ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಡಾ.ಮನಗೂಳಿ ಚಾಲನೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಸಿಂದಗಿ: ಪಟ್ಟಣದ ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕ್ರಿಯೇಟಿವ್ ಕಿಡ್ಸ್ ಹೋಮ್ ಪೂರ್ವಪ್ರಾಥಮಿಕ ಶಾಲೆ ಮತ್ತು ಕ್ರಿಯೇಟಿಚ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಸಡಗರ ಸಂಭ್ರದಿ0ದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಚಾಲನೆ ನೀಡಿದರು.
ಶ್ರೀಕೃಷ್ಣ ವೇಷಧಾರಿ ಮಗು ಮೊಸರಿನ ಗಡಿಗೆ ಒಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಲಾ ಮಕ್ಕಳು ಕೃಷ್ಣ, ರಾಧೆಯರ ವೇಷದೊಂದಿಗೆ ಭಾಗವಹಿಸಿದ್ದರು. ತಾಯಂದಿರು ತಮ್ಮ ಮುದ್ದಿನ ಮಕ್ಕಳಿಗೆ ಬಾಲಕೃಷ್ಣ ರಾಧೆಯ ಅಲಂಕಾರ ಮಾಡಿ ಸಂಭ್ರಮಿಸಿದರು. ತಾಯಂದಿರು ಯಶೋಧೆಯ ವೇಷದೊಂದಿಗೆ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮನಗೂಳಿ ಆಸ್ಪತ್ರೆಯ ಮುಖ್ಯಸ್ಥೆ ಡಾ.ಸಂಧ್ಯಾ ಮನಗೂಳಿ ಅವರು ಶ್ರೀ ಕೃಷ್ಣನ ಕುರಿತು ಮಾತನಾಡಿದ ನಂತರ ಕೃಷ್ಣ, ರಾಧೆಯರ ವೇಷದೊಂದಿಗೆ ಭಾಗವಹಿಸಿದ ಮಕ್ಕಳ ಕುರಿತು ಮಾತನಾಡಿದರು. ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಪೂಜಾರ, ಕಾರ್ಯದರ್ಶಿ ಡಾ.ಜ್ಯೋತಿ ಪೂಜಾರ, ಶಿಕ್ಷಕಿಯರಾದ ಅಶ್ವಿನಿ ಲೋಣಿ, ಸಾದನಾ ಇಮಡೆ, ಮಂಗಲಾ ಬಮ್ಮಣ್ಣಿ, ದಾನಮ್ಮ ಕೋರಿ, ಪ್ರೀಯಾ ಪವಾಡೆ, ರೇವತಿ ಬಳೂಂಡಗಿ, ಸುಶ್ಮಿತಾ ಕೋರಿ, ಸಂಚಿತಾ ಸೂರಪೂರ, ಸಿಬ್ಬಂಧಿಗಳಾದ ಅಂಬಿಕಾರಿ ಕರಿಶೆಟ್ಟಿ, ಹೇಮಾ ಬಡಿಗೇರ, ರೆಹಮತ್ತಬಿ, ಆನಂದಯ್ಯಸ್ವಾಮಿ ಹಿರೇಮಠ ಹಾಗೂ ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.