮಿಬಾಯಿ ಶೇಗುಣಸಿ ಅವಿರೋಧವಾಗಿ ಆಯ್ಕೆ ಆಗುತ್ತಿದ್ದಂತೆ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು, ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲ್ ಎರಚಿ ಸಂಭ್ರಮಿಸಿದರು. ನಂತರ ಸದ್ಗುರು ಶ್ರೀ ಯಲ್ಲಾಲಿಂಗ ಪ್ರಭು ಮಹಾರಾಜರ ಮಠಕ್ಕೆ ಹೋಗಿ ಕರ್ತೃ ಗದ್ದಿಗೆಯ ದರ್ಶನ ಪಡೆದರು.
ಶ್ರೀ ಬೀರಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ:
ಆಯ್ಕೆ ಪ್ರಕ್ರಿಯೆಯ ಮೊದಲು ಪಟ್ಟಣದ ಶ್ರೀ ಬೀರಸಿದ್ದೇಶ್ವರ ದೇವಸ್ಥಾನದಲ್ಲಿ ಕುಡಚಿ ಮಂಡಲ ಅಧ್ಯಕ್ಷ ಶ್ರೀಧರ ಮೂಡಲಗಿ ಇವರ ನೇತೃತ್ವದಲ್ಲಿ ಪಕ್ಷದ ಗುರು -ಹಿರಿಯರ ಸಮ್ಮುಖದಲ್ಲಿ ನಾಮಪತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದಿಂದ ಪುರಸಭೆ ಕಾರ್ಯಾಲಯವರಿಗೆ ಪಾದಯಾತ್ರೆಯ ಮೂಲಕ ಬಂದು ನಾಮಪತ್ರ ಸಲ್ಲಿಸಿದರು.
ಹಾರೂಗೇರಿ ಪೊಲೀಸ್ ಠಾಣೆ ಎಎಸ್ಐ ಸೂರ್ಯವಂಶಿ ಶಿಂಗೆ, ಸಿದ್ದಪ್ಪ ಅಸ್ಕಿ, ಶಂಕರ ಜಂಬಗಿ ಹಾಗೂ ಸಿಬ್ಬಂದಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.