ಯುವ ಭಾರತದ ಶಕ್ತಿ ಜಗತ್ತಿಗೆ ತೋರಿಸಲು ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಿ : ಪ್ರಾಚಾರ್ಯ ಡಾ.ಎಸ್.ಬಿ. ಕಮತಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ದೇಶದಲ್ಲಿ ಶೇ. 65 ರಷ್ಟು ಜನ 35 ವಯಸ್ಸಿನವರು, 100 ಕೋಟಿ ವರ್ಕ್ ಪೋರ್ಸ್, ದೇಶದ ಒಟ್ಟು ಜಿಡಿಪಿಯಲ್ಲಿ 2.32 ರಷ್ಟು ಭಾರತ ಧಾರ್ಮಿಕ ಕ್ಷೇತ್ರಗಳಿಂದ ಬರುತ್ತದೆ ಜಗತ್ತಿನಲ್ಲಿ ಯಾವ ದೇಶದ ಬಳಿಯೂ ಇದಾವುದು ಇಲ್ಲ ಎಂದರೆ ಭಾರತದ ಶ್ರೀಮಂತಿಕೆಯ ಬಗ್ಗೆ ಒಮ್ಮೆ ಊಹಿಸಿಕೊಳ್ಳಿ ಎಂದು ಎ ಎಸ್ ಪಾಟೀಲ್ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಬಿ. ಕಮತಿ ಹೇಳಿದರು.
ನಗರದ ಬಿ.ಎಲ್ ಡಿ ಇ ಸಂಸ್ಥೆಯ ಎಸ್ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯ ಮತ್ತು ಎ ಎಸ್ ಪಾಟೀಲ ವಾಣಿಜ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ೭೯ ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಇಂದು ನಮ್ಮೆಲ್ಲರ ತಾಯಿ ಭಾರತ ಮಾತೆಗೆ ಗೌರವಿಸುವ ದಿನ ಭಾರತ ಜ್ಯಾತ್ಯಾತೀತ ರಾಷ್ಟ್ರ. ವಿವಿಧತೆಯನ್ನು ಏಕತೆಯ ಕಾಣಬೇಕಾದರೆ ಭಾರತ ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಭಾರತ ಹಲವು ರಾಷ್ಟ್ರ ಭಕ್ತರ ಫಲವಾಗಿ ಇಂದು ಸ್ವಾತಂತ್ರ್ಯವಾಗಿದೆ.
ಭಾರತ ಜಗತ್ತಿನ ಮೂರನೇ ಅತೀ ದೊಡ್ಡ ಅರ್ಥವ್ಯವಸ್ಥೆ ಆಗುವತ್ತ ದಾಪುಗಳು ಇಡುತ್ತಿದೆ. ಈ ಭವ್ಯ ಭಾರತ ಜಾತ್ಯತೀತ ರಾಷ್ಟ್ರವಾಗಿದೆ ಎಂದು ಹೆಮ್ಮೆಯಿಂಡೆ ಹೇಳುವೆ. ಜಗತ್ತಿನ ವಸಾಹತು ಶಾಹಿ ಭಾರತದ ಮೇಲೆ ಇನ್ನೂ ನಿಂತಿಲ್ಲ. ಸೈಬರ್ ಆಕ್ರಮಣ ಗಡಿ ನುಸುಳುವಿಕೆ ಮಾಡುತ್ತಿದ್ದಾರೆ. ಇದೆಲ್ಲಕ್ಕೂ ಆಪರೇಷನ್ ಸಿಂಧೂರ್ ನಲ್ಲಿ ವಿರೋಧಿಗಳಿಗೆ ಉತ್ತರ ಸಿಕ್ಕಿದೆ ಭಾರತ ಬಲಿಷ್ಠಗೊಂಡಿದೆ ಎನ್ನುವುದು ಜಗತ್ತಿಗೆ ಅರ್ಥವಾಗಿದೆ. ನಾವು ದೇಶಕ್ಕೆ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಯುವ ಸಮುದಾಯ ಹೊಸ ತಂತ್ರಜ್ಞಾನ, ಸಂಶೋಧನೆಯಲ್ಲಿ ತೊಡಗಿ ಭಾರತ ಶಕ್ತಿಯನ್ನು ಜಗತ್ತಿಗೆ ತೋರಿಸಬೇಕಿದೆ. ಜಗತ್ತಿಗೆ ನಾವು ಯುವ ಭಾರತದ ಜ್ಞಾನವನ್ನು ತೋರಿಸಬೇಕಿದೆ.
ದೇಶ ಮೊದಲು ಎನ್ನುವ ಧ್ಯೇಯವನ್ನು ನಮ್ಮೆಲ್ಲ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
*ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರೇಜರ್ಸ ಮತ್ತು ರೋವರ್ಸ ರಾಜ್ಯ ಪುರಸ್ಕಾರ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು ಹಾಗೂ ಎನ್ ಎಸ್ ಎಸ್ ಉತ್ತಮ ಸ್ವಯಂ ಸೇವಕ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಲಾಯಿತು.
ಈ ವೇಳೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ,ಉಪಪ್ರಾಚಾರ್ಯ ಡಾ.ಅನೀಲ.ಭೀ ನಾಯಕ, ಪಿಯುಸಿ ಪ್ರಾಚಾರ್ಯ ಪ್ರೊ.ಸಿ.ಬಿ ಪಾಟೀಲ, ಪ್ರೊ.ಎಸ್ ಜೆ ಜಿರಗಾಳಿ,ಎಸ್ ಎ ಪಾಟೀಲ,ದೈಹಿಕ ನಿರ್ದೇಶಕ ಎಸ್.ಕೆ ಪಾಟೀಲ ಡಾ.ಚಿದಾನಂದ ಬ್ಯಾಹಟ್ಟಿ ,ಪ್ರೊ.ಮುರುಗೇಶ ಪಟ್ಟಣಶೆಟ್ಟಿ ಎನ್ ಎಸ್ ಎಸ್ ಅಧಿಕಾರಿಗಳಾದ ಡಾ.ಮಿಲನ್ ರಾಠೋಡ್,ಡಾ.ತರನ್ನುಮ್ ಜಬೀನಖಾನ್ ,ಎನ್ ಸಿಸಿ ಅಧಿಕಾರಿ ಡಾ.ರಾಮಚಂದ್ರ ನಾಯಕ,ಮತ್ತು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿಗಳಾದ ಡಾ.ಅನೀಲ.ಭೀ.ನಾಯಕ ಮತ್ತು ಡಾ.ಉಷಾದೇವಿ ಹಿರೇಮಠ,ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್ ಪಾಟೀಲ,ಕಛೇರಿ ಅಧೀಕ್ಷಕ ಎಸ್ ಬಿ. ಹೇರಲಗಿ ,ಸೇರಿದಂತೆ ಮಹಾವಿದ್ಯಾಲಯ ಇನ್ನಿತರ ಬೋಧಕ & ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.